For Quick Alerts
  ALLOW NOTIFICATIONS  
  For Daily Alerts

  ಅಮೇಜಾನ್ ಪ್ರೈಂನಲ್ಲಿ ತೆಲುಗು ನಟ ನಾನಿಯ 25ನೇ ಚಿತ್ರ ಬಿಡುಗಡೆ

  |

  ತೆಲುಗು ನಟ ನಾನಿ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಚಿತ್ರ 'ವಿ' ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗುತ್ತಿದ್ದು, ಸೆಪ್ಟೆಂಬರ್ 5ರಿಂದ ಜಾಗತಿಕ ಪ್ರದರ್ಶನ ಕಾಣುತ್ತಿದೆ.

  Upendra ಬ್ರಹ್ಮ ಚಿತ್ರದಲ್ಲಿನ ಡುಯೆಟ್ ಹಾಡು ತಯಾರಾದ ಕ್ಷಣಗಳು | Filmibeat Kannada

  ಮೋಹನಾ ಕೃಷ್ಣ ಇಂದ್ರಗಂಟಿಯವರು ಕಥೆ-ಚಿತ್ರಕಥೆ ಬರೆದು, ನಿರ್ದೇಶಿಸಿರುವ ಈ ಚಿತ್ರದಲ್ಲಿ ನಾನಿ ಜೊತೆ ಸುಧೀರ್ ಬಾಬು, ನಿವೇತಾ ಥಾಮಸ್ ಮತ್ತು ಆದಿತಿ ರಾವ್ ಹೈದರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  ದಾಖಲೆಗಳನ್ನು ಬರೆದು, ಒಂದೇ ಹಾಡಿನಿಂದ ಕೋಟಿಗಟ್ಟಲೆ ಗಳಿಸಿದ ಸಿನಿಮಾ!

  ಕೊರೊನಾ ವೈರಸ್ ಕಾರಣದಿಂದ ದೇಶಾದ್ಯಂತ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದು, 150ಕ್ಕೂ ಅಧಿಕ ದಿನಗಳು ಕಳೆದಿದೆ. ಇದುವರೆಗೂ ಥಿಯೇಟರ್ ತೆರೆಯಲು ಅನುಮತಿ ಸಿಕ್ಕಿಲ್ಲ. ಹೀಗಾಗಿ, ಸ್ಟಾರ್ ನಟರು ಆನ್‌ಲೈನ್ ಮೂಲಕ ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ.

  'ವಿ' ಚಿತ್ರದ ಜಾಗತಿಕ ಪ್ರದರ್ಶನದ ಬಗ್ಗೆ ನನಗೆ ಬಹಳ ಸಂತೋಷವಿದೆ. ಇದು ನನ್ನ 25ನೇ ಚಿತ್ರವಾಗಿದೆ. ಇಷ್ಟು ದಿನ ನನ್ನ ಸಿನಿಮಾ ನೋಡಲು ನೀವೆಲ್ಲ ಚಿತ್ರಮಂದಿರಕ್ಕೆ ಬರುತ್ತಿದ್ದೀರಿ. ಅದಕ್ಕಾಗಿ ನಿಮಗೆ ಧನ್ಯವಾದ ಹೇಳಲು ನಾನೇ ನಿಮ್ಮ ಮನೆಗೆ ಆಗಮಿಸುತ್ತಿದ್ದೇನೆ'' ಎಂದು ನಾನಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

  'ವೈಯಕ್ತಿಕವಾಗಿ ನನಗೆ ಆಕ್ಷನ್ ಥ್ರಿಲ್ಲರ್ ಗಳನ್ನು ನೋಡಲು ಇಷ್ಟವಾಗುತ್ತದೆ, 'ವಿ' ಅದೇ ರೀತಿಯ ಚಿತ್ರವಾಗಿದ್ದು, ರೋಮಾಂಚನ, ಡ್ರಾಮಾ ಮತ್ತು ಆಕ್ಷನ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತದೆ. ಸುಧೀರ್ ಬಾಬು ಮತ್ತು ನನ್ನ ನಡುವಿನ ಇಲಿ-ಬೆಕ್ಕಿನ ಆಟವು ನೋಡಗರಿಗೆ ಭರಪೂರ ರಂಜನೆ ನೀಡಲಿದೆ' ಎಂದು ನಾನಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಪ್ರೈಂ ಸದಸ್ಯರು ವಿ ಚಿತ್ರವನ್ನು ಎಲ್ಲಿಯಾದರೂ, ಯಾವ ಸಮಯದಲ್ಲಾದರೂ, ಸ್ಮಾರ್ಟ್ ಟಿವಿ, ಮೊಬೈಲ್, ಫಿರ್ ಟಿವಿ, ಪೈಟ್ ಟಿವಿ ಸ್ಟಿಕ್, ಫೈರ್ ಟಾಬ್ಲೆಟ್, ಆಪಲ್ ಟಿವಿ, ಏರ್ಟೆಲ್, ವೊಡಾಫೋನ್ ಇತ್ಯಾದಿ ಪ್ರೈಂ ವೀಡಿಯೊ ಆಪ್ ಗಳಲ್ಲಿ ನೋಡಬಹುದು. ಪ್ರೈಂ ವೀಡಿಯೊ ಆಪ್ ನಲ್ಲಿ ಸದಸ್ಯರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಂಚಿಕೆಗಳನ್ನು ತಮ್ಮ ಮೊಬೈಲ್ ಉಪಕರಣಗಳಲ್ಲಿ ಡೌನ್ಲೋಡ್ ಮಾಡಿ ನೋಡಬಹುದು.

  ಭಾರತದಲ್ಲಿ ಪ್ರೈಂ ವೀಡಿಯೊ ವಾರ್ಷಿಕ ರೂ. 999 ಅಥವಾ ಮಾಸಿಕ ರೂ. 129 ಗೆ ಪ್ರೈಂ ಸದಸ್ಯತ್ವದಲ್ಲಿ ಲಭ್ಯವಿದೆ.

  English summary
  Telugu actor Nani starrer 25th movie 'V' directly Releasing on Amazon Prime Video from September 5.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X