For Quick Alerts
  ALLOW NOTIFICATIONS  
  For Daily Alerts

  ಅದಾ ಶರ್ಮ ಮದುವೆ ಆಗುವ ಹುಡುಗನಿಗೆ 'ಈ' ಗುಣಗಳು ಇರಲೇಬೇಕು.!

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಚಿತ್ರದಲ್ಲಿ ನಾಯಕಿ ಆಗಿ ನಟಿಸಿದ ಬೆಡಗಿ ಅದಾ ಶರ್ಮ. ಟಾಲಿವುಡ್ ಮತ್ತು ಬಾಲಿವುಡ್ ನಲ್ಲೂ ಬಹು ಬೇಡಿಕೆ ಹೊಂದಿರುವ ಅದಾ ಶರ್ಮ ಸದ್ಯ 'ಕಮಾಂಡೋ-3' ಚಿತ್ರದ ಪ್ರಮೋಷನ್ ನಲ್ಲಿ ಬಿಜಿಯಾಗಿದ್ದಾರೆ.

  ಈ ನಡುವೆ ಉದ್ಯಮಿಯೊಬ್ಬರ ಜೊತೆಗೆ ನಟಿ ಅದಾ ಶರ್ಮ ಡೇಟಿಂಗ್ ಮಾಡುತ್ತಿದ್ದಾರಂತೆ ಎಂಬ ಅಂತೆ-ಕಂತೆ ಕೂಡ ಹಬ್ಬಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ನಟಿ ಅದಾ ಶರ್ಮಾ ಕ್ಲಾರಿಟಿ ಕೊಟ್ಟಿದ್ದಾರೆ.

  ''ಇದು ಶುದ್ಧ ಸುಳ್ಳು ಸುದ್ದಿ. ಆ ಉದ್ಯಮಿ ಯಾರು.? ನಾನಿನ್ನೂ ಸಿಂಗಲ್'' ಎನ್ನುವ ಮೂಲಕ ಎಲ್ಲಾ ಗಾಸಿಪ್ ಗಳಿಗೆ ಅದಾ ಶರ್ಮಾ ಫುಲ್ ಸ್ಟಾಪ್ ಇಟ್ಟಿದ್ದಾರೆ. ಜೊತೆಗೆ ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎಂಬುದನ್ನ ಬಹಿರಂಗ ಪಡಿಸಿದ್ದಾರೆ.

  ಅದಾ ಶರ್ಮ ಮದುವೆ ಆಗುವ ಹುಡುಗನಿಗೆ ದೋಸೆ ಮತ್ತು ಚಟ್ನಿ ರುಚಿ ರುಚಿಯಾಗಿ ಮಾಡಲು ಬರಲೇಬೇಕು. ಆತ ಪ್ರಾಣಿ ಪ್ರಿಯ ಆಗಿರಬೇಕು. ಯಾವಾಗಲೂ ನಗು ನಗುತ್ತಾ ಇರಬೇಕು. ಇಷ್ಟೆಲ್ಲಾ ಗುಣಗಳು ಇರುವ ಯುವಕನೊಂದಿಗೆ ಅದಾ ಶರ್ಮ ಹಸೆಮಣೆ ಏರಲು ರೆಡಿ.

  ನಗ್ನ ಫೋಟೋ ಹಾಕಿ ಸಂಚಲನ ಸೃಷ್ಟಿಸಿದ 'ರಣವಿಕ್ರಮ' ನಟಿನಗ್ನ ಫೋಟೋ ಹಾಕಿ ಸಂಚಲನ ಸೃಷ್ಟಿಸಿದ 'ರಣವಿಕ್ರಮ' ನಟಿ

  ಅಂದ್ಹಾಗೆ ಅದಾ ಶರ್ಮಾ ನಟಿ ಮಾತ್ರ ಅಲ್ಲ.. ಪ್ರತಿಭಾವಂತೆ ಕೂಡ ಹೌದು. ಮಾರ್ಷಲ್ ಆರ್ಟ್ಸ್, ಜಿಮ್ನಾಸ್ಟಿಕ್ಸ್ ಮತ್ತು ನೃತ್ಯ ಅಭ್ಯಾಸ ಮಾಡಿದ್ದಾರೆ ಅದಾ ಶರ್ಮಾ. ಕಥಕ್, ಸಾಲ್ಸಾ, ಜ್ಯಾಸ್, ಬ್ಯಾಲೆ ಮತ್ತು ಬೆಲ್ಲಿ ಡ್ಯಾನ್ಸ್ ನಲ್ಲಿ ಅದಾ ಶರ್ಮಾ ನಿಪುಣರಂತೆ.

  ನ್ಯೂಸ್ ಪೇಪರ್ ಡ್ರೆಸ್ ಧರಿಸಿ, ಇಂಟರ್ನೆಟ್ ಗೆ ಕಿಚ್ಚು ಹಚ್ಚಿದ ಪುನೀತ್ ನಾಯಕಿ.!ನ್ಯೂಸ್ ಪೇಪರ್ ಡ್ರೆಸ್ ಧರಿಸಿ, ಇಂಟರ್ನೆಟ್ ಗೆ ಕಿಚ್ಚು ಹಚ್ಚಿದ ಪುನೀತ್ ನಾಯಕಿ.!

  ಇನ್ನೂ ಸಿಂಗಲ್ ಅಂತ ಹೇಳಿಕೊಂಡಿರುವ ಅದಾ ಶರ್ಮ ಇದೀಗ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬಿಜಿಯಿದ್ದಾರೆ. ಮಿಲ್ಕಿ ಬ್ಯೂಟಿ ಅದಾ ಶರ್ಮ ಕೈಹಿಡಿಯಲಿರುವ ಗಂಡು ಯಾರಾಗ್ತಾರೋ, ಕಾದು ನೋಡಬೇಕು.

  English summary
  Telugu Actress Adah Sharma reacts on dating rumors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X