Don't Miss!
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹಲ್-ಚಲ್ ಎಬ್ಬಿಸಿದ ಸಮಂತಾ ಇನ್‌ಸ್ಟಾಗ್ರಾಂ ಪೋಸ್ಟ್: ಕೂಡಲೇ ಡಿಲೀಟ್!
ನಟಿ ಸಮಂತಾ ಏನು ಮಾಡಿದರೂ ಸುದ್ದಿಯೇ. ಅದರಲ್ಲೂ ಅವರ ಸಾಮಾಜಿಕ ಜಾಲತಾಣ ಪೋಸ್ಟ್‌ಗಳಂತೂ ಕ್ಷಣಾರ್ಧದಲ್ಲಿ ವೈರಲ್ ಆಗಿಬಿಡುತ್ತವೆ.
ಸಾಮಾಜಿಕ ಜಾಲತಾಣಗಳ ಮೂಲಕವೇ ಕೋಟ್ಯಂತರ ಹಣ ಗಳಿಸುವ ನಟಿಯರಲ್ಲಿ ಸಮಂತಾ ಸಹ ಒಬ್ಬರು. ಸಂಪಾದನೆ ಮಾತ್ರವೇ ಅಲ್ಲದೆ, ಸೆಲೆಬ್ರಿಟಿಗಳಿಗೆ ಸಾಮಾಜಿಕ ಜಾಲತಾಣವು ಸಾರ್ವಜನಿಕ ಅಭಿಪ್ರಾಯ ಮೂಡಿಸುವ ಸಾಧನವೂ ಆಗಿರುವ ಕಾರಣ ತಾವು ಹಂಚಿಕೊಳ್ಳುವ ಪೋಸ್ಟ್‌ಗಳ ಬಗ್ಗೆ ಹೆಚ್ಚು ಕಾಳಜಿವಹಿಸಿರುತ್ತಾರೆ. ಸಮಂತಾ ಸಹ ಇದಕ್ಕೆ ಹೊರತಲ್ಲ.
ಮೊದಲ
ಬಾಲಿವುಡ್
ಸಿನಿಮಾಕ್ಕೆ
ಸಹಿ
ಮಾಡಿದ
ಸಮಂತಾ!
ನಾಯಕ
ಯಾರು?
ಆದರೆ ಇದೀಗ ಸಮಂತಾರ ಇನ್‌ಸ್ಟಾಗ್ರಾಂ ಖಾತೆಯಿಂದ ಪೋಸ್ಟ್ ಆದ ಚಿತ್ರವೊಂದರಿಂದ ಭಾರಿ ಹಲ್-ಚಲ್ ಎದ್ದಿತ್ತು. ಸಮಂತಾರ ಪೋಸ್ಟ್ ನೋಡಿ ಚಿತ್ರರಂಗ ಮಾತ್ರವಲ್ಲ, ರಾಜಕೀಯ ರಂಗದಲ್ಲೂ ಚರ್ಚೆಗಳು ಎದ್ದಿದ್ದವು. ಆದರೆ ಕೂಡಲೇ ಸಮಂತಾರ ಖಾತೆಯಿಂದ ಪೋಸ್ಟ್ ಆದ ಆ ಚಿತ್ರವನ್ನು ಡಿಲೀಟ್ ಮಾಡಲಾಗಿದೆ.

ಸಿಎಂ ಪುತ್ರನ ಚಿತ್ರ ಹಂಚಿಕೊಂಡ ಸಮಂತಾ!
ಸಾಮಾಜಿಕ ಜಾಲತಾಣ ಮೂಲಕ ರಾಜಕೀಯ ಕುರಿತಾದ ಒಂದೂ ಪೋಸ್ಟ್ ಹಾಕದ ಸಮಂತಾ ಹಠಾತ್ತನೆ ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಪುತ್ರ ಕೆಟಿ ರಾಮಾ ರಾವ್ ಚಿತ್ರವನ್ನು ಹಂಚಿಕೊಂಡಿದ್ದರು. ಕೆ.ಟಿ.ರಾಮಾ ರಾವ್ ಕೈಮುಗಿದು ನಿಂತಿರುವ ಚಿತ್ರ ಸಮಂತಾರ ಇನ್‌ಸ್ಟಾಗ್ರಾಂನಿಂದ ಪೋಸ್ಟ್ ಆಗಿತ್ತು. ಚಿತ್ರಕ್ಕೆ ''ನನ್ನ ಪ್ರಜೆಗಳೇ ನನ್ನ ಬಲ, ನನ್ನ ಧೈರ್ಯ, ನನ್ನ ನಂಬಿಕೆ' ಎಂದು ತೆಲುಗಿನಲ್ಲಿ ಕ್ಯಾಪ್ಷನ್ ನೀಡಲಾಗಿತ್ತು. ಇದು ಸಮಂತಾ ಅಭಿಮಾನಿಗಳಲ್ಲಿ ಮಾತ್ರವಲ್ಲ ಹಲವರಿಗೆ ಗೊಂದಲ ಮೂಡಿಸಿತ್ತು.

ಸ್ಪಷ್ಟನೆ ನೀಡಿದ ಮ್ಯಾನೇಜರ್
ಚಿತ್ರ ಪೋಸ್ಟ್ ಆದ ಕೆಲವೇ ನಿಮಿಷಗಳಲ್ಲಿ ಚಿತ್ರವನ್ನು ಡಿಲೀಟ್ ಮಾಡಲಾಯ್ತು. ಆ ಬಳಿಕ ಸಮಂತಾರ ಸಾಮಾಜಿಕ ಜಾಲತಾಣ ಮೇಲುಸ್ತುವಾರಿ ನೋಡಿಕೊಳ್ಳುವ ತಂಡದ ಮ್ಯಾನೇಜರ್ ಶೆಶಾಂಕ್ ಬಿನೇಶ್, ಸ್ಪಷ್ಟನೆ ನೀಡಿ, ''ತಾಂತ್ರಿಕ ಕಾರಣಗಳಿಂದ ಫೋಟೊ ಒಂದು ಸಮಂತಾ ಖಾತೆಯಿಂದ ಕ್ರಾಸ್ ಪೋಸ್ಟ್ ಆಗಿತ್ತು, ಸಮಸ್ಯೆಯನ್ನು ಸರಿಪಡಿಸಲಾಗಿದೆ. ಅಡಚಣೆಗೆ ಕ್ಷಮೆ ಇರಲಿ. ಈ ತಾಂತ್ರಿಕ ದೋಷ ಹೇಗಾಯಿತು ಎಂಬ ಬಗ್ಗೆ ತನಿಖೆ ಪ್ರಾರಂಭವಾಗಿದೆ'' ಎಂದಿದ್ದಾರೆ.

ಸಾ.ಜಾಲತಾಣ ಖಾತೆ ಹ್ಯಾಂಡಲ್ ಮಾಡುವ ಸಂಸ್ಥೆಯ ಎಡವಟ್ಟು!
ಕೆಲವು ಮೂಲಗಳ ಪ್ರಕಾರ, ಸಮಂತಾ ಹಾಗೂ ಕೆಟಿ ರಾಮಾ ರಾವ್ ಅವರ ಸಾಮಾಜಿಕ ಜಾಲತಾಣ ಖಾತೆಯನ್ನು ಒಂದೇ ಸಂಸ್ಥೆ ನಿರ್ವಹಿಸುತ್ತಿದ್ದು, ಸಿಬ್ಬಂದಿ ಪೋಸ್ಟ್ ಮಾಡುವಾಗ ಕಣ್ತಪ್ಪಿನಿಂದ ಅಥವಾ ತಾಂತ್ರಿಕ ದೋಷದಿಂದ ಹೀಗೆ ಸಮಂತಾರ ಇನ್‌ಸ್ಟಾಗ್ರಾಂ ಖಾತೆಯಿಂದ ಕೆಟಿಆರ್ ಚಿತ್ರ ಪೋಸ್ಟ್ ಆಗಿದೆ ಎನ್ನಲಾಗುತ್ತಿದೆ. ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಸಾಮಾಜಿಕ ಜಾಲತಾಣ ಖಾತೆ ನಿರ್ವಹಿಸಲು ತಂಡವನ್ನು ನೇಮಿಸಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ.

ಸಾಮಾಜಿಕ ಜಾಲತಾಣ ಮೂಲಕ ಗಳಿಸುವ ನಟಿ
ಇನ್ನು ನಟಿ ಸಮಂತಾ, ಸಾಮಾಜಿಕ ಜಾಲತಾಣದ ಮೂಲಕ ಅತಿ ಹೆಚ್ಚು ಹಣ ಗಳಿಸುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಹಲವಾರು ಬ್ರ್ಯಾಂಡ್‌ಗಳ ಜಾಹೀರಾತನ್ನು ಸಮಂತಾ ಮಾಡುತ್ತಾರೆ. ಅಲ್ಲದೆ ಕೆಲವು ಸಿನಿಮಾಗಳ ಜಾಹೀರಾತು ಸಹ ಮಾಡುತ್ತಾರೆ. ಆಗಾಗ ತಮ್ಮ ಫಿಟ್‌ನೆಸ್ ವಿಡಿಯೋಗಳನ್ನು ಸಹ ಹಂಚಿಕೊಳ್ಳುತ್ತಾರೆ. ಸಮಂತಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದದ್ದಾರೆ. 'ಯಶೋಧ', 'ಖುಷಿ', 'ಶಾಕುಂತಲಂ' ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಜೊತೆಗೆ ಹಿಂದಿಯ ಎರಡು ಸಿನಿಮಾಗಳನ್ನು ಸಮಂತಾ ಒಪ್ಪಿಕೊಂಡಿದ್ದಾರೆ ಜೊತೆಗೆ ಇಂಗ್ಲೀಷ್‌ನ 'ಅರೇಂಜ್‌ಮೆಂಟ್ಸ್ ಆಫ್ ಲವ್' ಹೆಸರಿನ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.