For Quick Alerts
  ALLOW NOTIFICATIONS  
  For Daily Alerts

  ಬೆಳ್ಳಿತೆರೆಗೆ ಬಂಕಿಮಚಂದ್ರರ 'ಆನಂದಮಠ': ರಾಜಮೌಳಿ ಶಿಷ್ಯನಿಂದ '1770' ಸಿನಿಮಾ!

  |

  ಬಂಕಿಮ ಚಂದ್ರ ಚಟರ್ಜಿ ಬರೆದ 'ಆನಂದಮಠ' ಕಾದಂಬರಿಯನ್ನು ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ರಾಜಮೌಳಿ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅಶ್ವಿನ್ ಗಂಗರಾಜು ಪ್ರಯತ್ನಕ್ಕೆ ಕೈ ಹಾಕುತ್ತಿರುವ ನಿರ್ದೇಶಕ. ಈ ಹಿಂದೆ ರಾಜಮೌಳಿ ಜೊತೆ ಇವರ 'ಈಗ', 'ಬಾಹುಬಲಿ'ಯಂತಹ ಸಿನಿಮಾಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದರು.

  ಅಂದ್ಹಾಗೆ ಈ ಸಿನಿಮಾದ ಹೆಸರು '1770'. 75ನೇ ಸ್ವಾತಂತ್ರ್ಯೋತ್ಸದ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಅಧಿಕೃತವಾಗಾಗಿ ಘೋಷಣೆ ಮಾಡಲಾಗಿದೆ. ಅಲ್ಲದೇ ಈಗಲೇ ಈ ಸಿನಿಮಾ ಅನೌನ್ಸ್ ಮಾಡುವುದಕ್ಕೆ ಮತ್ತೊಂದು ಪ್ರಮುಖ ಕಾರಣ ಕೂಡ ಇದೆ. ವಂದೇ ಮಾತರಂಗೆ 150 ವರ್ಷ ಆಗಿದ್ದರಿಂದ ಈ ಚಿತ್ರದ ಮೋಷನ್ ಪೋಸ್ಟರ್ ಅನ್ನೂ ರಿಲೀಸ್ ಮಾಡಲಾಗಿದೆ.

  ತೆಲುಗು ಸಿನಿಮಾಗಳ ಸೋಲಿಗೆ ರಾಜಮೌಳಿ ಕಾರಣ ಎಂದಿದ್ದೇಕೆ ಆರ್‌ಜಿವಿ!

  ಬಂಕಿಮ ಚಂದ್ರ ಚಟರ್ಜಿ ಅವರ ಕಾದಂಬರಿ 'ಆನಂದಮಠ'ವನ್ನು ಸಿನಿಮಾ ಮಾಡೋಕೆ ಧೈರ್ಯಬೇಕು. ಅದಕ್ಕೆ ಹಣ್ಣ ಹೂಡುವವರೂ ಗಟ್ಟಿ ಇರಬೇಕು. ಅದೂ ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ಶೈಲೇಂದ್ರ ಕುಮಾರ್, ಸುಜಯ್ ಕುಟ್ಟಿ, ಕೃಷ್ಣಕುಮಾರ್ ಬಿ ಮತ್ತು ಸೂರಜ್ ಶರ್ಮ ನಿರ್ಮಿಸುತ್ತಿದ್ದಾರೆ. ಖ್ಯಾತ ಲೇಖಕ ಮತ್ತು ಚಿತ್ರ ನಿರ್ದೇಶಕ ರಾಮ್ ಕಮಲ್ ಮುಖರ್ಜಿ ಈ ಸಿನಿಮಾಗೆ ಮಾರ್ಗದರ್ಶಕರಾಗಿದ್ದಾರೆ.

  'ಆನಂದಮಠ ಕಾದಂಬರಿಯೇ ಯಾಕೆ?

  'ಆನಂದಮಠ ಕಾದಂಬರಿಯೇ ಯಾಕೆ?

  ಬಂಕಿಮ್ ಚಂದ್ರ ಚಟರ್ಜಿ ಬರೆದ 'ಆನಂದಮಠ' ಕಾದಂಬರಿಯಲ್ಲಿ ವಂದೇ ಮಾತರಂ ಕವನವನ್ನು ಪ್ರಕಟಿಸಲಾಗಿತ್ತು. ಇದು ಬ್ರಿಟಿಷರನ್ನು ಎದೆ ನಡುಗಿಸಿತ್ತು. ವಂದೇ ಮಾತರಂ ಬಂಕಿಮ ಚಂದ್ರ ಚಟರ್ಜಿಯವರು ದೇಶವನ್ನು ಒಗ್ಗೂಡಿಸಲು ರಚಿಸಿದ್ದ ಕವನ. ಈ ದೇಶವು ಬ್ರಿಟಿಷರಿಗೆ ಗುಲಾಮರಾಗಿದ್ದರಿಂದ ಭಾರತೀಯರನ್ನು ಒಗ್ಗೂಡಿಸಲು ಬಳಿಸದ ಒಂದು ಮಂತ್ರವಾಗಿತ್ತು. ಈ ಕಾರಣಕ್ಕೆ '1770' ಸಿನಿಮಾದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ವೀರ ಯೋಧರ ಕಥೆಯನ್ನು ಹೇಳುವುದಕ್ಕೆ ಚಿತ್ರತಂಡ ಹೊರಟಿದೆ.

  ವಿಜಯೇಂದ್ರ ಪ್ರಸಾದ್ ಕಥೆ-ಚಿತ್ರಕಥೆ

  ವಿಜಯೇಂದ್ರ ಪ್ರಸಾದ್ ಕಥೆ-ಚಿತ್ರಕಥೆ

  ಬಂಕಿಮ ಚಂದ್ರ ಚಟರ್ಜಿಯವರ 'ಆನಂದಮಠ' ಕಾದಂಬರಿಯನ್ನು ಆಧರಿಸಿದ ಈ ಸಿನಿಮಾಗೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಹೆಣೆದಿದ್ದಾರೆ. ಇದು ಸಿನಿಮಾದ ಮೊದಲ ಹೈಲೈಟ್. ಈಗಾಗಲೇ ರಾಜಮೌಳಿ ಶಿಷ್ಯ ಅಶ್ವಿನ್ ಗಂಗರಾಜು 'ಆಕಾಶವಾಣಿ' ಅನ್ನೋ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. '1770' ಸಿನಿಮಾ ಅಶ್ವಿನ್ ಗಂಗರಾಜುಗೆ ನಿರ್ದೇಶಕರಾಗಿ ಎರಡನೇ ಸಿನಿಮಾ. "ಒಬ್ಬ ನಿರ್ದೇಶಕನಾಗಿ ಬೇರೆ ಕಾಲಘಟ್ಟದ ಭಾವನೆಗಳೇ ಹೆಚ್ಚಿರುವ ಹಾಗೂ ಆಕ್ಷನ್ ದೃಶ್ಯಗಳಿಗೆ ಹೆಚ್ಚು ಮಹತ್ವ ಇರುವಂತಹ ಸಿನಿಮಾಗಳನ್ನು ನಿರ್ದೇಶಿಸಬೇಕು ಎಂಬ ಆಸೆಯಿದೆ. ಈ ಕಥೆಯಲ್ಲಿ ಎಲ್ಲವೂ ಇದೆ. ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಬೇಕು ಎನ್ನುವುದು ನಿರ್ಮಾಪಕರ ಕನಸಾಗಿದ್ದು, ಆ ಕನಸನ್ನು ನನಸು ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ಪರಿಪೂರ್ಣವಾಗಿ ನಿಭಾಯಿಸುತ್ತೇನೆ ಎಂಬ ನಂಬಿಕೆ ನನಗಿದೆ' ಎನ್ನುತ್ತಾರೆ ಆಶ್ವಿನ್.

  '1770' ದೊಡ್ಡ ಬಜೆಟ್ ಸಿನಿಮಾ

  '1770' ದೊಡ್ಡ ಬಜೆಟ್ ಸಿನಿಮಾ

  ಅಶ್ವಿನ್ ಗಂಗರಾಜು ನಿರ್ದೇಶಿಸುತ್ತಿರುವ ಈ ಸಿನಿಮಾ ಬಿಗ್ ಬಜೆಟ್ ಸಿನಿಮಾ. ದೊಡ್ಡ ತಾರಾಗಣದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಅದರಲ್ಲೂ ಶೈಲೇಂದ್ರ ಕುಮಾರ್ ಹಾಗೂ ಸುಜಯ್ ಕುಟ್ಟಿಯವರಿಗೆ ಸಿನಿಮಾದಲ್ಲಿ ಅವರದ್ದೇ ಆದ ಅನುಭವಗಳಿವೆ. ಸುಜಯ್ ಕುಟ್ಟಿ ಈ ಹಿಂದೆ ಜೀ ಸ್ಟುಡಿಯೋಸ್ ಸಂಸ್ಥೆಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದವರು. 'ಮಣಿಕರ್ಣಿಕಾ - ದಿ ಕ್ವೀನ್ ಆಫ್ ಜಾನ್ಸಿ' ಮುಂತಾದ ಚಿತ್ರದ ನಿರ್ಮಾಣದಲ್ಲಿ ಗುರುತಿಸಿಕೊಂಡಿದ್ದಾರೆ. '1770' ಸಿನಿಮಾ ನಿರ್ಮಿಸಿದರೆ, ಅದಕ್ಕೆ ವಿಜಯೇಂದ್ರ ಪ್ರಸಾದ್ ಅವರೇ ಬರೆಯಬೇಕು ಎಂದು ಮೊದಲೇ ಅಂದುಕೊಂಡಿದ್ದರು. ಈಗ ಅವರು ಒಪ್ಪಿ ಸಿನಿಮಾ ಮಾಡುತ್ತಿದ್ದಾರೆ.

  Recommended Video

  ಪ್ರೋಡ್ಯೂಸರ್ ಮಾತು ಕೇಳಿ ಎದ್ದು ಬಿದ್ದು ನಕ್ರು ಜನ | Gaalipata 2 | Ramesh Reddy *Press Meet
  ಇದು ಪ್ಯಾನ್ ಇಂಡಿಯಾ ಸಿನಿಮಾ

  ಇದು ಪ್ಯಾನ್ ಇಂಡಿಯಾ ಸಿನಿಮಾ

  '1770' ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ಹಿಂದಿಯಲ್ಲಿ ಏಕಕಾಲಕ್ಕೆ ಇದು ತೆರೆಗೆ ಬರುತ್ತಿದೆ. ದಸರಾ ಹೊತ್ತಿಗೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಆಯ್ಕೆಯಾಗಿದ್ದು, ದೀಪಾವಳಿ ವೇಳೆಗೆ ಅಧಿಕೃವಾಗಿ ಘೋಷಣೆಯಾಗುವ ಸಾಧ್ಯತೆಯಿದೆ.

  English summary
  SS Rajamouli Assistant Ashwin Gangaraju New Movie 1770 Screenplay By Vijayendra Prasad, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X