For Quick Alerts
  ALLOW NOTIFICATIONS  
  For Daily Alerts

  5 ದಿನದಲ್ಲಿ ಬೆಂಗಳೂರಿನಲ್ಲಿ ಮದುವೆ.. ತಲೆ ಸುತ್ತಿ ಬಿದ್ದ ನಟ.. ಅಭಿಮಾನಿಗಳಲ್ಲಿ ಆತಂಕ!

  |

  ಟಾಲಿವುಡ್ ನಟ ಯುವ ನಾಗಶೌರ್ಯ ಶೂಟಿಂಗ್‌ ಸೆಟ್‌ನಲ್ಲಿ ತಲೆ ಸುತ್ತಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ನಾಗಶೌರ್ಯಗೆ ನವೆಂಬರ್ 20ರಂದು ಬೆಂಗಳೂರಿನಲ್ಲಿ ಮದುವೆ ನಿಶ್ಚಯವಾಗಿದೆ. ಮದುವೆಗೆ 5 ದಿನ ಇರುವಾಗ ನಟ ಈ ರೀತಿ ಆಸ್ಪತ್ರೆಗೆ ದಾಖಲಾಗಿರುವುದು ಕುಟುಂಬಸ್ಥರಲ್ಲಿ ಹಾಗೂ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

  ರಶ್ಮಿಕಾ ಮಂದಣ್ಣ ನಟನೆಯ 'ಚಲ್ಲೋ', 'ವರುಡು ಕಾವಲೇನು' ಹಾಗೂ 'ಓ ಬೇಬಿ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಾಗಶೌರ್ಯ ನಟಿಸಿದ್ದಾರೆ. ಹೈದರಾಬಾದ್‌ನಲ್ಲಿ ಶಿವಾರ್ಲು ಬಳಿ ಚಿತ್ರವೊಂದರ ಆಕ್ಷನ್ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು. 4 ದಿನಗಳಿಂದ ಸರಿಯಾಗಿ ಆಹಾರ ಸೇವಿಸದೇ ನಿಶಕ್ತಿಯಿಂದ ನಾಗಶೌರ್ಯ ಕುಸಿದು ಬಿದ್ದಿದ್ದಾರೆ ಎನ್ನುಲಾಗುತ್ತಿದೆ ಆತಂಕಪಟ್ಟುವ ಅಗತ್ಯ ಇಲ್ಲ ಎಂದು ಹೇಳಲಾಗುತ್ತಿದೆ. ಒಂದ್ಕಡೆ ಮನೆಯಲ್ಲಿ ಮದುವೆ ತಯಾರಿ ಶುರುವಾಗಿದೆ. ಇಂತಹ ಸಮಯದಲ್ಲೇ ನಾಗಶೌರ್ಯ ಈ ರೀತಿ ಆಸ್ಪತ್ರೆ ಸೇರಿರುವುದು ಸಹಜವಾಗಿಯೇ ಕುಟುಂಬಸ್ಥರಿಗೆ ಬೇಸರ ತಂದಿದೆ.

  ಸಮಂತಾ ಅಭಿನಯದ 'ಯಶೋದಾ' ಚಿತ್ರದ ಮೊದಲ 3 ದಿನಗಳ ಕಲೆಕ್ಷನ್; ಸಮಂತಾ ಬಾಕ್ಸ್ಆಫೀಸ್ ಪವರ್!ಸಮಂತಾ ಅಭಿನಯದ 'ಯಶೋದಾ' ಚಿತ್ರದ ಮೊದಲ 3 ದಿನಗಳ ಕಲೆಕ್ಷನ್; ಸಮಂತಾ ಬಾಕ್ಸ್ಆಫೀಸ್ ಪವರ್!

  ಫಿಟ್‌ನೆಸ್ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸುವ ನಟ ನಾಗಶೌರ್ಯಗೆ ಈ ರೀತಿ ಆಗಿರುವುದು ಕೆಲವರಿಗೆ ಅಚ್ಚರಿ ಮೂಡಿಸಿದೆ. ಅವರ ಜ್ವರದಿಂದಲೂ ಬಳಲುತ್ತಿದ್ದಾರೆ ಎನ್ನಲಾಗುತ್ತಿದ್ದು, ಸದ್ಯಕ್ಕೆ ಆತಂಕಪಡುವ ಅಗತ್ಯ ಇಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ವರದಿ ಆಗಿದೆ.

  ಅತಿಯಾದ ಡಯೆಟ್‌ನಿಂದ ಎಡವಟ್ಟು

  ಅತಿಯಾದ ಡಯೆಟ್‌ನಿಂದ ಎಡವಟ್ಟು

  ಹೊಸ ಚಿತ್ರದ ಆಕ್ಷನ್ ಸೀನ್ ಶೂಟಿಂಗ್ ನಡಿತಿತ್ತು. ದೃಶ್ಯದಲ್ಲಿ ಸಿಕ್ಸ್‌ಪ್ಯಾಕ್ ಹ್ಯಾಬ್ಸ್‌ ತೋರಿಸಬೇಕು ಎನ್ನುವ ಕಾರಣಕ್ಕೆ ಇತ್ತೀಚೆಗೆ ಹೆಚ್ಚು ವರ್ಕೌಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಸಿಕ್ಸ್‌ಪ್ಯಾಕ್‌ಗಾಗಿ ಲಿಕ್ವಿಡ್ಸ್ ಕಡಿಮೆ ತೆಗೆದುಕೊಳ್ಳುತ್ತಿದ್ದರಂತೆ. ಜೊತೆಗೆ ಬೆಳಗ್ಗೆಯಿಂದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿ ಸರಿಯಾಗಿ ಆಹಾರ ಸೇವಿಸದೇ ಹೀಗೆ ಬಿದ್ದಿದ್ದಾರೆ ಎನ್ನಲಾಗ್ತಿದೆ. ಕೂಡಲೇ ಅವರನ್ನು ಹೈದರಾಬಾದ್ ಗಚ್ಚಿಬೋಲಿ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಳೆ (ನವೆಂಬರ್ 15) ಡಿಸ್ಚಾರ್ಜ್‌ ಆಗಲಿದ್ದಾರೆ.

  ಬೆಂಗಳೂರಿನಲ್ಲಿ ನಾಗಶೌರ್ಯ ಮದುವೆ

  ಬೆಂಗಳೂರಿನಲ್ಲಿ ನಾಗಶೌರ್ಯ ಮದುವೆ

  ನಟ ನಾಗಶೌರ್ಯ ಕುಂದಾಪುರದ ಹುಡುಗಿ ಅನುಷಾ ಶೆಟ್ಟಿ ಕೈ ಹಿಡಿಯಲಿದ್ದಾರೆ. ಬೆಂಗಳೂರು ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್‌ನಲ್ಲಿ ಬಹಳ ಅದ್ಧೂರಿಯಾಗಿ ಕಲ್ಯಾಣೋತ್ಸವ ನಡೆಯಲಿದೆ. 2 ದಿನಗಳ ಕಾಲ ಮದುವೆಯ ಶಾಸ್ತ್ರಗಳು ನಡೆಯಲಿದೆ. ನವೆಂಭರ್ 19ರಂದು ಮಹೆಂದಿ, ಸಂಗೀತ್ ಪಾರ್ಟಿ ನಡೆಯಲಿದೆ. ಮರುದಿನ ಬೆಳಗ್ಗೆ 11.25ನಿಮಿಷಕ್ಕೆ ಮಾಂಗಲ್ಯಧಾರಣೆ ನಡೆಯಲಿದೆ. ತೆಲುಗು ಚಿತ್ರರಂಗದ ಸಾಕಷ್ಟು ಗಣ್ಯರು ವಿವಾಹ ಮಹೋತ್ಸವದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.

  ಅನುಷಾ ಶೆಟ್ಟಿ ಯಾರು?

  ಅನುಷಾ ಶೆಟ್ಟಿ ಯಾರು?

  ಇವರಿಬ್ಬರದ್ದು ಅರೇಂಜ್ಡ್ ಮ್ಯಾರೇಜ್ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ದೊಡ್ಡ ಉದ್ಯಮಿ ಪುತ್ರಿ ಅನುಷಾ ಶೆಟ್ಟಿ. ಇಂಟೀರಿಯರ್ ಡಿಸೈನರ್ ಆಗಿರುವ ಅನುಷಾ ನ್ಯೂಯಾರ್ಕ್ ಸ್ಕೂಲ್ ಆಫ್ ಇಂಟೀರಿಯರ್ ಡಿಸೈನ್‌ನಲ್ಲಿ ಕಲಿತಿದ್ದಾರೆ. ಅನುಷಾ ಶೆಟ್ಟಿ ಡಿಸೈನ್ಸ್ ಓಪಿಸಿ ಪ್ರೈವೆಟ್ ಲಿಮಿಟೆಡ್ ಎನ್ನುವ ಖಾಸಗಿ ಇಂಟೀರಿಯರ್ ಡಿಸೈನ್ ಫರ್ಮ್ ನಡೆಸುತ್ತಿದ್ದಾರೆ. 2019ರಲ್ಲಿ ಡಿಸೈನರ್ ಆಫ್ ದಿ ಇಯರ್ ಅವಾರ್ಡ್ ಪಡೆದುಕೊಂಡಿದ್ದಾರೆ. ಹೀಗೆ ಸಾಕಷ್ಟು ಅವಾರ್ಡ್‌ಗಳು ಸಿಕ್ಕಿವೆ. ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಬ್ಯಾಚುಲರ್ ಆಫ್ ಕಾರ್ಮಸ್ ಕಂಪ್ಲೀಟ್ ಮಾಡಿದ್ದಾರೆ. ಪಾಂಡಿಚೇರಿ ಯೂನಿವರ್ಸಿಟಿಯಿಂದ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಕೂಡ ಮುಗಿಸಿದ್ದಾರೆ. ಸದ್ಯ ಯುವ ಮಹಿಳಾ ಉದ್ಯಮಿ ಆಗಿ ಗುರ್ತಿಸಿಕೊಂಡಿದ್ದಾರೆ.

  ಭರವಸೆಯ ಯುವನಟ ನಾಗಶೌರ್ಯ

  ಭರವಸೆಯ ಯುವನಟ ನಾಗಶೌರ್ಯ

  'ಕ್ರಿಕೆಟ್ ಗರ್ಲ್ಸ್ & ಬಿಯರ್' ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ನಾಗಶೌರ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದಾರೆ. 'ಊಹಲು ಗುಸಗುಸಲಾಡೆ' ಸಿನಿಮಾ ಒಳ್ಳೆ ಹೆಸರು ತಂದುಕೊಟ್ಟಿತ್ತು. ನಾಗಶೌರ್ಯ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡದೇ ಇದ್ದರೂ ಭರವಸೆಯ ಯುವನಟ ಎನಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ, ಸಮಂತಾ ಜೊತೆಗೂ ನಟಿಸಿ ಗಮನ ಸೆಳೆದಿದ್ದಾರೆ.

  40 ದಿನ ಬ್ಯಾಂಕಾಕ್‌ನಲ್ಲಿ 'ಪುಷ್ಪ 2' ಶೂಟಿಂಗ್: ಡಿಸೆಂಬರ್‌ನಲ್ಲಿ ಸರ್ಪ್ರೈಸ್!40 ದಿನ ಬ್ಯಾಂಕಾಕ್‌ನಲ್ಲಿ 'ಪುಷ್ಪ 2' ಶೂಟಿಂಗ್: ಡಿಸೆಂಬರ್‌ನಲ್ಲಿ ಸರ್ಪ್ರೈಸ್!

  English summary
  Telugu Actor Naga Shourya Admitted in a Hospital in Gachibowli, Hyderabad for dehydration. Naga Shaurya and Anusha Shetty's wedding organised at the JW Marriot hotel in Bengaluru on November 20th. know more.
  Monday, November 14, 2022, 18:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X