ಮಹೇಶ್ ಬಾಬು ತಾಯಿ ಇಂದಿರಾ ದೇವಿ ನಿಧನ

ತೆಲುಗಿನ ಸ್ಟಾರ್ ನಟ ಮಹೇಶ್ ಬಾಬು ಅವರ ತಾಯಿ, ಸೂಪರ್‌ ಸ್ಟಾರ್ ಕೃಷ್ಣ ಅವರ ಪತ್ನಿ ಇಂದಿರಾ ದೇವಿ ಇಂದು (ಸೆಪ್ಟೆಂಬರ್ 28) ಬೆಳಿಗಿನ ಜಾವ 4 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.

ಕಳೆದ ಹಲವಾರು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಇಂದಿರಾ ದೇವಿ ಅವರನ್ನು ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕಳೆದೊಂದು ವಾರದಿಂದ ಇಂದಿರಾದೇವಿ ಅವರ ಪರಿಸ್ಥಿತಿ ತೀವ್ರ ಗಂಭೀರವಾಗಿತ್ತು ಮತ್ತು ಅವರನ್ನು ಐಸಿಯುನಲ್ಲಿ ಇರಿಸಲಾಗಿತ್ತು.

ಕಳೆದೊಂದು ವಾರದಿಂದ ಪದೇ ಪದೇ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದ ಮಹೇಶ್ ಬಾಬು ತಾಯಿಯ ಆರೋಗ್ಯದ ಮಾಹಿತಿಗಳನ್ನು ಪಡೆಯುತ್ತಿದ್ದರು. ಸದ್ಯ ತಾಯಿ ಕಳೆದುಕೊಂಡಿರುವ ನೋವಿನಲ್ಲಿರುವ ಮಹೇಶ್ ಬಾಬು ಅವರಿಗೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸಾಂತ್ವನ ಹೇಳುತ್ತಿದ್ದಾರೆ. ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ರಾಜಕೀಯ ಕ್ಷೇತ್ರದ ಹಲವಾರು ಗಣ್ಯರು ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಅವರ ಅಂತಿಮ ದರ್ಶನ ಪಡೆಯಲು ಮಹೇಶ್ ಬಾಬು ಅವರ ನಿವಾಸದತ್ತ ತೆರಳುತ್ತಿದ್ದಾರೆ.

Telugu Actor Mahesh Babus mother Indira Devi passed away

ಇನ್ನು ನಟ ಕೃಷ್ಣ ಘಟ್ಟಮನೇನಿ ಅವರಿಗೆ ಇಂದಿರಾದೇವಿ ಮೊದಲನೇ ಪತ್ನಿಯಾಗಿದ್ದು, ಈ ದಂಪತಿಗಳಿಗೆ ಮಹೇಶ್ ಬಾಬು ಸೇರಿದಂತೆ ಒಟ್ಟು ಐವರು ಮಕ್ಕಳಿದ್ದಾರೆ. ಕೃಷ್ಣ ಅವರು ನಂತರ ನಟಿ ವಿಜಯ ನಿರ್ಮಲಾ ಅವರನ್ನು ವಿವಾಹವಾಗಿದ್ದರು.

More from Filmibeat

English summary
Telugu Actor Mahesh Babu's mother Indira Devi passed away
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X