For Quick Alerts
  ALLOW NOTIFICATIONS  
  For Daily Alerts

  ಮತ್ತೆ ಹರಿದಾಡುತ್ತಿದೆ ತಮನ್ನಾ-ವಿರಾಟ್ ಲಿಂಕ್ ಅಪ್ ಸುದ್ದಿ: ಫೋಟೋ ವೈರಲ್

  |

  ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸದ್ಯ ಅನುಷ್ಕಾ ಶರ್ಮಾ ಜೊತೆ ಮದುವೆಯಾಗಿ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ. ಅತ್ಯಂತ ಸಂತೋಷದಾಯಕ ಮತ್ತು ಸ್ಫೂರ್ತಿದಾಯಕ ಸೆಲೆಬ್ರಿಟಿ ದಂಪತಿಗಳಲ್ಲಿ ವಿರಾಟ್-ಅನುಷ್ಕಾ ಒಬ್ಬರಾಗಿದ್ದಾರೆ. ಅನೇಕ ವರ್ಷಗಳು ಪ್ರೀತಿಸುತ್ತಿದ್ದ ವಿರಾಟ್ ಮತ್ತು ಅನುಷ್ಕಾ 2017ರಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ.

  ತಮನ್ನಾ ಅವರ ಪ್ರತಿನಿತ್ಯದ ಫುಡ್ ಸ್ಟೈಲ್ ಹೇಗಿರುತ್ತೆ ? | TAMANNAAH | FILMIBEAT KANNADA

  ವಿರಾಟ್ ಕೊಹ್ಲಿ ನಟಿ ಅನುಷ್ಕಾ ಶರ್ಮಾ ಅವರನ್ನು ಪ್ರೀತಿಸುವ ಮೊದಲು, ಟಾಲಿವುಡ್ ನಟಿ ತಮನ್ನಾ ಜೊತೆ ವಿರಾಟ್ ಹೆಸರು ಕೇಳಿ ಬಂದಿತ್ತು. ತಮನ್ನಾ ಮತ್ತು ವಿರಾಟ್ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಈ ಸುದ್ದಿ ಈಗ ಮತ್ತೆ ಸದ್ದು ಮಾಡುತ್ತಿದೆ. ಲಾಕ್ ಡೌನ್ ಸಮಯದಲ್ಲಿ ಇಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುಂದೆ ಓದಿ...

  2012ರಲ್ಲಿ ವಿರಾಟ್-ತಮನ್ನಾ ಡೇಟಿಂಗ್ ಸುದ್ದಿ ವೈರಲ್

  2012ರಲ್ಲಿ ವಿರಾಟ್-ತಮನ್ನಾ ಡೇಟಿಂಗ್ ಸುದ್ದಿ ವೈರಲ್

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ, ಮಿಲ್ಕಿ ಬ್ಯೂಟಿ ತಮನ್ನಾ ಹೆಸರು ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಆಟಗಾರ ವಿರಾಟ್ ಕೊಹ್ಲಿ ಜೊತೆ ಲಿಂಕ್ ಅಪ್ ಆಗಿತ್ತು. ಅಂದು ಇಬ್ಬರ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿತ್ತು. ಅಂದ್ಹಾಗೆ ಇಬ್ಬರ ಲಿಂಕ್ ಅಪ್ ಗೆ ಕಾರಣವಾಗಿದ್ದು ಒಂದು ಜಾಹಿರಾತು. ವಿರಾಟ್ ಮತ್ತು ತಮನ್ನಾ ಜಾಹಿರಾತು ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆನಂತರ ಇಬ್ಬರ ಸ್ನೇಹ ನೋಡಿ ಇಬ್ಬರ ನಡುವೆ ಸಂಥಿಂಗ್ ಇದೆ ಎನ್ನುವ ಸುದ್ದಿ ಹರಿದಾಡಲು ಪ್ರಾರಂಭವಾಗಿತ್ತು.

  ಪಾಕ್ ಕ್ರಿಕೆಟಿಗನ ಜೊತೆ ತಮನ್ನಾ ಚಿತ್ರ ವೈರಲ್: ಏನೇನೋ ಊಹಾಪೋಹಪಾಕ್ ಕ್ರಿಕೆಟಿಗನ ಜೊತೆ ತಮನ್ನಾ ಚಿತ್ರ ವೈರಲ್: ಏನೇನೋ ಊಹಾಪೋಹ

  ತಮನ್ನಾ ಪ್ರತಿಕ್ರಿಯೆ ಹೀಗಿತ್ತು

  ತಮನ್ನಾ ಪ್ರತಿಕ್ರಿಯೆ ಹೀಗಿತ್ತು

  ಮೊದಲು ವಿರಾಟ್ ಜೊತೆಗಿನ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಲು ತಮನ್ನಾ ನಿರಾಕರಿಸುತ್ತಿದ್ದರು. ಆದರೆ ಆನಂತರದ ದಿನಗಳಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ತಮನ್ನಾ "ಜಾಹಿರಾತು ಚಿತ್ರೀಕರಣದ ಸಮಯದಲ್ಲಿ ನಾವು ಕೇವಲ ನಾಲ್ಕು ಪದಗಳನ್ನು ಮಾತ್ರ ಮಾತನಾಡಿದ್ದೇವೆ ಎಂದು ಭಾವಿಸುತ್ತೇನೆ. ಆ ನಂತರ ನಾನು ವಿರಾಟ್ ಅವರನ್ನು ಭೇಟಿಯಾಗಿಲ್ಲ. ಮಾತನಾಡಿಸಿಯೂ ಇಲ್ಲ. ಆದರೆ ಅವರ ಬಗ್ಗೆ ಒಂದು ಹೇಳಲು ಇಷ್ಟಪಡುತ್ತೇನೆ, ನಾನು ಕೆಲಸ ಮಾಡಿದ ಅನೇಕ ಕಲಾವಿದರಿಗಿಂತ ಉತ್ತಮರು" ಎಂದು ಹೇಳಿದ್ದರು.

  ಎರಡೂ ವರ್ಷದ ವದಂತಿಗೆ ಬ್ರೇಕ್

  ಎರಡೂ ವರ್ಷದ ವದಂತಿಗೆ ಬ್ರೇಕ್

  ವಿರಾಟ್ ಮತ್ತು ತಮನ್ನಾ ನಡುವಿನ ಡೇಟಿಂಗ್ ವದಂತಿ ಪ್ರಾರಂಭವಾಗಿ ಎರಡು ವರ್ಷದಲ್ಲಿಯೆ ತಣ್ಣಗಾಯಿತು. ಕಾರಣ ವಿರಾಟ್ 2014ರಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾರ ಪ್ರೀತಿಯಲ್ಲಿ ಬಿದ್ದರು. ಇತ್ತ ತಮನ್ನಾ ವಿದೇಶಿ ಮೂಲದ ವ್ಯಕ್ತಿ ಜೊತೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡಲು ಪ್ರಾರಂಭವಾಯಿತು. ಅಲ್ಲಿಗೆ ತಮನ್ನಾ ಮತ್ತು ವಿರಾಟ್ ಲಿಂಕ್ ಅಪ್ ವದಂತಿಗೆ ಬ್ರೇಕ್ ಬಿತ್ತು.

  2017ರಲ್ಲಿ ಅನುಷ್ಕಾ-ವಿರಾಟ್ ಮದುವೆ

  2017ರಲ್ಲಿ ಅನುಷ್ಕಾ-ವಿರಾಟ್ ಮದುವೆ

  ಅನುಷ್ಕಾ ಮತ್ತು ವಿರಾಟ್ ಇಬ್ಬರು 2017ರ ಡಿಸೆಂಬರ್ ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಸುಮಾರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಹಸೆಮಣೆ ಏರುವ ಮೂಲಕ ಎಲ್ಲಾ ಗಾಳಿಸುದ್ದಿಗಳಿಗೆ ತೆರೆ ಎಳೆದರು. ಅಂದ್ಹಾಗೆ ಅನುಷ್ಕಾ-ವಿರಾಟ್ ಇಟಲಿಯ ಮಿಲಾನ್ ನ ಬಳಿ ಇರುವ ಬೊರ್ಗೊ ಫಿನೋಕಿಯೊಟೊ ಎಂಬ ರೆಸಾರ್ಟ್ ನಲ್ಲಿ ಹಸೆಮಣೆ ಏರಿದ್ದಾರೆ.

  ಪಾಕಿಸ್ತಾನಿ ಕ್ರಿಕೆಟಿಗನ ಜೊತೆ ತಮನ್ನಾ ಹೆಸರು

  ಪಾಕಿಸ್ತಾನಿ ಕ್ರಿಕೆಟಿಗನ ಜೊತೆ ತಮನ್ನಾ ಹೆಸರು

  ನಟಿ ತಮನ್ನಾ ವಿವಾದ ಮತ್ತು ಗಾಳಿಸುದ್ದಿಗಳಿಂದ ದೂರ ಇರುವ ನಟಿ. ಸದಾ ಸಿನಿಮಾಗಳಲ್ಲಿ ಬ್ಯುಸಿ ಇರುವ ತಮನ್ನಾ ಹೆಸರು ಇತ್ತೀಚಿಗೆ ಪಾಕಿಸ್ತಾನಿ ಕ್ರಿಕೆಟಿಗನ ಜೊತೆ ಕೇಳಿ ಬರುತ್ತಿದೆ. ಪಾಕಿಸ್ತಾನಿ ಕ್ರಿಕೆಟಿಗ ಅಬ್ದುಲ್ ರಜಾಕ್ ಮತ್ತು ತಮನ್ನಾ ಪೋಟೋವೊಂದು ವೈರಲ್ ಆಗುತ್ತಿದ್ದಂತೆ ಇಬ್ಬರು ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಆದರೆ ಸುದ್ದಿಯನ್ನು ನಟಿ ತಮನ್ನಾ ತಳ್ಳಿಹಾಕಿದ್ದಾರೆ.

  English summary
  Tollywood Actress Tamanna and Cricketer Virat Kohli link up rumors doing rounds in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X