SSMB28: ಮಹೇಶ್ ಬಾಬು- ತ್ರಿವಿಕ್ರಮ್ ಸಿನಿಮಾ ರಿಲೀಸ್ ಪೋಸ್ಟ್‌ಪೋನ್!
ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಹ್ರಾಟ್ರಿಕ್ ಕಾಂಬಿನೇಷನ್ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಫಸ್ಟ್ ಶೆಡ್ಯೂಲ್ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ. ಚಿತ್ರದಲ್ಲಿ ಟಾಲಿವುಡ್ ಪ್ರಿನ್ಸ್ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ.

'ಅತಡು' ಹಾಗೂ 'ಖಲೇಜಾ' ಸಿನಿಮಾಗಳ ನಂತರ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಒಟ್ಟಿಗೆ ಕೈ ಜೋಡಿಸಿದ್ದಾರೆ. ಸಿನಿಮಾ ಟೈಟಲ್ ಇನ್ನು ಫೈನಲ್ ಆಗಿಲ್ಲ. ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಈ ಆಕ್ಷನ್ ಎಂಟರ್‌ಟೈನರ್ ಚಿತ್ರವನ್ನು ತ್ರಿವಿಕ್ರಮ್ ಕಟ್ಟಿಕೊಡುತ್ತಿದ್ದಾರೆ. ಬಹಳ ಸ್ಟೈಲಿಶ್ ಲುಕ್‌ನಲ್ಲಿ ಮಹೇಶ್ ಬಾಬು ಕ್ಯಾಮರಾ ಮುಂದೆ ನಿಂತಿದ್ದಾರೆ. ಆದರೆ ಈ ಸಿನಿಮಾ ರಿಲೀಸ ಡೇಟ್ ಪೋಸ್ಟ್ ಪೋನ್ ಆಗುವ ಸುಳಿವು ಸಿಗುತ್ತಿದೆ.
ಮುಂದಿನ ವರ್ಷ ಸಮ್ಮರ್ ಸ್ಪೆಷಲ್ ಆಗಿದೆ ಏಪ್ರಿನ್ 28ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಲಾಗಿತ್ತು. ಈಗಾಗಲೇ ಅಫೀಷಿಯಲ್ ಆಗಿ ಚಿತ್ರತಂಡ ರಿಲೀಸ್ ಡೇಟ್ ಕೂಡ ಘೋಷಿಸಿದೆ. ಆದರೆ ಶೂಟಿಂಗ್ ಪದೇ ಪದೇ ತಡವಾಗುತ್ತಿದೆ. ಫಸ್ಟ್ ಶೆಡ್ಯೂಲ್ ಮುಗಿಸಿ ಸೆಕೆಂಡ್ ಶೆಡ್ಯೂಲ್ ಶುರು ಮಾಡುವ ಮುನ್ನ ಮಹೇಶ್ ಬಾಬು ತಂದೆ ಕೃಷ್ಣ ಅವರನ್ನು ಕಳೆದುಕೊಂಡಿದ್ದಾರೆ. ಸದ್ಯ ಆ ನೋವಿನಿಂದ ಮಹೇಶ್ ಇನ್ನು ಹೊರ ಬರದ ಕಾರಣ SSMB28 ಶೂಟಿಂಗ್ ಮುಂದೂಡಿದ್ದಾರೆ.

ಹಾರಿಕಾ ಅಂಡ್ ಹಾಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಕ್ರೇಜಿ ಕಾಂಬಿನೇಷನ್ ಸಿನಿಮಾ ಮೂಡಿ ಬರ್ತಿದೆ. 'ಮಹರ್ಷಿ' ಚಿತ್ರದಲ್ಲಿ ಈ ಹಿಂದೆ ಮಹೇಶ್ ಬಾಬು ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದರು. ಪಿ. ಎಸ್ ವಿನೋದ್ ಛಾಯಾಗ್ರಹಣ, ಎಸ್. ತಮನ್ ಸಂಗೀತ SSMB28 ಚಿತ್ರಕ್ಕಿದೆ. ಮಹೇಶ್ ಬಾಬು ಚಿತ್ರಕ್ಕಾಗಿ 50 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಮೇಕಿಂಗ್ ಹಂತದಲ್ಲೇ SSMB28 ಸಿನಿಮಾ ಭಾರೀ ಸದ್ದು ಮಾಡ್ತಿದೆ. 'ಅಲಾ ವೈಕುಂಠಪುರಂಲೋ' ಬ್ಲಾಕ್ ಬಸ್ಟರ್ ನಂತರ ತ್ರಿವಿಕ್ರಮ್ ಶ್ರೀನಿವಾಸ್ ಈ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಸದ್ಯ ಸಿನಿಮಾ ಶೂಟಿಂಗ್ ತಡವಾಗುತ್ತಿರುವುದರಿಂದ ಈಗಾಗಲೇ ಘೋಷಿಸಿದಂತೆ ಏಪ್ರಿಲ್ 28ಕ್ಕೆ ಸಿನಿಮಾ ರಿಲೀಸ್ ಕಷ್ಟ ಎನ್ನಲಾಗುತ್ತಿದೆ. ಇನ್ನು ಚಿತ್ರದ ಕಥೆಯನ್ನು ಕೂಡ ಸಂಪೂರ್ಣವಾಗಿ ಬದಲಾಯಿಸಲಾಗುತ್ತಿದೆಯಂತೆ. ಪೂಜಾ ಹೆಗ್ಡೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಶೂಟಿಂಗ್ ತಡವಾಗುತ್ತಿದೆ.


Click it and Unblock the Notifications











