For Quick Alerts
  ALLOW NOTIFICATIONS  
  For Daily Alerts

  ಖಾಸಗಿ ಮೇಕ್‌ಅಪ್ ಮ್ಯಾನ್ ನಿಧನ: ಕುಟುಂಬಕ್ಕೆ ದೊಡ್ಡ ಸಹಾಯ ಮಾಡಿದ 'ಕೆಜಿಎಫ್' ಪೋಷಕ ನಟ

  |

  ತೆಲುಗಿನ ಜನಪ್ರಿಯ ಪೋಷಕ ನಟ ರಾವ್ ರಮೇಶ್ ಜನಮೆಚ್ಚುವ ಕಾರ್ಯವೊಂದನ್ನು ಮಾಡಿದ್ದಾರೆ. ತಮ್ಮ ಖಾಸಗಿ ಮೇಕಪ್‌ ಮ್ಯಾನ್ ನಿಧನಕ್ಕೆ ಸಂತಾಪ ಸೂಚಿಸುವ ಜೊತೆಗೆ ಅವರ ಕುಟುಂಬಕ್ಕೆ ದೊಡ್ಡ ಮಟ್ಟದ ಆರ್ಥಿಕ ಸಹಾಯವನ್ನು ಒದಗಿಸಿದ್ದಾರೆ.

  'ಕೆಜಿಎಫ್ 2' ಸಿನಿಮಾದಲ್ಲಿಯೂ ಪ್ರಮುಖ ಪೋಷಕ ಪಾತ್ರಧಾರಿಯಾಗಿ ನಟಿಸಿದ್ದ ರಾವ್ ರಮೇಶ್‌ರ ಖಾಸಗಿ ಮೇಕಪ್‌ ಮ್ಯಾನ್ ಬಾಬು ಇತ್ತೀಚೆಗೆ ನಿಧನ ಹೊಂದಿದ್ದರು. ಬಾಬು ಹಲವು ವರ್ಷಗಳಿಂದಲೂ ರಾವ್ ರಮೇಶ್‌ಗೆ ಖಾಸಗಿ ಮೇಕಪ್‌ ಮ್ಯಾನ್ ಆಗಿದ್ದರು.

  ಮೇಕಪ್‌ ಮ್ಯಾನ್‌ ನಿಧನಕ್ಕೆ ಸಂತಾಪ ಸೂಚಿಸಿದ್ದ ರಾವ್ ರಮೇಶ್, ಅವರ ಕುಟುಂಬಕ್ಕೆ 10 ಲಕ್ಷ ರುಪಾಯಿ ಆರ್ಥಿಕ ಸಹಾಯ ಮಾಡಿರುವುದಲ್ಲದೆ. ಕುಟುಂಬದ ಕಷ್ಟ-ಸುಖದಲ್ಲಿ ಜೊತೆಯಾಗಿ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ. ಬಾಬು ಅವರ ಪುತ್ರಿಯ ಶಿಕ್ಷಣದ ಜವಾಬ್ದಾರಿಯನ್ನು ಹೊರುವುದಾಗಿಯೂ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ರಾವ್ ರಮೇಶ್, ಬಾಬು ಕುಟುಂಬಕ್ಕೆ ಚೆಕ್ ಹಸ್ತಾಂತರಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ತಮ್ಮ ಖಾಸಗಿ ಸಿಬ್ಬಂದಿಗೆ ಸೂಕ್ತ ಗೌರವ ನೀಡದೆ ನಡೆಸಿಕೊಳ್ಳುವ ನಟ-ನಟಿಯರ ನಡುವೆ ತಮ್ಮ ಮೇಕಪ್‌ ಮ್ಯಾನ್ ಕಾಲವಾದ ಮೇಲೂ ಆತನ ಕುಟುಂಬಕ್ಕೆ ಬೆಂಬಲವಾಗಿ ನಿಂತ ರಮೇಶ್‌ರ ವ್ಯಕ್ತಿತ್ವವನ್ನು ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡಲಾಗುತ್ತಿದೆ.

  ರಾವ್ ರಮೇಶ್ ತಮ್ಮ ಅಭಿನಯದ ಮೂಲಕ ದಕ್ಷಿಣ ಭಾರತದ, ವಿಶೇಷವಾಗಿ ತೆಲುಗು ಚಿತ್ರರಂಗದ ಬೇಡಿಕೆಯ ಪೋಷಕ ನಟ ಹಾಗೂ ವಿಲನ್ ಆಗಿ ಗುರುತಿಸಿಕೊಂಡಿದ್ದಾರೆ. ಪ್ರತಿಯೊಂದು ಪಾತ್ರವನ್ನು ಭಿನ್ನ ಟಚ್‌ನೊಂದಿಗೆ ನಟಿಸುವುದು ಅವರ ಸ್ಟೈಲ್. ತೆಲುಗಿನ ಖ್ಯಾತ ನಟ ರಾವ್ ಗೋಪಾಲ್ ರಾವ್ ಪುತ್ರ ಆಗಿರುವ ರಾವ್ ರಮೇಶ್, ಸಾಕಷ್ಟು ಕಷ್ಟ ಪಟ್ಟೆ ಚಿತ್ರರಂಗದಲ್ಲಿ ಸ್ಥಾನ ಭದ್ರ ಪಡಿಸಿಕೊಂಡವರು.

  ಆರಂಭದಲ್ಲಿ ದಿನಗೂಲಿಗೆ ಎಕ್ಸ್‌ಟ್ರಾ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾವ್ ರಮೇಶ್ 2008 ರಲ್ಲಿ ಬಿಡುಗಡೆ ಆದ 'ಗಮ್ಯಂ' ಸಿನಿಮಾ ಮೂಲಕ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು. 'ಕೆಜಿಎಫ್ 2' ಸಿನಿಮಾದಲ್ಲಿ ಸಿಬಿಐ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ರವೀನಾ ಟಂಡನ್ ಪತ್ರದೊಟ್ಟಿಗಿನ ಅವರ ಸಂಭಾಷಣೆ ಬಹಳ ಜನಪ್ರಿಯವಾಗಿತ್ತು.

  English summary
  Telugu actor Rao Ramesh's personal makeup man recently died. Rao Ramesh gave 10 lakh rs to his family and promise them to support his family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X