For Quick Alerts
  ALLOW NOTIFICATIONS  
  For Daily Alerts

  'ಜಾನು' ಕಲೆಕ್ಷನ್: ನಾಗಾರ್ಜುನ ಸೊಸೆ ಸಮಂತಾಗೆ ಸಿಕ್ತು ಬಿಗ್ ಶಾಕ್.!

  |

  ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಸಮಂತಾ ಬಹು ಬೇಡಿಕೆಯ ನಟಿ. 'ಯೇ ಮಾಯ ಚೇಸಾವೆ', 'ವಿನೈತಾಂಡಿ ವರುವಾಯ', 'ಬೃಂದಾವನಂ', 'ದೂಕುಡು', 'ಈಗ', 'ಅತ್ತಾರಿಂಟಿಕಿ ದಾರೇದಿ', 'ಮನಂ', 'ಮೆರ್ಸಲ್', 'ರಂಗಸ್ಥಳಂ', 'ಮಹಾನಟಿ', 'ಸೂಪರ್ ಡೀಲಕ್ಸ್' ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ನಟಿ ಸಮಂತಾ ಅಭಿನಯಿಸಿದ್ದಾರೆ.

  ಇದೀಗ ನಟಿ ಸಮಂತಾ ಅಭಿನಯದ 'ಜಾನು' ಚಿತ್ರ ತೆರೆಗೆ ಬಂದಿದೆ. ತಮಿಳಿನ '96' ಚಿತ್ರದ ರೀಮೇಕ್ ಈ 'ಜಾನು'. ತಮಿಳಿನಲ್ಲಿ ಈ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಗಿದ್ದರೂ, ತೆಲುಗಿನಲ್ಲಿ ಕಮಾಲ್ ಮಾಡುತ್ತಿಲ್ಲ. ನಿರೀಕ್ಷಿಸಿದ ಮಟ್ಟಕ್ಕೆ 'ಜಾನು' ಚಿತ್ರಕ್ಕೆ ಓಪನ್ನಿಂಗ್ ಸಿಕ್ಕಿಲ್ಲ.

  'ಜಾನು' ಚಿತ್ರಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ಲಭ್ಯವಾಗಿದೆ. 'ಜಾನು' ಚಿತ್ರದ ಬಗ್ಗೆ ಹೈ ಎಕ್ಸ್ ಪೆಕ್ಟೇಷನ್ ಇಟ್ಟುಕೊಂಡಿದ್ದ ನಟಿ ಸಮಂತಾ, ಸಿನಿಮಾಗೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಶಾಕ್ ಆಗಿದ್ದಾರೆ. ಮುಂದೆ ಓದಿರಿ...

  'ಜಾನು' ಚಿತ್ರದ ಕಲೆಕ್ಷನ್ ಎಷ್ಟು.?

  'ಜಾನು' ಚಿತ್ರದ ಕಲೆಕ್ಷನ್ ಎಷ್ಟು.?

  ರಿಲೀಸ್ ಆದ ದಿನ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ 'ಜಾನು' ಸಿನಿಮಾ ಎರಡು ಕೋಟಿ ಕಲೆಕ್ಷನ್ ಮಾಡಿತ್ತು. ಇದೀಗ ಮೊದಲ ವೀಕೆಂಡ್ ಕಲೆಕ್ಷನ್ ರಿಪೋರ್ಟ್ ಸಿಕ್ಕಿದ್ದು, ಮೂರು ದಿನಗಳಲ್ಲಿ 'ಜಾನು' ಚಿತ್ರ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಕೇವಲ 5.5 ಕೋಟಿ ಕಲೆಕ್ಷನ್ ಮಾಡುವಲ್ಲಿ ಮಾತ್ರ ಯಶಸ್ವಿ ಆಗಿದೆ.

  ಸಮಂತಾ ಚಿತ್ರ ನೋಡಿ ಹೃದಯಾಘಾತ: ಚಿತ್ರಮಂದಿರದಲ್ಲಿ ಪ್ರಾಣಬಿಟ್ಟ ವ್ಯಕ್ತಿ.!

  ಯು.ಎಸ್ ನಲ್ಲೂ ಅಷ್ಟಕಷ್ಟೆ.!

  ಯು.ಎಸ್ ನಲ್ಲೂ ಅಷ್ಟಕಷ್ಟೆ.!

  ಶರ್ವಾನಂದ್ ಮತ್ತು ಸಮಂತಾ ಅಭಿನಯದ 'ಜಾನು' ಚಿತ್ರಕ್ಕೆ ಯು.ಎಸ್ ನಲ್ಲೂ ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ಸಿಕ್ಕಿಲ್ಲ. ವರದಿಗಳ ಪ್ರಕಾರ, ಯು.ಎಸ್. ಬಾಕ್ಸ್ ಆಫೀಸ್ ನಲ್ಲಿ 'ಜಾನು' ಚಿತ್ರ ಎರಡು ದಿನಗಳಲ್ಲಿ $68,000 ಕಲೆಕ್ಷನ್ ಮಾಡಿದೆ. ಸಮಂತಾ ವೃತ್ತಿ ಜೀವನದಲ್ಲಿಯೇ ಇದು ಅತಿ ಕಡಿಮೆ ಕಲೆಕ್ಷನ್ ಎನ್ನಲಾಗಿದೆ.

  ಚಿತ್ರರಂಗಕ್ಕೆ ಸಮಂತಾ ಗುಡ್ ಬೈ.? ದಿಢೀರ್ ಅಂತ ನಾಗಾರ್ಜುನ ಸೊಸೆ ಹೀಗಂದಿದ್ಯಾಕೆ.?

  ನಿರ್ಮಾಪಕರಿಗೆ ಲಾಭ ಆಗುತ್ತಾ.?

  ನಿರ್ಮಾಪಕರಿಗೆ ಲಾಭ ಆಗುತ್ತಾ.?

  ಬಂಡವಾಳ ಹಾಕಿರುವ ನಿರ್ಮಾಪಕರು ಮತ್ತು ವಿತರಕರಿಗೆ ಲಾಭ ಆಗಬೇಕು ಅಂದ್ರೆ, 'ಜಾನು' ಸಿನಿಮಾ ಕಡಿಮೆ ಅಂದರೂ 50 ಕೋಟಿ ಗಡಿ ದಾಟಬೇಕು. 'ಜಾನು' ಈಗ ಹೋಗುತ್ತಿರುವ ಸ್ಪೀಡ್ ನೋಡಿದ್ರೆ, ನಿರ್ಮಾಪಕರ ಜೇಬು ತುಂಬುವುದು ಡೌಟ್ ಎನ್ನುತ್ತಿದ್ದಾರೆ ಟ್ರೇಡ್ ಎಕ್ಸ್ ಪರ್ಟ್ಸ್.

  ಪ್ರೇಕ್ಷಕರ ತಿರಸ್ಕಾರಕ್ಕೆ ಒಳಗಾದ ಸಮಂತಾ: ಕಾರಣ ಏನು?

  'ಜಾನು' ಚಿತ್ರದ ಕುರಿತು...

  'ಜಾನು' ಚಿತ್ರದ ಕುರಿತು...

  ಸಿ.ಪ್ರೇಮ್ ಕುಮಾರ್ ನಿರ್ದೇಶನದ ಸಮಂತಾ ಮತ್ತು ಶರ್ವಾನಂದ್ ಅಭಿನಯದ ಸಿನಿಮಾ 'ಜಾನು'. ದಿಲ್ ರಾಜು ನಿರ್ಮಾಣ ಮಾಡಿರುವ 'ಜಾನು' ಚಿತ್ರಕ್ಕೆ ಗೋವಿಂದ್ ವಸಂತ ಸಂಗೀತ ನೀಡಿದ್ದಾರೆ.

  English summary
  Telugu Actress Samantha gets a huge shock over Jaanu Box office Collection.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X