For Quick Alerts
  ALLOW NOTIFICATIONS  
  For Daily Alerts

  ಹೆದ್ದಾರಿಯಲ್ಲಿ ನಡೆಯಿತು ಭೀಕರ ಅಪಘಾತ: ನಟ ರಾಜಶೇಖರ್ ಗ್ರೇಟ್ ಎಸ್ಕೇಪ್

  |

  ತೆಲುಗಿನ ಖ್ಯಾತ ನಟ ರಾಜಶೇಖರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ ಎಂಬ ಸುದ್ದಿ ವರದಿಯಾಗಿದೆ. ಹೈದರಾಬಾದ್ ರಿಂಗ್ ರಸ್ತೆ ಬಳಿ ರಾಜಶೇಖರ್ ಕಾರು ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ.

  ಈ ಅಪಘಾತದಲ್ಲಿ ನಟ ರಾಜಶೇಖರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರು ಡ್ಯಾಮೇಜ್ ಆಗಿದೆ ಎಂದು ತಿಳಿದು ಬಂದಿದೆ. ಖುದ್ದು ರಾಜಶೇಖರ್ ಅವರೇ ಕಾರು ಚಲಾಯಿಸುತ್ತಿದ್ದರು, ವೇಗದ ಚಾಲನೆ ಮತ್ತು ನಿಯಂತ್ರಣ ತಪ್ಪಿರುವುದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

  ಕಾರು ಅಪಘಾತದಲ್ಲಿ ತಮಿಳು ನಟ ನಿಧನ, ಬದುಕಿಗಾಗಿ ಪತ್ನಿ ಹೋರಾಟಕಾರು ಅಪಘಾತದಲ್ಲಿ ತಮಿಳು ನಟ ನಿಧನ, ಬದುಕಿಗಾಗಿ ಪತ್ನಿ ಹೋರಾಟ

  ಖುದ್ದು ರಾಜಶೇಖರ್ ಅವರೇ ಕಾರು ಚಲಾಯಿಸುತ್ತಿದ್ದರಿಂದ ಅವರು ಮದ್ಯಪಾನ ಸೇವಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೂಡ ಆರಂಭಿಸಿದ್ದಾರೆ. ಅಷ್ಟಕ್ಕೂ, ಈ ಪ್ರಕರಣದ ಬಗ್ಗೆ ಪೊಲೀಸರು ಹೇಳಿರುವುದೇನು? ಮುಂದೆ ಓದಿ...

  ಮದ್ಯಪಾನ ಮಾಡಿದ್ದರಾ ನಟ ರಾಜಶೇಖರ್?

  ಮದ್ಯಪಾನ ಮಾಡಿದ್ದರಾ ನಟ ರಾಜಶೇಖರ್?

  ರಾಜಶೇಖರ್ ಅವರು ಕುಡಿದ ಕಾರು ಚಾಲನೆ ಮಾಡಿದ್ದಾರೆ. ಹಾಗಾಗಿ, ಅಪಘಾತ ಸಂಭವಿಸಿದೆ ಎಂದು ರಾಮರೆಡ್ಡಿ ಎಂಬ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ರಾಜಶೇಖರ್ ಅವರು ನಾನು ಕುಡಿದಿಲ್ಲ ಎಂದು ಆರೋಪ ಅಲ್ಲೆಗೆಳೆದಿದ್ದರು. ಬಳಿಕ, ಪೊಲೀಸರು ರಾಜಶೇಖರ್ ಅವರಿಗೆ ಮದ್ಯಪಾನ ಸೇವಿಸಿರವ ಬಗ್ಗೆ ಪರೀಕ್ಷೆ ಮಾಡಿದ್ರು. ಈ ವೇಳೆ ಮದ್ಯಪಾನ ಮಾಡದಿರುವುದು ತಿಳಿದುಬಂದಿದೆ.

  ರಸ್ತೆ ಅಪಘಾತದ ಬಗ್ಗೆ ಅಭಿಮಾನಿಗಳಿಗೆ ದರ್ಶನ್ ಮನವಿರಸ್ತೆ ಅಪಘಾತದ ಬಗ್ಗೆ ಅಭಿಮಾನಿಗಳಿಗೆ ದರ್ಶನ್ ಮನವಿ

  ನೋವಿನಲ್ಲಿದ್ದ ರಾಜಶೇಖರ್

  ನೋವಿನಲ್ಲಿದ್ದ ರಾಜಶೇಖರ್

  ರಾಜಶೇಖರ್ ಅವರ ಕಾರು ಅಪಘಾತ ಘಟನೆ ಬಗ್ಗೆ ಮಾಹಿತಿ ತಿಳಿದ ಪತ್ನಿ ಜೀವಿತಾ ಅವರು ಪೊಲೀಸ್ ಠಾಣೆಗೆ ಬಂದು ''ರಾಜಶೇಖರ್ ಅವರು ಇತ್ತೀಚಿಗೆ ತಮ್ಮ ತಾಯಿಯನ್ನ ಕಳೆದುಕೊಂಡಿದ್ದರು. ಆ ನೋವಿನಲ್ಲಿದ್ದಾರೆ. ಅವರು ಮದ್ಯಪಾನ ಮಾಡಿಲ್ಲ'' ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಬಳಿಕ, ದೂರುದಾರ ರಾಮರೆಡ್ಡಿ ಮಾನವೀಯತೆ ದೃಷ್ಟಿಯಿಂದ ದೂರು ವಾಪಸ್ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  ತೆಲುಗು ನಟನ ಕಾರು ಅಪಘಾತ: ಸಿಸಿಟಿವಿ ದೃಶ್ಯ ನೋಡಿದ್ಮೇಲೆ 'ಸ್ಟಾರ್' ಮೇಲೆ ಅನುಮಾನ.!ತೆಲುಗು ನಟನ ಕಾರು ಅಪಘಾತ: ಸಿಸಿಟಿವಿ ದೃಶ್ಯ ನೋಡಿದ್ಮೇಲೆ 'ಸ್ಟಾರ್' ಮೇಲೆ ಅನುಮಾನ.!

  ಅನುಮಾನ ಹುಟ್ಟಿಸಿತ್ತು ರಾಜಶೇಖರ್ ನಡವಳಿಕೆ

  ಅನುಮಾನ ಹುಟ್ಟಿಸಿತ್ತು ರಾಜಶೇಖರ್ ನಡವಳಿಕೆ

  ಅಪಘಾತ ನಡೆದ ಸ್ಥಳದಲ್ಲಿ ನೆರೆದಿದ್ದವರಲ್ಲಿ, ಯಾರೋ ಒಬ್ಬರು ವಿಡಿಯೋ ಮಾಡಿದ್ದಾರೆ. ಸ್ಥಳಿಯರೊಂದಿಗೆ ಮಾತನಾಡುತ್ತಿದ್ದ ರಾಜಶೇಖರ್ ಅವರು, ಮದ್ಯಪಾನ ರೀತಿ ಕಂಡು ಬಂದಿದೆ. ಅಲ್ಲಿದ್ದವರು ಕೂಡ ಇವರು ಕುಡಿದಿದ್ದಾರೆ ಎಂದೇ ಹೇಳುತ್ತಿದ್ದರು. ಆದರೆ, ರಾಜಶೇಖರ್ ಅವರ ಪತ್ನಿ ಜೀವಿತಾ ಹೇಳಿದ್ಮೇಲೆ, ಬಹುಶಃ ರಾಜಶೇಖರ್ ಖಿನ್ನತೆಗೆ ಒಳಗಾಗಿದ್ದಾರೆ ಎಂಬ ಅನುಮಾನ ಗಾಢವಾಗಿದೆ.

  'ಫಿದಾ' ನಟ ವರುಣ್ ತೇಜ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು'ಫಿದಾ' ನಟ ವರುಣ್ ತೇಜ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು

  ಈ ಹಿಂದೆಯೂ ಅಪಘಾತವಾಗಿತ್ತು

  ಈ ಹಿಂದೆಯೂ ಅಪಘಾತವಾಗಿತ್ತು

  ಅಂದ್ಹಾಗೆ, ರಾಜಶೇಖರ್ ಅವರು ಪ್ರಯಾಣಿಸುತ್ತಿದ್ದ ಕಾರು ಈ ಹಿಂದೆಯೊಮ್ಮೆ ಅಪಘಾತಕ್ಕೆ ಒಳಗಾಗಿತ್ತು. 2017ರಲ್ಲಿ ಹೈದರಾಬಾದ್ ಹೆದ್ದಾರಿಯಲ್ಲಿ ಭಾರಿ ಅಪಘಾತವಾಗಿತ್ತು. ಅದೃಷ್ಟವಶಾತ್ ರಾಜಶೇಖರ್ ಆಗಲೂ ಪಾರಾಗಿದ್ದರು. ಆಗಲೂ ಕುಡಿದು ಚಾಲನೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಬಳಿಕ, ಮದ್ಯಪಾನ ಮಾಡಿರಲಿಲ್ಲ ಎಂದು ಪೊಲೀಸರು ಪ್ರಕರಣ ಕ್ಲೋಸ್ ಮಾಡಿದರು.

  ಜೀವಿತಾ ಹೇಳಿದ್ದೇನು?

  ಜೀವಿತಾ ಹೇಳಿದ್ದೇನು?

  ''ರಾತ್ರಿ 1.30ರ ಸಮಯಕ್ಕೆ ಬೆಂಜ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಟೈಯರ್ ಬ್ಲಾಸ್ಟ್ ಆಗಿದೆ. ನಿಯಂತ್ರಣ ತಪ್ಪಿ ಪಕ್ಕದ ರಸ್ತೆಗೆ ಜಂಪ್ ಆಗಿ ಎದುರುಗಡೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಸಿಲುಕಿಕೊಂಡಿದದ್ದ ರಾಜಶೇಖರ್ ಅವರನ್ನ ಇನ್ನೊಂದು ಕಾರಿನಲ್ಲಿ ಬಂದ ವ್ಯಕ್ತಿಗಳು ಸಹಾಯ ಮಾಡಿ, ಅವರನ್ನ ಕರೆದುಕೊಂಡು ಬಂದರು. ಪೊಲೀಸರು ಕೂಡ ಈ ಬಗ್ಗೆ ವಿವರಣೆ ಪಡೆದುಕೊಂಡಿದ್ದಾರೆ'' ಎಂದು ಜೀವಿತಾ ಸ್ಪಷ್ಟನೆ ನೀಡಿದ್ದಾರೆ.

  English summary
  Telugu Actor Rajshekhar has escaped from a road accident in PV Express Highway at Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X