Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿಶ್ಚಿತಾರ್ಥ ಮುರಿದುಕೊಂಡ ತೆಲುಗು ತಾರೆಯರ ಪಟ್ಟಿ ಇಲ್ಲಿದೆ
ತಾರೆಯರು ತೆರೆಮೇಲಷ್ಟೇ ಬೋಲ್ಡ್ ಆಗಿ ಕಾಣಿಸಿಕೊಳ್ಳುವುದಿಲ್ಲ. ತೆರೆಯ ಹಿಂದೆನೂ ಅವರು ತುಂಬಾನೇ ಬೋಲ್ಡ್ ಆಗಿರುತ್ತಾರೆ. ಅವರು ತಮ್ಮ ಜೀವನ ಅತ್ಯಮೂಲ್ಯ ನಿರ್ಧಾರಗಳನ್ನು ಅಷ್ಟೇ ಬೋಲ್ಡ್ ಆಗಿ ತೆಗೆದುಕೊಳ್ಳುತ್ತಾರೆ. ಅದರಲ್ಲೂ ಮದುವೆ ವಿಚಾರದಲ್ಲಿ ಕೆಲವು ತಾರೆಯರು ತುಂಬಾನೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವರು ಮದುವೆ ಮುರಿದು ಕೊಳ್ಳುತ್ತಾರೆ. ಕೆಲವರು ನಿಶ್ಚಿತಾರ್ಥವನ್ನೂ ಮುರಿದುಕೊಂಡ ಉದಾಹರಣೆಗಳಿವೆ.
ಟಾಲಿವುಡ್ ಅಂತಷ್ಟೇ ಅಲ್ಲ. ಬಾಲಿವುಡ್, ಸ್ಯಾಂಡಲ್‌ವುಡ್, ಕಾಲಿವುಡ್‌ಗಳಲ್ಲೂ ತಾರೆಯರು ಇನ್ನೇನು ಮದುವೆ ಆಗೇ ಬಿಡುತ್ತಾರೆ ಎನ್ನುವಾಗಲೇ ಅದು ಮುರಿದು ಬಿದ್ದಿದೆ. ಸದ್ಯ ಟಾಲಿವುಡ್‌ನಲ್ಲಿ ಖ್ಯಾತಿ ಪಡೆದಿರುವ ತಾರೆಯರು ಮದುವೆಯನ್ನು ಮುರಿದುಕೊಂಡ ಪಟ್ಟಿ ಇಲ್ಲಿದೆ. ಟಾಲಿವುಡ್‌ನಲ್ಲಿ ನೆಲೆಯೂರಿರುವ ಕನ್ನಡ ನಟಿ ರಶ್ಮಿಕಾರಿಂದ ಹಿಡಿದು ತೆಲುಗು ತಾರೆಯರದ್ದೇ ಒಂದು ಪಟ್ಟಿ ಇದೆ.
ವಿಚ್ಛೇದನದ
ಸುದ್ದಿ
ಸದ್ದು
ಮಾಡುತ್ತಿರುವಾಗಲೇ
ಸದ್ದು
ಮಾಡುತ್ತಿವೆ
ಧನುಷ್
ಅಫೇರ್‌ಗಳು

ಮೆಹ್ರೇನ್ ಪಿರ್ಜಾದಾ
ಮೆಹ್ರೇನ್ ಪಿರ್ಜಾದಾ ಟಾಲಿವುಡ್‌ನ ಜನಪ್ರಿಯ ನಟಿ. ಈಗ ಶಿವಣ್ಣ ಅಭಿನಯದ 'ನೀ ಸಿಗೋವರೆಗೂ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಈ ನಟಿ ಹರಿಯಾಣ ಮೂಲದ ಪೊಲಿಟಿಷಿಯನ್ ಭವ್ಯ ಬಿಷ್ಣೋಯ್ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಎಂಎಲ್‌ಎ ಕುಲ್ದೀಪ್ ಬಿಷ್ಣೋಯ್ ಎಂಬುವವರ ಪುತ್ರ ಈ ಭವ್ಯ ಬಿಷ್ಣೋಯ್. ಇವರ ನಿಶ್ವಿತಾರ್ಥ 12ನೇ ಮಾರ್ಚ್ 2021ರಲ್ಲಿ ಅದ್ದೂರಿಯಾಗಿ ನಡೆದಿತ್ತು. 2021ರ ಕೊನೆಯಲ್ಲಿ ಮದುವೆ ಕೂಡ ಫಿಕ್ಸ್ ಆಗಿತ್ತು. ಆದರೆ, ಅದ್ಯಾಕೋ ಈ ನಿಶ್ಚಿತಾರ್ಥ ಮುರಿದು ಬಿತ್ತು.

ತ್ರಿಶಾ ಕೃಷ್ಣನ್
ಬಹುಭಾಷಾ ನಟಿ ತ್ರಿಶಾ ಯಾರಿಗೆ ಗೊತ್ತಿಲ್ಲ. ತೆಲುಗು, ತಮಿಳು ಅಷ್ಟೇ ಅಲ್ಲ. ಕನ್ನಡ ಸಿನಿಮಾದಲ್ಲೂ ಈಕೆ ನಟಿಸಿದ್ದಾರೆ. ತ್ರಿಶಾ ಹೆಸರು ಮೊದಲ ಬಾರಿಗೆ ರಾಣಾ ದಗ್ಗುಬಾಟಿ ಜೊತೆ ಹೇಳಿಬಂದಿತ್ತು. ಆದರೆ, 2015 ಜನವರಿ 23ರಂದು ತ್ರಿಶಾ ಚೆನ್ನೈ ಮೂಲದ ಉದ್ಯಮಿ ವರುಣ್ ಮನಿಯನ್ ಎಂಬುವವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಮೂರೇ ತಿಂಗಳಲ್ಲಿ ಈ ನಿಶ್ವಿತಾರ್ಥ ಮುರಿದು ಬಿದ್ದಿತ್ತು. ಮೇ 2015ರಲ್ಲಿ ಸ್ವತ: ತ್ರಿಶಾ ನಿಶ್ಚಿತಾರ್ಥ ಮುರಿದುಬಿದ್ದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ತ್ರಿಶಾ ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ಪವರ್ ಸಿನಿಮಾದಲ್ಲಿ ನಟಿಸಿದ್ದಾರೆ.

ಅಖಿಲ್ ಅಕ್ಕಿನೇನಿ
ಅಕ್ಕಿನೇನಿ ಕುಟುಂಬಕ್ಕೆ ಮದುವೆ ಅನ್ನುವುದು ಶಾಪವೇನೋ ಗೊತ್ತಿಲ್ಲ. ನಾಗಾರ್ಜುನ ಮೊದಲ ಮದುವೆ ಮುರಿದುಬಿದ್ದಿದ್ದರಿಂದ ಎರಡನೇ ಮದುವೆ ಆಗಿದ್ದರು. ಮಕ್ಕಳ ಮದುವೆ ವಿಚಾರದಲ್ಲೂ ಅದೇ ಆಗುತ್ತಿದೆ. ಸಮಂತಾ, ನಾಗಚೈತನ್ಯ ದಾಂಪತ್ಯ ಕೂಡ ಅಂತ್ಯ ಕಂಡಿದೆ. ಇನ್ನು ಎರಡನೇ ಮಗ ಅಖಿಲ್ ಅಕ್ಕಿನೇನಿ ಶ್ರಿಯಾ ಭುಪಾಲ್ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಬ್ಬರೂ ಅದ್ಧೂರಿಯಾಗಿ ಮದುವೆ ಆಗಬೇಕು ಎಂದುಕೊಂಡಿದ್ದರು. ಆದರೆ, ಕಾರಣಾಂತರಗಳಿಂದ ಈ ಮದುವೆ ಕೂಡ ಮುರಿದುಬಿತ್ತು.

ರಶ್ಮಿಕಾ ಮಂದಣ್ಣ
ಕನ್ನಡ ಸಿನಿಮಾ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದ ರಶ್ಮಿಕಾ ಮಂದಣ್ಣ ಟಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಸದ್ಯ ಪುಷ್ಪ ಸಿನಿಮಾ ಗೆಲುವಿನ ಮೂಲಕ ಯಶಸ್ಸಿನ ತುದಿಯಲ್ಲಿ ತೇಲಾಡುತ್ತಿದ್ದಾರೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಜೋಡಿಗೆ ಸಿನಿಪ್ರಿಯರು ಮೆಚ್ಚಿ ಕೊಂಡಾಡಿದ್ದಾರೆ. ಇದೇ ರಶ್ಮಿಕಾ ಕಿರಿಕ್ ಪಾರ್ಟಿ ಬಳಿಕ ನಟ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಗೊತ್ತೇ ಇದೆ. ಬಳಿಕ ರಶ್ಮಿಕಾ ಆ ಎಂಗೇಜ್ಮೆಂಟ್ ಅನ್ನು ಮುರಿದುಕೊಂಡಿದ್ದಾರೆ. ಹೊಂದಾಣಿಕೆ ಕಾರಣದಿಂದ ಈ ಸಂಬಂಧವನ್ನು ಮುರಿದುಬಿತ್ತು ಎಂಬ ಮಾತುಗಳು ಕೇಳಿಬಂದಿದ್ದವು.