Just In
Don't Miss!
- News
ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಶುಭ ಸುದ್ದಿ
- Sports
ಶ್ರೀಲಂಕಾದಿಂದಲೇ ಟೀಮ್ ಇಂಡಿಯಾಗೆ ಎಚ್ಚರಿಕೆ ರವಾನಿಸಿದ ಜೋ ರೂಟ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೋಮಾಕ್ಕೆ ಜಾರಿದ ವರ್ಮಾ ಗರಡಿಯಲ್ಲಿ ಬೆಳೆದ ಹಾಸ್ಯನಟ
ತೆಲುಗು ಚಿತ್ರರಂಗ ಜನಪ್ರಿಯ ಹಾಸ್ಯನಟ ನರಸಿಂಗ್ ಯಾದವ್ ಕೋಮಾಕ್ಕೆ ಜಾರಿದ್ದಾರೆ. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ನಡುವೆ ನರಸಿಂಗ್ ತಲೆಗೆ ಪೆಟ್ಟು ಬಿದ್ದಿದ್ದರಿಂದ ಕೋಮಾಕ್ಕೆ ಜಾರಿದ್ದಾರೆ ಎಂಬ ಸುದ್ದಿಯನ್ನು ಅವರ ಪತ್ನಿ ಅಲ್ಲಗೆಳೆದಿದ್ದು ದಯವಿಟ್ಟು ಇಲ್ಲಸಲ್ಲದ ಸುದ್ದಿಯನ್ನು ಹಬ್ಬಿಸಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.
ಹಾಸ್ಯನಟ ನರ್ಸಿಂಗ್ ಯಾದವ್ ಅವರ ಆರೋಗ್ಯ ಸ್ಥಿತಿ ಇನ್ನೂ ಆತಂಕಕಾರಿಯಾಗಿದೆ ಎಂದು ಸೋಮಾಜಿಗುಡದ ಯಶೋಧಾ ಆಸ್ಪತ್ರೆಯ ವೈದ್ಯಾಧಿಕಾರಿ ಹೇಳಿದ್ದಾರೆ. ನರಸಿಂಗ್ ಆರೋಗ್ಯದ ಬಗ್ಗೆ ಅಭಿಮಾನಿಗಳು, ಆಪ್ತರು ಮತ್ತು ಕುಟುಂಬ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು 48ಗಂಟೆಗಳ ಕಾಲ ದೇಹ ಪರಿಸ್ಥಿತಿ ಹೇಗಿರುತ್ತೆ ಎಂಬುದನ್ನು ನೋಡಿ ಮುಂದಿನ ಚಿಕಿತ್ಸೆ ಕ್ರಮ ತಿಳಿಸಲಾಗುವುದು ಡಾಕ್ಟರ್ ಹೇಳಿದ್ದಾರೆ.
ಕಳೆದ ಗುರುವಾರದಂದು ಕಿಡ್ನಿ ಡಯಾಲಿಸೀಸ್ ಮಾಡಿಸಲು ಆಸ್ಪತ್ರೆಗೆ ಬಂದಿದ್ದ ನರಸಿಂಗ್ ಅವರು ಅಸ್ವಸ್ಥರಾಗಿದ್ದಾರೆ. ನರಸಿಂಗ್ ಅವರ ದೇಹದಲ್ಲಿರುವ ಸಕ್ಕರೆ ಅಂಶ, ರಕ್ತದೊತ್ತಡದಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಇದು ವಿಷಯ ಸ್ಥಿತಿಗೆ ತಲುಪಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಂತಾಗಿದೆ. ಈ ಹಿಂದೆ ಕೂಡಾ ಮೆದುಳಿನಲ್ಲಿ ಬ್ಲಾಕೇಜ್ ಇದೆ ಎಂದು ವೈದ್ಯರು ತಿಳಿಸಿದ್ದರು.
ಯಶೋದಾ ಆಸ್ಪತ್ರೆಗೆ ಬರುವ ತನಕ ಯಾವುದೇ ಸಮಸ್ಯೆ ಇರಲಿಲ್ಲ. ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ನೋಡಿದ್ದು, "ಅಂದಿನಿಂದ ಅವರ ಸ್ಥಿತಿ ಹಾಗೇ ಇದೆ", ಆದರೆ, ಎಂದು ಅವರ ಪತ್ನಿ ಚಿತ್ರ ಯಾದವ್ ಹೇಳಿದ್ದಾರೆ. ಪ್ರಸ್ತುತ ಅವರು ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆಯಲ್ಲಿ ಕುಸಿದು ಬಿದ್ದರು ಎಂಬುದು ಸುಳ್ಳು
ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಅವರಿಗೆ ಕಿಡ್ನಿ ಸಮಸ್ಯೆ(Chronic Kidney disease)ಇದೆ, ಗುರುವಾರದಂದು ಡಯಾಲಿಸಿಸ್ ವೇಳೆ ರಕ್ತದೊತ್ತಡ ಕುಸಿದಿದೆ, ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾರೆ. ಆದರೆ, ಮನೆಯ ಬಾತ್ ರೂಮ್ ನಲ್ಲಿ ಬಿದ್ದು ತಲೆಗೆ ಪೆಟ್ಟು ಬಿದ್ದಿದೆ ಎಂಬ ವದಂತಿಗಳನ್ನು ನಂಬಬೇಡಿ. ಅವರ ತಲೆಗೆ ಯಾವುದೇ ಗಾಯಗಳಾಗಿಲ್ಲ. ಈ ಬಗ್ಗೆ ಟಿವಿ ಮಾಧ್ಯಮಗಳಲ್ಲಿ ಸುದ್ದಿ ಬಂದಿರುವುದು ತಿಳಿದು ನೋವಾಗಿದೆ ಎಂದು ಹೇಳಿದರು.

400ಕ್ಕೂ ಅಧಿಕ ಚಿತ್ರಗಳಲ್ಲಿ ನಟನೆ
ಜನಪ್ರಿಯ ನಿರ್ದೇಶಕ ರಂಗೋಪಾಲ್ ವರ್ಮಾ ನಿರ್ಮಿಸಿದ ಹಲವಾರು ಚಿತ್ರಗಳು ಸೇರಿ ಸುಮಾರು 400 ಪ್ಲಸ್ ಚಿತ್ರಗಳಲ್ಲಿ ನರಸಿಂಗ್ ಯಾದವ್ ನಟಿಸಿದ್ದಾರೆ. ಅವರ ಸಂಭಾಷಣೆ ವಿತರಣೆ, ಮೂಲ ಹೈದರಾಬಾದಿ ತೆಲುಗು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ವಿಲನ್ ಪಾತ್ರದಲ್ಲೂ ಹಾಸ್ಯಭರಿತ ಡೈಲಾಗ್ ಹೊಡೆಯುತ್ತಿದ್ದ ನರಸಿಂಗ್ ಈಗ ಸೈಲಂಟ್ ಆಗಿರುವುದು ಅಭಿಮಾನಿಗಳಿಗೂ ನೋವು ತಂದಿದೆ.

ಕೆಲ ಸಮಯದಿಂದ ಚಿತ್ರರಂಗದಿಂದ ದೂರವಿದ್ದರು
ಅನಾರೋಗ್ಯದಿಂದಾಗಿ ಅವರು ಕೆಲವು ಸಮಯದಿಂದ ಚಲನಚಿತ್ರಗಳಿಂದ ದೂರವಾಗಿದ್ದರು. ದೇಹ ಪರಿಸ್ಥಿತಿ ನೋಡಿಕೊಂಡು ವಾರಕ್ಕೆ ಎರಡು ಮೂರು ಸಲ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾಗಿತ್ತು. ಮೆದುಳಿನಲ್ಲಿ ಬ್ಲಾಕೇಜ್ ಇರುವುದು ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಡಲು ಕಾರಣ ಎನ್ನಲಾಗಿದೆ.

ಪೋಕರಿ, ಟ್ಯಾಗೋರ್ ಹೆಸರು ತಂದುಕೊಟ್ಟ ಚಿತ್ರ
ರಾಮ್ ಗೋಪಾಲ್ ವರ್ಮಾ ಅವರ ಕ್ಷಣಂ ಕ್ಷಣಂ ಚಿತ್ರದಲ್ಲಿ ವೆಂಕಟೇಶ್, ಶ್ರೀದೇವಿ ಜೊತೆ ನಟಿಸಿ ಸೈ ಎನಿಸಿಕೊಂಡ ನರಸಿಂಗ್ ಮತ್ತೆ ತಿರುಗಿ ನೋಡಲಿಲ್ಲ. ಐತೆ, ಮಾಸ್, ಶಂಕರ್ ದಾದಾ ಎಂಬಿಬಿಎಸ್, ನುವ್ವೊಸ್ತಾನಂಟೆ ನೆನೊದ್ದಂಟಾನಾ, ಬೊಮ್ಮರಿಲ್ಲು, ಕಿಲಾಡಿ 150 ಹೀಗೆ ಹಲವು ಚಿತ್ರಗಳಲ್ಲಿ ಗಮನ ಸೆಳೆದಿದ್ದಾರೆ. ಚಿರಂಜೀವಿ ಅವರ ಟ್ಯಾಗೋರ್ ಮತ್ತು ಮಹೇಶ್ ಬಾಬು ಅವರ ಪೋಕಿರಿ ಚಿತ್ರ ಜನಪ್ರಿಯತೆ ಹೆಚ್ಚಿಸಿದ್ದವು.