For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ 'ಪುಷ್ಪ' ಚಿತ್ರದಲ್ಲಿ ಬಾಲಿವುಡ್‌ನ ಜನಪ್ರಿಯ ನಟ ವಿಲನ್?

  |

  ಅಲ್ಲು ಅರ್ಜುನ್ ಅವರ ಮುಂಬರುವ ಚಿತ್ರ 'ಪುಷ್ಪ' ಈಗಾಗಲೇ ಭರ್ಜರಿ ಸದ್ದು ಮಾಡುತ್ತಿದೆ. ಅಲ್ಲು ಅರ್ಜುನ್ ಜನ್ಮದಿನದ ಪ್ರಯುಕ್ತ ಇತ್ತೀಚೆಗೆ ಚಿತ್ರತಂಡ 'ಪುಷ್ಪ' ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿತ್ತು. ಈ ಚಿತ್ರ ಕನ್ನಡಕ್ಕೂ ಡಬ್ ಆಗುತ್ತಿದೆ. ಈ ಮೂಲಕ ಅಲ್ಲು ಅರ್ಜುನ್ ಕನ್ನಡಕ್ಕೆ ಸಹ ಪಾದಾರ್ಪಣೆ ಮಾಡುತ್ತಿದ್ದಾರೆ.

  ಆನೆ ಜೊತೆ ಅಭಿಮಾನಿಯ ಟಿಕ್ ಟಾಕ್ ನೋಡಿ ಅಲ್ಲು ಅರ್ಜುನ್ ಫುಲ್ ಖುಷ್ | Tik Tok | Allu Arjun | Butta bomma | Telugu

  'ಪುಷ್ಪ' ಚಿತ್ರದ ಖಡಕ್ ಪೋಸ್ಟರ್ ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕುತ್ತಿದೆ. ಸಾಲು ಸಾಲು ಬ್ಲಾಕ್ ಬಸ್ಟರ್‌ಗಳನ್ನು ನೀಡುತ್ತಿರುವ ಅಲ್ಲು ಅರ್ಜುನ್ ಈ ಚಿತ್ರದ ಮೂಲಕ ಮತ್ತೊಂದು ಹಿಟ್ ನೀಡುವುದು ಖಾತರಿಯಾಗಿದೆ. 'ಅಲಾ ವೈಕುಂಠಪುರಮಲೂ' ಚಿತ್ರದ ನಂತರ ಸೆಟ್ಟೇರುತ್ತಿರುವ ಚಿತ್ರವಿದು. ಅಲ್ಲದೆ, ಪುಷ್ಪ ಅವರ 20ನೇ ಸಿನಿಮಾ. ಈ ಕಾರಣದಿಂದ ನಿರೀಕ್ಷೆಗಳ ಭಾರ ಹೆಚ್ಚಾಗಿದೆ. 'ಆರ್ಯ'ದಂತಹ ಬ್ಲಾಕ್ ಬಸ್ಟರ್ ಹಿಟ್ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದ ನಿರ್ದೇಶಕ ಸುಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮುಂದೆ ಓದಿ...

  ಮಹೇಶ್ ಬಾಬು ನಟಿಸಬೇಕಿದ್ದ 'ಪುಷ್ಪ' ಚಿತ್ರ ಅಲ್ಲು ಅರ್ಜುನ್ ಪಾಲಾಯಿತು: ಕಾರಣ ಇದು..ಮಹೇಶ್ ಬಾಬು ನಟಿಸಬೇಕಿದ್ದ 'ಪುಷ್ಪ' ಚಿತ್ರ ಅಲ್ಲು ಅರ್ಜುನ್ ಪಾಲಾಯಿತು: ಕಾರಣ ಇದು..

  ಸುನಿಲ್ ಶೆಟ್ಟಿ ಖಳನಾಯಕ?

  ಸುನಿಲ್ ಶೆಟ್ಟಿ ಖಳನಾಯಕ?

  ಅಲ್ಲು ಅರ್ಜುನ್ ಅವರ 'ಪುಷ್ಪ' ಚಿತ್ರದ ಪೋಸ್ಟರ್ ನೋಡಿದಾಗ ಇದೊಂದು ರೊಮ್ಯಾಂಟಿಕ್-ಆಕ್ಷನ್ ಚಿತ್ರ ಎಂಬ ಸುಳಿವು ನೀಡುತ್ತದೆ. ಅಲ್ಲು ಅರ್ಜುನ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರ ಎದುರು ಬಾಲಿವುಡ್‌ನ ಖ್ಯಾತ ನಟ ಸುನಿಲ್ ಶೆಟ್ಟಿ ಖಳನಾಯಕರಾಗಿ ನಟಿಸಲಿದ್ದಾರೆ ಎನ್ನಲಾಗಿದೆ.

  ಸುನಿಲ್ ಶೆಟ್ಟಿ ಜತೆ ಮಾತುಕತೆ

  ಸುನಿಲ್ ಶೆಟ್ಟಿ ಜತೆ ಮಾತುಕತೆ

  ಮೂಲಗಳ ಪ್ರಕಾರ ಪುಷ್ಪ ಚಿತ್ರದ ವಿಲನ್ ಪಾತ್ರಕ್ಕೆ ಸುನಿಲ್ ಶೆಟ್ಟಿ ಅವರನ್ನು ಕರೆತರಲು ಚಿತ್ರತಂಡ ಪ್ರಯತ್ನ ನಡೆಸಿದೆ. ಈ ಬಗ್ಗೆ ಸುನಿಲ್ ಶೆಟ್ಟಿ ಅವರ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಹಿಂದಿಯಲ್ಲಿ ನಾಯಕನಟರಾಗಿ ನಟಿಸಿದ್ದ ಸುನಿಲ್ ಶೆಟ್ಟಿ, ಇತ್ತೀಚೆಗೆ ಅನೇಕ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಅವರು 'ಪುಷ್ಪ'ದಲ್ಲಿ ಅಲ್ಲು ಅರ್ಜುನ್‌ಗೆ ಮುಖಾಮುಖಿಯಾದರೂ ಅಚ್ಚರಿಯಿಲ್ಲ.

  ಹುಟ್ಟುಹಬ್ಬಕ್ಕೆ ಅಲ್ಲು ಭರ್ಜರಿ ಗಿಫ್ಟ್: ಹೊಸ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ರಿಲೀಸ್ಹುಟ್ಟುಹಬ್ಬಕ್ಕೆ ಅಲ್ಲು ಭರ್ಜರಿ ಗಿಫ್ಟ್: ಹೊಸ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ರಿಲೀಸ್

  ಅರಣ್ಯಾಧಿಕಾರಿಯಾಗಿ ವಿಜಯ್ ಸೇತುಪತಿ

  ಅರಣ್ಯಾಧಿಕಾರಿಯಾಗಿ ವಿಜಯ್ ಸೇತುಪತಿ

  'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ಸ್ಮಗ್ಲರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ. ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಕೂಡ ಈ ಚಿತ್ರದಲ್ಲಿದ್ದಾರೆ. ಅವರು ಅರಣ್ಯಾಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ. ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಪ್ರಕಾಶ್ ರೈ, ಜಗಪತಿ ಬಾಬು ಕೂಡ ಚಿತ್ರತಂಡಲ್ಲಿದ್ದಾರೆ.

  ದರ್ಬಾರ್‌ನಲ್ಲಿ ವಿಲನ್ ಆಗಿದ್ದ ಸುನಿಲ್

  ದರ್ಬಾರ್‌ನಲ್ಲಿ ವಿಲನ್ ಆಗಿದ್ದ ಸುನಿಲ್

  ಸುನಿಲ್ ಶೆಟ್ಟಿ ಈ ಹಿಂದೆ ಎ.ಆರ್. ಮುರುಗದಾಸ್ ನಿರ್ದೇಶನದ, ರಜನಿಕಾಂತ್ ಮತ್ತು ನಯನತಾರಾ ನಟನೆಯ 'ದರ್ಬಾರ್' ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದರು. ಪ್ಯಾನ್ ಇಂಡಿಯಾ ಚಿತ್ರವಾಗಿರುವ ಪುಷ್ಪ ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.

  English summary
  Reports says bollywood actor Suniel Shetty will play villain role in Allu Arjun starrer Pushpa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X