Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯಾವ ರಶ್ಮಿಕಾ, ಯಾವ ಪೂಜಾ ಹೆಗ್ಡೆ? ಇಬ್ಬರಿಗಿಂತ ಶ್ರೀಲೀಲಾ ಗ್ರೇಟ್ ಎಂದ ತೆಲುಗು ಮಂದಿ!
ನಟಿಯರಿಗೆ ಹೆಚ್ಚಿನ ಕ್ರೇಜ್ ಇರುವ ಇಂಡಸ್ಟ್ರಿಗಳ ಪೈಕಿ ತೆಲುಗು ಚಿತ್ರರಂಗ ತುಸು ಮುಂದು ಎಂದೇ ಹೇಳಬಹುದು. ತೆಲುಗು ಚಿತ್ರರಂಗಗಳಿಗೆ ಕಾಲಿಟ್ಟ ನಂತರ ದೇಶವ್ಯಾಪಿ ಖ್ಯಾತಿ ಗಳಿಸಿದ ನಾಯಕಿಯರ ಹಲವಾರು ಉದಾಹರಣೆಗಳಿವೆ. ಇನ್ನು ಬೇರೆ ರಾಜ್ಯಗಳ ನಟಿಯರನ್ನು ತಮ್ಮ ಇಂಡಸ್ಟ್ರಿಗೆ ಕರೆತರುವಲ್ಲಿ ತೆಲುಗು ನಿರ್ಮಾಪಕರು ನಿಸ್ಸೀಮರು. ಹೌದು, ತೆಲುಗು ಚಿತ್ರರಂಗದ ಖ್ಯಾತ ನಟಿಯರ ಪಟ್ಟಿಯನ್ನು ತೆಗೆದರೆ ಬಹುತೇಕರು ತಮಿಳು ನಾಡು, ಕರ್ನಾಟಕ ಹಾಗೂ ಉತ್ತರ ಭಾಗದವರೇ ಆಗಿರುತ್ತಾರೆ.
ಅದರಲ್ಲಿಯೂ ಪ್ರಸ್ತುತ ತೆಲುಗಿನಲ್ಲಿ ಮಿಂಚುತ್ತಿರು ನಟಿಯರನ್ನು ಗಣನೆಗೆ ಕರ್ನಾಟಕದವರೇ ಕಾಣಸಿಗಲಿದ್ದಾರೆ. ತೆಲುಗಿನಲ್ಲಿ ಸದ್ಯ ವಿಪರೀತ ಕ್ರೇಜ್ ಹೊಂದಿರುವ ನಟಿ ರಶ್ಮಿಕಾ ಮಂದಣ್ಣ ಕೂಡ ಕರ್ನಾಟಕ ಮೂಲದವರು. ಟಾಲಿವುಡ್ ಕ್ವೀನ್ ಅನುಷ್ಕಾ ಶೆಟ್ಟಿ, ಸೆನ್ಸೇಷನಲ್ ನಟಿ ಕೃತಿ ಶೆಟ್ಟಿ ಹಾಗೂ ಟ್ರೆಂಡಿಂಗ್ ನಟಿಯರ ಪಟ್ಟಿಯಲ್ಲಿರುವ ಪೂಜಾ ಹೆಗ್ಡೆ ಈ ಎಲ್ಲರೂ ಸಹ ಕರ್ನಾಟಕ ಮೂಲದವರೇ.
ಹೀಗೆ ತೆಲುಗು ಚಿತ್ರರಂಗದಲ್ಲಿ ಕರ್ನಾಟಕ ಮೂಲದ ನಟಿಯರು ಧೂಳೆಬ್ಬಿಸುತ್ತಿದ್ದು, ತೆಲುಗಿನ ದೊಡ್ಡ ಚಿತ್ರಗಳಲ್ಲಿ ಬಹುತೇಕ ಇವರೇ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನು ಇಷ್ಟು ದಿನಗಳವರೆಗೆ ಪೂಜಾ ಹೆಗ್ಡೆ ನಂಬರ್ ಒನ್, ರಶ್ಮಿಕಾ ನಂಬರ್ ಒನ್ ಎಂಬ ವಾದಗಳು ನಡೆಯುತ್ತಿದ್ದ ತೆಲುಗು ಚಿತ್ರರಂಗದಲ್ಲಿ ಕಳೆದ ಶುಕ್ರವಾರದಿಂದ ( ಡಿಸೆಂಬರ್ 23 ) ಈ ಇಬ್ಬರನ್ನೂ ಹಿಂದಿಕ್ಕುವ ಮಟ್ಟಕ್ಕೆ ನಟಿ ಶ್ರೀಲೀಲಾ ಹೆಸರು ಕೇಳಿಬರುತ್ತಿದೆ. ಶ್ರೀಲೀಲಾ ಕುರಿತು ವಿಪರೀತ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ತೆಲುಗು ಸಿನಿ ಮಂದಿ ಶ್ರೀಲೀಲಾನೇ ನಂಬರ್ ಒನ್ ಎನ್ನುತ್ತಿದ್ದಾರೆ.

ಪೂಜಾ ಹೆಗ್ಡೆ, ರಶ್ಮಿಕಾಗಿಂತ ಶ್ರೀಲೀಲ್ ಗ್ರೇಟ್!
ಹೌದು, ರವಿತೇಜಾ ನಟನೆಯ ಧಮಾಕಾ ಚಿತ್ರ ಕಳೆದ ಶುಕ್ರವಾರ ಬಿಡುಗಡೆಗೊಂಡಿದ್ದು ಈ ಚಿತ್ರದಲ್ಲಿನ ಶ್ರೀಲೀಲಾ ನಟನೆಗೆ ತೆಲುಗು ಸಿನಿ ಮಂದಿ ಫಿದಾ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆಗಿಂತ ಶ್ರೀಲೀಲಾ ಗ್ರೇಟ್ ಎಂದು ಪೋಸ್ಟ್ ಮಾಡಿದ್ದಾರೆ. ಯಾರೋ ಒಂದಿಬ್ಬರು ಮಾತ್ರವಲ್ಲದೇ ಬಹುತೇಕ ತೆಲುಗು ಸಿನಿ ರಸಿಕರು ಇಂತಹದ್ದೇ ಟ್ವೀಟ್ ಮಾಡಿ ಶ್ರೀಲೀಲಾ ಪ್ರಸ್ತುತ ಎಲ್ಲಾ ನಟಿಯರಿಗಿಂತ ಗ್ರೇಟ್ ಎಂದಿದ್ದಾರೆ.

ದಿಢೀರ್ ಖ್ಯಾತಿಗೆ ಕಾರಣವೇನು?
ಇನ್ನು ಶ್ರೀಲೀಲಾ ಸಾಮಾಜಿಕ ಜಾಲತಾಣದಲ್ಲಿ ದಿಢೀರನೆ ಖ್ಯಾತಿ ಗಳಿಸಲು ಕಾರಣ ಧಮಾಕಾ ಚಿತ್ರದಲ್ಲಿನ ನಟನೆ ಹಾಗೂ ಡಾನ್ಸ್. ಅದರಲ್ಲಿಯೂ ಚಿತ್ರದಲ್ಲಿನ ಶ್ರೀಲೀಲಾ ಡಾನ್ಸ್ ಪ್ರೇಕ್ಷಕರ ಮನ ಗೆದ್ದಿದೆ. ತೆಲುಗು ಚಿತ್ರರಂಗದಲ್ಲಿರುವ ಪ್ರಸ್ತುತ ನಟಿಯರು ಈ ಮಟ್ಟಕ್ಕೆ ಹೆಜ್ಜೆ ಹಾಕಬಹುದಾ ಎಂಬುದನ್ನು ಊಹಿಸಿಕೊಳ್ಳಲೂ ಸಹ ಆಗದ ಮಟ್ಟಕ್ಕಿದೆ ಚಿತ್ರದಲ್ಲಿ ಶ್ರೀಲೀಲಾ ಸ್ಟೆಪ್ಸ್. ರವಿತೇಜಾ ರೀತಿಯ ಎನರ್ಜಿಟಿಕ್ ನಟನ ಡಾನ್ಸ್ ಹಾಗೂ ಎನರ್ಜಿ ಲೆವೆಲ್ ಮೀರಿಸುವ ಮಟ್ಟಕ್ಕೆ ಶ್ರೀಲೀಲಾ ಹೆಜ್ಜೆ ಹಾಕಿರುವುದೇ ಸದ್ಯ ಆಕೆಯನ್ನು ಸತತ ಟ್ರೆಂಡಿಂಗ್ ಪಟ್ಟಿಯಲ್ಲಿ ಇರುವಂತೆ ಮಾಡಿದೆ. ಎಲ್ಲಾ ನಟಿಯರು ನಟಿಸುತ್ತಾರೆ, ಆದರೆ ಶ್ರೀಲೀಲಾ ನಟನೆ ಜತೆಗೆ ನಟರೂ ನಾಚುವಂತೆ ಡಾನ್ಸ್ ಮಾಡುವುದು ಆಕೆಗಿರುವ ಎಕ್ಸ್ಟ್ರಾ ಟ್ಯಾಲೆಂಟ್ ಎಂದು ತೆಲುಗು ಮಂದಿ ಹೊಗಳಿದ್ದಾರೆ.

ಚಿತ್ರರಂಗವನ್ನು ರೂಲ್ ಮಾಡ್ತಾರೆ!
ಬ್ಯೂಟಿ, ಗ್ಲಾಮರ್, ಡಾನ್ಸ್, ನಟನೆ ಎಲ್ಲದ್ದರಲ್ಲೂ ಎತ್ತಿದ ಕೈ ಎನಿಸಿಕೊಂಡಿರುವ ಶ್ರೀಲೀಲಾ ಚಿತ್ರರಂಗದಲ್ಲಿ ದೊಡ್ಡ ನಟಿಯಾಗಿ ರೂಲ್ ಮಾಡಲಿದ್ದಾರೆ, ಕೇವಲ ಟಾಲಿವುಡ್ ಮಾತ್ರವಲ್ಲ, ಎಲ್ಲಾ ಚಿತ್ರರಂಗಗಳಲ್ಲೂ ಶ್ರೀಲೀಲಾ ದೊಡ್ಡ ನಟಿಯಾಗಿ ಮಿಂಚಲಿದ್ದಾರೆ ಎಂದು ನೆಟ್ಟಿಗರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಧಮಾಕಾ ಶ್ರೀಲೀಲಾ ನಟನೆಯ ಎರಡನೇ ತೆಲುಗು ಚಿತ್ರವಾಗಿದ್ದು ತನ್ನ ಮೊದಲ ಚಿತ್ರ ಪೆಳ್ಳಿಸಂದಡಿ ಮೂಲಕವೂ ಸಹ ಶ್ರೀಲೀಲಾ ಇದೇ ರೀತಿ ನಟನೆ ಹಾಗೂ ಡಾನ್ಸ್‌ಗಾಗಿ ದೊಡ್ಡ ಮಟ್ಟದ ಪ್ರಶಂಸೆ ಪಡೆದುಕೊಂಡಿದ್ದರು.