For Quick Alerts
  ALLOW NOTIFICATIONS  
  For Daily Alerts

  'ಭೀಷ್ಮ' ಭರ್ಜರಿ ಕಲೆಕ್ಷನ್: ರಶ್ಮಿಕಾ ಮಂದಣ್ಣ ಪಾಲಿಗೆ ಮತ್ತೊಂದು ಬ್ಲಾಕ್ ಬಸ್ಟರ್.!

  |

  ಯಾರು ಏನೇ ಅಂದುಕೊಂಡರೂ, ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಲಕ್ಕಿ ಎಂಬುದರಲ್ಲಿ ಡೌಟೇ ಇಲ್ಲ ಬಿಡಿ. ಕನ್ನಡದ 'ಕಿರಿಕ್ ಪಾರ್ಟಿ'ದಂತಹ ಸೂಪರ್ ಹಿಟ್ ಚಿತ್ರದ ಮೂಲಕ ಪರಿಚಿತರಾದ ರಶ್ಮಿಕಾ ಮಂದಣ್ಣ ಯಶಸ್ಸಿನ ಓಟ ಇನ್ನೂ ಮುಂದುವರೆಯುತ್ತಲೇ ಇದೆ.

  'ಅಂಜನಿಪುತ್ರ', 'ಚಲೋ', 'ಗೀತ ಗೋವಿಂದಂ', 'ಯಜಮಾನ', 'ಸರಿಲೇರು ನೀಕೆವ್ವರು'.. ಸೇರಿದಂತೆ ಸಾಲು ಸಾಲು ಹಿಟ್ ಚಿತ್ರಗಳ ನಾಯಕಿ ಆಗಿದ್ದ ರಶ್ಮಿಕಾ ಮಂದಣ್ಣ ಇದೀಗ 'ಭೀಷ್ಮ' ಮೂಲಕ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ.

  ಕಳೆದ ಶುಕ್ರವಾರವಷ್ಟೇ ನಿತಿನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಭೀಷ್ಮ' ಚಿತ್ರ ತೆರೆಗೆ ಬಂದಿತ್ತು. ಉತ್ತಮ ಓಪನ್ನಿಂಗ್ ಪಡೆದುಕೊಂಡಿರುವ 'ಭೀಷ್ಮ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡುತ್ತಿದೆ. ಮುಂದೆ ಓದಿರಿ...

  ಮೂರು ದಿನಗಳ ಕಲೆಕ್ಷನ್ ಎಷ್ಟು.?

  ಮೂರು ದಿನಗಳ ಕಲೆಕ್ಷನ್ ಎಷ್ಟು.?

  ವರದಿಗಳ ಪ್ರಕಾರ, ಮೊದಲ ವೀಕೆಂಡ್ .. ಅಂದ್ರೆ ಬಿಡುಗಡೆಯಾದ ಮೂರು ದಿನಗಳಲ್ಲಿ 'ಭೀಷ್ಮ' ಚಿತ್ರ ವಿಶ್ವದಾದ್ಯಂತ ಸುಮಾರು 18.9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

  'ಭೀಷ್ಮ' ಟೈಟಲ್ ಬದಲಿಸಲು ಬಿಜೆಪಿ ಪಟ್ಟು: ಶೀರ್ಷಿಕೆ ವಿವಾದದಲ್ಲಿ ನಿತಿನ್-ರಶ್ಮಿಕಾ ಚಿತ್ರ.!'ಭೀಷ್ಮ' ಟೈಟಲ್ ಬದಲಿಸಲು ಬಿಜೆಪಿ ಪಟ್ಟು: ಶೀರ್ಷಿಕೆ ವಿವಾದದಲ್ಲಿ ನಿತಿನ್-ರಶ್ಮಿಕಾ ಚಿತ್ರ.!

  'ಭೀಷ್ಮ' ಕಲೆಕ್ಷನ್ ರಿಪೋರ್ಟ್

  'ಭೀಷ್ಮ' ಕಲೆಕ್ಷನ್ ರಿಪೋರ್ಟ್

  ವರದಿಗಳ ಪ್ರಕಾರ, 'ಭೀಷ್ಮ' ಚಿತ್ರ ಬಿಡುಗಡೆಯಾದ ಮೊದಲ ದಿನ 6.4 ಕೋಟಿ ಕಲೆಕ್ಷನ್ ಮಾಡಿದೆ. ಎರಡನೇ ದಿನ 6.5 ಕೋಟಿ ಮತ್ತು ಮೂರನೇ ದಿನ 6 ಕೋಟಿ ರೂಪಾಯಿ ಬಾಚಿದೆ. ಒಟ್ಟಾರೆ ಇಲ್ಲಿಯವರೆಗೂ ಸುಮಾರು 18.9 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ.

  ಸಂದರ್ಶನದಲ್ಲಿ ತೆಲುಗು ನಟ ನಿತಿನ್ ಬಾಯಿಂದ ಬಂತು ಸತ್ಯ: ರಶ್ಮಿಕಾಗೆ ಮುಜುಗರ.!ಸಂದರ್ಶನದಲ್ಲಿ ತೆಲುಗು ನಟ ನಿತಿನ್ ಬಾಯಿಂದ ಬಂತು ಸತ್ಯ: ರಶ್ಮಿಕಾಗೆ ಮುಜುಗರ.!

  ಯು.ಎಸ್ ನಲ್ಲೂ 'ಭೀಷ್ಮ' ಧಮಾಕಾ.!

  ಯು.ಎಸ್ ನಲ್ಲೂ 'ಭೀಷ್ಮ' ಧಮಾಕಾ.!

  ಅತ್ತ ಯು.ಎಸ್ ನಲ್ಲೂ 'ಭೀಷ್ಮ' ಕಲೆಕ್ಷನ್ ಜೋರಾಗಿದೆ. ಮೂರು ದಿನಗಳಲ್ಲಿ $481,005 ಕಲೆಕ್ಷನ್ ಮಾಡುವಲ್ಲಿ 'ಭೀಷ್ಮ' ಚಿತ್ರ ಯಶಸ್ವಿಯಾಗಿದೆ. ಸದ್ಯಕ್ಕೆ 'ಭೀಷ್ಮ' ಓಟ ನೋಡಿದರೆ, ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗುವುದರಲ್ಲಿ ಡೌಟೇ ಇಲ್ಲ.

  ರೊಮ್ಯಾಂಟಿಕ್ ಕಾಮಿಡಿ ಸಿನಿಮಾ

  ರೊಮ್ಯಾಂಟಿಕ್ ಕಾಮಿಡಿ ಸಿನಿಮಾ

  ವೆಂಕಿ ಕುಡುಮುಲ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಭೀಷ್ಮ'. ನಿತಿನ್, ರಶ್ಮಿಕಾ ಮಂದಣ್ಣ, ವೆನ್ನೆಲ್ಲ ಕಿಶೋರ್, ಸತ್ಯ, ಸಂಪತ್ ರಾಜ್, ರಘು ಬಾಬು ಮುಂತಾದವರ ಅಭಿನಯ ಚಿತ್ರದಲ್ಲಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ (ಫೆಬ್ರವರಿ 21) ರಂದು 'ಭೀಷ್ಮ' ಬಿಡುಗಡೆ ಆಗಿತ್ತು.

  English summary
  Telugu Movie Bheeshma collects 18.9 crore in 3 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X