Don't Miss!
- News
ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಜನ್ಮದಿನ: ತಂದೆ ತಾಯಿಯ ಸಮಾಧಿಗೆ ಪೂಜೆ ಸಲ್ಲಿಸಿದ ಸಿಎಂ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ಗೆ ಅವಕಾಶ ಇಲ್ಲ: ಬಿಸಿಸಿಐ ನೀಡಿದ ಭರವಸೆ ಏನು?
- Technology
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರಭಾಸ್ 'ರಾಧೆ ಶ್ಯಾಮ್' ವಿರುದ್ಧ ಸೂರ್ಯ, ಧನುಷ್, ರವಿತೇಜಾ ಸಿನಿಮಾ ರಿಲೀಸ್: ಗೆಲ್ಲೋರು ಯಾರು?
ಲವ್ ಸ್ಟೋರಿಯೊಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗುತ್ತಿದೆ. ಅದುವೇ 'ರಾಧೆ ಶ್ಯಾಮ್'. ಜನವರಿ ತಿಂಗಳ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಬೇಕಿದ್ದ ಈ ಸಿನಿಮಾ ಕೊರೊನಾ ಕಾರಣದಿಂದ ರಿಲೀಸ್ ಆಗಿಲ್ಲ. ಕೊನೆಗೂ 'ರಾಧೆ ಶ್ಯಾಮ್' ಮಾರ್ಚ್ 11 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ದುಬಾರಿ ಸಿನಿಮಾಗೆ ಪೈಪೋಟಿ ಕೊಡುವವರೇ ಯಾರೂ ಇಲ್ಲ ಎನ್ನುವಾಗಲೇ ನಾಲ್ಕೈದು ಬಿಗ್ ಸಿನಿಮಾಗಳು ಅಖಾಡಕ್ಕಿಳಿದಿವೆ.
ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಹಾಗೂ ಪೂಜಾ ಹೆಗ್ಡೆಅಭಿನಯದ ಸಿನಿಮಾ ಮುಂದೆ ಯಾವ ಸಿನಿಮಾ ನಿಲ್ಲುವುದಕ್ಕೆ ಸಾಧ್ಯ? ವಿಶ್ವದಲ್ಲಿರುವ ಬಹುತೇಕ ಚಿತ್ರಮಂದಿರಗಳನ್ನು ಈ ಸಿನಿಮಾವೇ ಕಬಳಿಸಿರುತ್ತೆ. ಅಲ್ಲದೆ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾಗೆ ದಕ್ಷಿಣ ಭಾರತದ ಸ್ಟಾರ್ ನಟರಾದ ಸೂರ್ಯ, ಧನುಷ್, ರವಿತೇಜ ಪೈಪೋಟಿ ನೀಡಲಿದ್ದಾರೆ.
'ರಾಧೆ
ಶ್ಯಾಮ್'
ಸಿನಿಮಾ
ಒಪ್ಪಿಕೊಂಡು
'ಬಿಗ್
ರಿಸ್ಕ್'
ತೆಗೆದುಕೊಂಡಿದ್ದೇನೆ
ಎಂದ
ಪ್ರಭಾಸ್

'ರಾಧೆ ಶ್ಯಾಮ್' ಸಿನಿಮಾಗೆ ಪೈಪೋಟಿ
ಪ್ರಭಾಸ್ ಸಿನಿಮಾ ಎಲ್ಲಾ ಅಡೆತಡೆಗಳನ್ನು ಎದುರಿಸಿ ರಿಲೀಸ್‌ಗೆ ರೆಡಿಯಾಗಿತ್ತು. ಕೊರೊನಾ, ರಾಜಮೌಳಿಯ RRR ಸಿನಿಮಾ ಎದುರಿಸಿ ಬಿಡುಗಡೆಯಾಗಬೇಕಿತ್ತು. ಆದ್ರೀಗ ರಾಜಮೌಳಿಯ RRR ಸಿನಿಮಾದಿಂದ ಮುಕ್ತಿ ಸಿಕ್ಕಿದೆ. RRRಗಿಂತ ಮೊದಲು 'ರಾಧೆ ಶ್ಯಾಮ್' ಸಿನಿಮಾ ಮೊದಲು ರಿಲೀಸ್ ಆಗುತ್ತಿದೆ. ಆದರೂ, 'ರಾಧೆ ಶ್ಯಾಮ್' ಸಿನಿಮಾಗೆ ಪೈಪೋಟಿ ಮಾತ್ರ ತಪ್ಪಿಲ್ಲ. ದಕ್ಷಿಣ ಭಾರತದ ಬಿಗ್ ಸ್ಟಾರ್ ಸಿನಿಮಾಗಳು ಒಂದೊಂದಾಗೇ ಬಿಡುಗಡೆಯಾಗುತ್ತಿದೆ. ಸೂರ್ಯ, ಧನುಷ್, ರವಿತೇಜಾ ಪೈಪೋಟಿ ನೀಡುವುದಕ್ಕೆ ಅಖಾಡಕ್ಕಿಳಿದಿದ್ದಾರೆ.

'ರಾಧೆ ಶ್ಯಾಮ್'ಗೆ ಮೂವರು ಟಕ್ಕರ್
ಸೂರ್ಯ ಅಭಿನಯದ ಸಿನಿಮಾ 'ET' ಮಾರ್ಚ್ 10ರಂದು ಬಿಡುಗಡೆಯಾಗಿದೆ. ಸುಮಾರು ಎರಡೂವರೆ ವರ್ಷಗಳ ಬಳಿಕ ಸೂರ್ಯ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದೆ. ಇದರೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಧನುಷ್ ಅಭಿನಯದ 'ಮಾರಾನ್' ಹಾಗೂ ರವಿತೇಜಾ ಅಭಿನಯದ 'ಖಿಲಾಡಿ' ಸಿನಿಮಾ ಕೂಡ ಮಾರ್ಚ್11 ರಂದು ರಿಲೀಸ್ ಆಗುತ್ತಿದೆ. ಈ ಮೂಲಕ 'ರಾಧೆ ಶ್ಯಾಮ್'ಗೆ ಒಟಿಟಿ ಕೂಡ ಕಾಂಪಿಟೇಷನ್ ನೀಡುತ್ತಿದೆ. ಹೀಗಾಗಿ ಜನರು ಯಾವ ಕಡೆ ವಾಲುತ್ತಾರೆ ಎನ್ನುವ ಕುತೂಹಲವಿದೆ.

'ರಾಧೆ ಶ್ಯಾಮ್' ಭರ್ಜರಿ ಬ್ಯುಸಿನೆಸ್
'ರಾಧೆ ಶ್ಯಾಮ್' ಆಂಧ್ರ ರಾಜ್ಯಗಳಲ್ಲಿ ಭರ್ಜರಿ ಬ್ಯುಸಿನೆಸ್ ಮಾಡಿದೆ. ಆಂಧ್ರದ ಎರಡು ರಾಜ್ಯಗಳಿಂದ ಸುಮಾರು 210 ಕೋಟಿ ಬ್ಯುಸಿನೆಸ್ ಮಾಡಿದೆ ಎನ್ನಲಾಗಿದೆ. ವಿತರಣೆ ಹಕ್ಕು ಅಂತಲೇ 100 ಕೋಟಿಯನ್ನು ಲೂಟಿ ಮಾಡಿದೆ. ಹೀಗಾಗಿ 'ರಾಧೆ ಶ್ಯಾಮ್' ಭರ್ಜರಿ ಬ್ಯುಸಿನೆಸ್ ಮಾಡಿದ್ದು, ಉಳಿದ ಭಾಷೆಗಳ ಪ್ರಿ-ರಿಲೀಸ್ ಬ್ಯುಸಿನೆಸ್ ಎಷ್ಟಾಗಿದೆ ಎಂಬುದು ಹೊರಬಿದ್ದಿಲ್ಲ. ಹೀಗಾಗಿ ಈ ಚಿತ್ರದ ಮೊದಲ ದಿನದ ಗಳಿಕೆಯ ಮೇಲೆ ಎಲ್ಲರ ಕಣ್ಣು ಬಿದ್ದಿದೆ.

ಬ್ರಿಟನ್‌ನಲ್ಲಿ 1 ಮಿಲಿಯನ್ ಟಿಕೆಟ್ ಸೇಲ್
ಪ್ರಭಾಸ್ ಸಿನಿಮಾ ಕೇವಲ ಭಾರತದಲ್ಲಷ್ಟೇ ಸದ್ದು ಮಾಡುತ್ತಿಲ್ಲ. ಜೊತೆಗೆ ವಿದೇಶದಲ್ಲಿ ದೊಡ್ಡ ಮೊತ್ತದಲ್ಲಿ ಟಿಕೆಟ್ ಸೇಲ್ ಆಗಿದೆ. ಬ್ರಿಟನ್ ಹಾಗೂ ಅಮೆರಿಕದಲ್ಲೂ 'ರಾಧೆ ಶ್ಯಾಮ್' ಸಿನಿಮಾಗೆ ಬೇಡಿಕೆ ಹೆಚ್ಚಿದೆ. ಟಿಕೆಟ್ ಖರೀದಿಯಲ್ಲಿ ಜನರು ದಾಖಲೆ ಮಾಡಿದ್ದಾರೆ. 'ರಾಧೆ ಶ್ಯಾಮ್' ಬಿಡುಗಡೆ ಇನ್ನು ಕೆಲವೇ ದಿನಗಳು ಬಾಕಿ ಇದೆ ಅನ್ನುವಾಗಲೇ ಪ್ರಿ ಬುಕಿಂಗ್ ಆರಂಭ ಆಗಿತ್ತು. ಬ್ರಿಟನ್‌ನಲ್ಲಿ ಮಾರ್ಚ್ 09ರ ವರೆಗೆ ಸುಮಾರು 1 ಮಿಲಿಯನ್ ಟಿಕೆಟ್‌ಗಳು ಸೇಲ್ ಆಗಿದ್ದು, ಅಮೆರಿಕದಲ್ಲೂ ಭರ್ಜರಿ ಮೊತ್ತದಲ್ಲಿ ಟಿಕೆಟ್ ಸೇಲ್ ಆಗಿದೆ ಎನ್ನಲಾಗಿದೆ.