For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ಆಂಕರ್ ಸುಮಾ ಒಂದು ಕಾರ್ಯಕ್ರಮಕ್ಕೆ ಪಡೆಯುವ ಸಂಭಾವನೆ ಎಷ್ಟು?

  |

  ಕೆಲವು ಸ್ಟಾರ್ ಆಂಕರ್ ಗಳಿಗೆ ಸಿನಿಮಾ ಸ್ಟಾರ್ ನಟ-ನಟಿಯರಿಗಿಂತ ಹೆಚ್ಚು ಸಂಭಾವನೆ ಸಿಗುತ್ತೆ. ಸಿನಿಮಾ ನಟಿಯರು ಹದಿನೈದರಿಂದ ಇಪ್ಪತ್ತು ಅಥವಾ ಮೂವತ್ತು ದಿನ ಚಿತ್ರೀಕರಣ ಮಾಡಿ ಸಂಪಾದನೆ ಮಾಡುವ ಸಂಭಾವನೆಯನ್ನು ಟಿವಿ ಆಂಕರ್ ಗಳು ಒಂದು ಪ್ರೋಗ್ರಾಂ ಮಾಡಿ ಗಳಿಸುತ್ತಾರೆ ಅಂದ್ರೆ ನಂಬಲೇಬೇಕು.

  ದಕ್ಷಿಣ ಭಾರತದ ದುಬಾರಿ ಆಂಕರ್ ಗಳು ಎಂದು ಪಟ್ಟಿ ಮಾಡುವುದಾರೇ, ಅದರಲ್ಲಿ ಮೊದಲು ಸಿಗುವ ಹೆಸರು ಸುಮಾ ಕನಕಾಲ. ತೆಲುಗು ಇಂಡಸ್ಟ್ರಿಯಲ್ಲಿ ಸುಮಾರು 20 ವರ್ಷದಿಂದ ಗುರುತಿಸಿಕೊಂಡಿರುವ ಸುಮಾ ಇಲ್ಲದೇ ಯಾವ ಸಿನಿಮಾದ ಆಡಿಯೋ ಬಿಡುಗಡೆ, ಟ್ರೈಲರ್ ಬಿಡುಗಡೆ, ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಲ್ಲ ಎನ್ನುವಷ್ಟು ಬೇಡಿಕೆ ಹೊಂದಿದ್ದಾರೆ.

  ಡೈರೆಕ್ಟರ್ ಆದ ಆಂಕರ್ 'ಬೆಸುಗೆ' ಪವನ್ ಕುಮಾರ್ಡೈರೆಕ್ಟರ್ ಆದ ಆಂಕರ್ 'ಬೆಸುಗೆ' ಪವನ್ ಕುಮಾರ್

  ಈಕೆ ಶೋ ಹೊಸ್ಟ್ ಮಾಡಿದ್ರೆ ಅದಕ್ಕೊಂದು ಕಳೆ, ಅದಕ್ಕೆ ಜೋಶ್ ಎಂದು ನಂಬುವ ಚಿತ್ರತಂಡ ಈಕೆ ಕೇಳಿದಷ್ಟು ಸಂಭಾವನೆ ಕೊಡಲು ಸಿದ್ಧರಿದ್ದಾರಂತೆ. ಹಾಗಿದ್ರೆ, ಸುಮಾ ಕನಕಾಲ ಒಂದು ಕಾರ್ಯಕ್ರಮ ಮಾಡುವುದಕ್ಕೆ ಪಡೆಯುವ ಸಂಭಾವನೆ ಎಷ್ಟು? ಮುಂದೆ ಓದಿ....

  ಸಿನಿಮಾ ಯಾವುದೇ ಇರಲಿ, ಆಂಕರ್ ಇವರೇ!

  ಸಿನಿಮಾ ಯಾವುದೇ ಇರಲಿ, ಆಂಕರ್ ಇವರೇ!

  ಎನ್.ಟಿ.ಆರ್ ಸಿನಿಮಾ ಆಗಲಿ, ಮಹೇಶ್ ಬಾಬು ಸಿನಿಮಾ ಆಗಲಿ, ಚಿರಂಜೀವಿ ಸಿನಿಮಾ ಆಗಲಿ ಅಥವಾ ನಾಗಾರ್ಜುನ ಸಿನಿಮಾ ಆಗಲಿ, ಪ್ರಭಾಸ್ ಸಿನಿಮಾ ಆಗಲಿ....ತೆಲುಗಿನ ಯಾವುದೇ ಸ್ಟಾರ್ ನಟರ ಸಿನಿಮಾ ಕಾರ್ಯಕ್ರಮವಾಗಲಿ, ಅಲ್ಲಿ ನಿರೂಪಕಿಯಾಗಿ ಸುಮಾ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ತೆಲುಗು ಇಂಡಸ್ಟ್ರಿಯ ಕಾಸ್ಟ್ಲಿ ಆಂಕರ್ ಎಂದೇ ಗುರಿತಿಸಿಕೊಂಡಿದ್ದಾರೆ.

  ಒಂದು ಕಾರ್ಯಕ್ರಮಕ್ಕೆ ಈಕೆಯ ಸಂಭಾವನೆ ಎಷ್ಟು?

  ಒಂದು ಕಾರ್ಯಕ್ರಮಕ್ಕೆ ಈಕೆಯ ಸಂಭಾವನೆ ಎಷ್ಟು?

  ತೆಲುಗು ಇಂಡಸ್ಟ್ರಿಯಲ್ಲಿ ನಂಬರ್ 1 ನಿರೂಪಕಿ ಆಗಿರುವ ಸುಮಾ ಅವರು ಒಂದು ಕಾರ್ಯಕ್ರಮವನ್ನ ಹೋಸ್ಟ್ ಮಾಡಲು ಸುಮಾರು 2 ರಿಂದ 2.5 ಲಕ್ಷದವರೆಗೂ ಚಾರ್ಜ್ ಮಾಡ್ತಾರಂತೆ. ಹೊಸಬರ ಸಿನಿಮಾ ಈಕೆ ಮಾಡುವುದು ಬಹಳ ಅಪರೂಪ. ಸ್ಟಾರ್ ನಟರ ಚಿತ್ರಗಳಿಗೆ ಈಕೆ ಫಿಕ್ಸ್.

  ಆಂಕರ್ ಆಗುವ ಆಸೆಯಿಂದಲೇ 'ಕನ್ನಡದ ಕಣ್ಮಣಿ' ವೇದಿಕೆ ಏರಿದ ಸನಿಕಾಆಂಕರ್ ಆಗುವ ಆಸೆಯಿಂದಲೇ 'ಕನ್ನಡದ ಕಣ್ಮಣಿ' ವೇದಿಕೆ ಏರಿದ ಸನಿಕಾ

  ಅವಾರ್ಡ್ ಕಾರ್ಯಕ್ರಮಕ್ಕೆ ಬೇರೆ ರೇಟು

  ಅವಾರ್ಡ್ ಕಾರ್ಯಕ್ರಮಕ್ಕೆ ಬೇರೆ ರೇಟು

  ಸಿನಿಮಾದ ಆಡಿಯೋ ಮತ್ತು ಟ್ರೈಲರ್ ಕಾರ್ಯಕ್ರಮಕ್ಕೆ ಒಂದು ಮೊತ್ತವಾದರೇ, ಅವಾರ್ಡ್ ಫಂಕ್ಷನ್ ಏನಾದರು ನಿರೂಪಣೆ ಮಾಡಿದ್ರೆ ಅದಕ್ಕೆ ಬೇರೆಯದ್ದೆ ಸಂಭಾವನೆ ಇರುತ್ತೆ. ಸಾಮಾನ್ಯ ಕಾರ್ಯಕ್ರಮಕ್ಕಿಂತ ಹೆಚ್ಚು ಸಂಭಾವನೆ ಅವಾರ್ಡ್ ಕಾರ್ಯಕ್ರಮಕ್ಕೆ ಪಡೆಯುತ್ತಾರಂತೆ.

  ಸುಮಾ ಕ್ರೇಜ್ ಹೆಚ್ಚಿದೆ

  ಸುಮಾ ಕ್ರೇಜ್ ಹೆಚ್ಚಿದೆ

  ಮೂಲತಃ ಮಲಯಾಳಿಯಾಗಿದ್ದರೂ ತೆಲುಗು ಭಾಷೆಯನ್ನ ಸರಾಗವಾಗಿ ಮಾತನಾಡಬಲ್ಲರು. ಈಕೆಯ ಮಾತು ಅಂದ್ರೆ ಸೆಲೆಬ್ರಿಟಿಗಳು ಕೂಡ ಖುಷಿಯಿಂದ ಕೇಳುತ್ತಾರೆ. ಜನರಿಗೂ ಸುಮಾ ಮಾತು ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಈಕೆ ಕಾರ್ಯಕ್ರಮ ನಡೆಸಿಕೊಡುವ ರೀತಿ ಕೂಡ ಅಷ್ಟೇ ಮನರಂಜನೆಯಾಗಿರುತ್ತೆ. ಹಾಗಾಗಿ, ಸುಮಾ ಅವರಿಗೆ ಟಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಿದೆ.

  ಸುಮಾ ಅವರ ಪತಿ ಓರ್ವ ನಟ

  ಸುಮಾ ಅವರ ಪತಿ ಓರ್ವ ನಟ

  ಕೇರಳದಲ್ಲಿ ಜನಿಸಿದ ಸುಮಾ, ತೆಲುಗು ನಟ ರಾಜೀವ್ ಕನಕಾಲ ಅವರ ಜೊತೆ ವಿವಾಹವಾಗಿದ್ದಾರೆ. ಈಗಲೂ ಸುಮಾ ಅವರ ವ್ಯವಹಾರಗಳನ್ನು ಖುದ್ದು ಪತಿಯೇ ನೋಡಿಕೊಳ್ಳುತ್ತಾರೆ ಎಂಬ ಮಾತಿದೆ. ಸುಮಾ ಅವರ ಸಂಭಾವನೆ ವಿಚಾರವೂ ರಾಜೀವ್ ಅವರೇ ನಿರ್ಧರಿಸುತ್ತಾರಂತೆ.

  ಅನುಸೂಯ ನೆಕ್ಸ್ಟ್!

  ಅನುಸೂಯ ನೆಕ್ಸ್ಟ್!

  ಸುಮಾ ಕನಕಾಲ ಅವರು ಬಿಟ್ಟರೆ ಟಾಲಿವುಡ್ ನಲ್ಲಿ ಹೆಚ್ಚು ಬೇಡಿಕೆ ಉಳಿಸಿಕೊಂಡಿರುವುದು ಅನುಸೂಯ. ಈಕೆ ಕೂಡ ಒಂದು ಕಾರ್ಯಕ್ರಮಕ್ಕೆ 2 ಲಕ್ಷದವರೆಗೂ ಸಂಭಾವನೆ ಕೇಳುತ್ತಾರೆ ಎನ್ನಲಾಗಿದೆ. ಅನುಸೂಯ ಅವರು ಟಿವಿ ಶೋ, ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ, ಹೆಚ್ಚಾಗಿ ಸಿನಿಮಾ ಕಾರ್ಯಕ್ರಮಗಳನ್ನ ನಿರೂಪಣೆ ಮಾಡಲ್ಲ.

  English summary
  South India's famous tv anchor suma kanakala charging huge amount for one programme. whats is the remuneration of suma per event.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X