twitter
    For Quick Alerts
    ALLOW NOTIFICATIONS  
    For Daily Alerts

    ಬಿಜೆಪಿ ಟಿಕೆಟ್‌ಗಾಗಿ ನಟ ನಿತಿನ್ ಯತ್ನ: ಕ್ಷೇತ್ರ ಯಾವುದು?

    |

    ಸಿನಿಮಾ ನಟರು ರಾಜಕಾರಣಿಗಳಾಗುವುದು ಹೊಸದೇನೂ ಅಲ್ಲ. ಅದರಲ್ಲಿಯೂ ತೆಲುಗು ರಾಜ್ಯಗಳಲ್ಲಿ ಸಿನಿಮಾ ಹಾಗೂ ರಾಜಕಾರಣ ಬೇರ್ಪಡಿಸಲಾರದಷ್ಟು ಬೆರೆತು ಹೋಗಿವೆ.

    ಎನ್‌ಟಿಆರ್, ಸೂಪರ್ ಸ್ಟಾರ್ ಕೃಷ್ಣ, ಚಿರಂಜೀವಿ, ಮೋಹನ್‌ ಬಾಬು, ಬಾಲಕೃಷ್ಣ, ಇನ್ನೂ ಹಲವು ಹಿರಿಯ ಸಿನಿಮಾ ತಾರೆಯರು ರಾಜಕೀಯ ಸೆಳೆತಕ್ಕೆ ಸಿಕ್ಕಿದ್ದಾರೆ. ಕೆಲವು ಹಿರಿಯ ನಟರು ಈಗಲೂ ಸಕ್ರಿಯ ರಾಜಕೀಯದಲ್ಲಿದ್ದಾರೆ. ಇದೀಗ ಪವನ್ ಕಲ್ಯಾಣ್, ಜನಸೇನಾ ಪಕ್ಷ ಕಟ್ಟಿದ ಬಳಿಕ ಹೊಸ ತಲೆ ಮಾರಿನ ತೆಲುಗು ನಟರು ರಾಜಕೀಯದತ್ತ ಮುಖ ಮಾಡುತ್ತಿದ್ದಾರೆ.

    ಜ್ಯೂ. ಎನ್‌ಟಿಆರ್- ರಾಮ್‌ಚರಣ್ ಫ್ಯಾನ್ಸ್‌ ಮಧ್ಯೆ ಬೆಂಕಿ ಹಚ್ಚಿದ ಆಸ್ಕರ್ ಅವಾರ್ಡ್!ಜ್ಯೂ. ಎನ್‌ಟಿಆರ್- ರಾಮ್‌ಚರಣ್ ಫ್ಯಾನ್ಸ್‌ ಮಧ್ಯೆ ಬೆಂಕಿ ಹಚ್ಚಿದ ಆಸ್ಕರ್ ಅವಾರ್ಡ್!

    ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ನಟ ನಿತಿನ್ ರಾಜಕೀಯದತ್ತ ಒಲವು ತೋರಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದ ನಟ ನಿತಿನ್, ಇದೀಗ ತಮ್ಮ ಕುಟುಂಬ ಸದಸ್ಯರಿಗೆ ಬಿಜೆಪಿ ಟಿಕೆಟ್ ಕೊಡಿಸಲು ಶ್ರಮ ಪಡುತ್ತಿದ್ದಾರೆ ಎಂಬ ಸುದ್ದಿ ತೆಲುಗು ರಾಜ್ಯಗಳಲ್ಲಿ ಹರಿದಾಡುತ್ತಿದೆ.

    Telugu Actor Nitin Trying To Get BJP Election Ticket For His Family Member

    ನಿತಿನ್ ತಂದೆ ಸುಧಾಕರ್ ರೆಡ್ಡಿ ಸ್ವತಃ ಸಿನಿಮಾ ವಿತರಕರಾಗಿದ್ದು, ಅವರು ರಾಜಕೀಯ ಪ್ರವೇಶಕ್ಕೆ ಉತ್ಸುಕರಾಗಿದ್ದಾರೆ. ಅಲ್ಲದೆ ನಿತಿನ್ ಸಹೋದರಿ ನಿಖಿತಾ ರೆಡ್ಡಿ ಸಹ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದು, ಇಬ್ಬರಲ್ಲಿ ಒಬ್ಬರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಲು ನಿತಿನ್ ಯತ್ನಿಸುತ್ತಿದ್ದಾರೆ. ನಿತಿನ್ ಈಗಾಗಲೇ ತೆಲಂಗಾಣ ಬಿಜೆಪಿ ನಾಯಕರೊಟ್ಟಿಗೆ ಚರ್ಚಿಸಿದ್ದು ಆ ನಂತರವೇ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಗ್ರೇಟರ್ ಹೈದರಾಬಾದ್ ಕ್ಷೇತ್ರದಿಂದ ತಮ್ಮ ಕುಟುಂಬದವರನ್ನು ಚುನಾವಣೆಗೆ ಕಣಕ್ಕಿಳಿಸುವುದು ನಿತಿನ್ ತಂತ್ರ ಎನ್ನಲಾಗಿದೆ.

    ಮುಂದಿನ ವರ್ಷಾಂತ್ಯಕ್ಕೆ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ತೆಲಂಗಾಣ ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ನೀಡಲು ಬಿಜೆಪಿ ಶತಪ್ರಯತ್ನ ಮಾಡುತ್ತಿದ್ದು, ರಾಜ್ಯದಲ್ಲಿ ಬಿಜೆಪಿಯನ್ನು ನೆಲೆನಿಲ್ಲಿಸಲು ಸಿನಿಮಾ ತಾರೆಯರ ಮೊರೆ ಹೋಗಿದ್ದಾರೆ ಪಕ್ಷದ ಮುಖಂಡರು. ಆಂಧ್ರ-ತೆಲಂಗಾಣದಲ್ಲಿ ಸಿನಿಮಾ ತಾರೆಯರಿಗೆ ಹೆಚ್ಚಿನ ಮೌಲ್ಯವಿದ್ದು, ಅವರನ್ನೇ ಬಳಸಿ ತೆಲಂಗಾಣ ರಾಜ್ಯದಲ್ಲಿ ನೆಲೆ ಕಾಣಲು ಬಿಜೆಪಿ ಯತ್ನಿಸುತ್ತಿದೆ. ಇದೇ ತಂತ್ರದ ಭಾಗವಾಗಿ ಕೆಲವು ತೆಲುಗು ನಟ-ನಟಿಯರನ್ನು ಬಿಜೆಪಿ ಭೇಟಿ ಮಾಡಿದೆ.

    ಹಂತ-ಹಂತವಾಗಿ ತಮ್ಮ ಜನಸೇನಾ ಪಕ್ಷವನ್ನು ಸಂಘಟನೆ ಮಾಡುತ್ತಿರುವ ಪವನ್ ಕಲ್ಯಾಣ್ ಅವರೊಟ್ಟಿಗೆ ಈಗಾಗಲೇ ಬಿಜೆಪಿಯು ಮೈತ್ರಿ ಸಾಧಿಸಿದ್ದು, ಇನ್ನಷ್ಟು ತಾರಾ ಬಲವನ್ನು ಪಕ್ಷದೆಡೆಗೆ ಸೆಳೆಯಲು ಸಜ್ಜಾಗಿದೆ.

    ಕೆಲವು ದಿನಗಳ ಹಿಂದಷ್ಟೆ ಟಿಡಿಪಿ ಪಕ್ಷದ ಸದಸ್ಯರೂ ಆಗಿರುವ ತೆಲುಗಿನ ಸ್ಟಾರ್ ನಟ ಜೂ ಎನ್‌ಟಿಆರ್, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಆ ಬಳಿಕ ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಪ್ರಭಾಸ್ ಅವರನ್ನು ಭೇಟಿಯಾಗಿದ್ದರು. ಇನ್ನೂ ಹಲವು ಎ ಗ್ರೇಡ್, ಬಿ ಗ್ರೇಡ್ ನಟರನ್ನು ಪಕ್ಷಕ್ಕೆ ಸೆಳೆಯಲು ತೆರೆ ಮರೆ ತಂತ್ರ ಜಾರಿಯಲ್ಲಿದೆ.

    English summary
    Telugu actor Nitin trying to get BJP election ticket for Telangana assembly election for his family member.
    Monday, September 19, 2022, 17:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X