For Quick Alerts
  ALLOW NOTIFICATIONS  
  For Daily Alerts

  ದಾಖಲೆಗಳನ್ನು ಬರೆದು, ಒಂದೇ ಹಾಡಿನಿಂದ ಕೋಟಿಗಟ್ಟಲೆ ಗಳಿಸಿದ ಸಿನಿಮಾ!

  |

  ಭಾರತೀಯ ಸಿನಿಮಾದ 'ಬಾಪ್' ಎನಿಸಿಕೊಳ್ಳುತ್ತಿದ್ದ ಬಾಲಿವುಡ್, ಸ್ವತಃ ಬೆರಗಾಗುವಂತೆ ಸಿನಿಮಾಗಳನ್ನು ನೀಡುತ್ತಿದೆ ದಕ್ಷಿಣ ಭಾರತ ಸಿನಿಮಾರಂಗ.

  Upendra ಅಭಿನಯದ ಬ್ರಹ್ಮ ಚಿತ್ರ ತಯಾರಾದ ಕ್ಷಣಗಳು | FILMIBEAT KANNADA

  ಭಾಷೆಯ ದೃಷ್ಟಿಯಿಂದ ದೊಡ್ಡ ಪ್ರೇಕ್ಷಕ ವರ್ಗ ಹೊಂದಿರುವ ಹಿಂದಿ ಸಿನಿಮಾಗಳು ಸಹ ಮಾಡಲಾಗದ ದಾಖಲೆಗಳನ್ನು ಸೃಷ್ಟಿಸುತ್ತಿವೆ ದಕ್ಷಿಣದ ಸಿನಿಮಾಗಳು.

  'ಪೊಗರು' ಚಿತ್ರದ 'ಖರಾಬು' ಹಾಡಿಗೆ ತೆಲುಗಿನಲ್ಲಿಯೂ ಭರ್ಜರಿ ರೆಸ್ಪಾನ್ಸ್

  ಇದೀಗ ದಕ್ಷಿಣ ಭಾರತದ ಹೊಸಬರ ಸಿನಿಮಾವೊಂದು ವಿನೂತನ ದಾಖಲೆಯನ್ನು ಬರೆದಿದೆ. ಬಾಲಿವುಡ್‌ ಹೆಸರಿಗಿದ್ದ ದಾಖಲೆಯನ್ನು ಅಳಿಸಿ ಹಾಕಿ ಹೊಸ ದಾಖಲೆಯನ್ನು ಸ್ಥಾಪಿಸಿದೆ. ಇನ್ನೂ ಬಿಗುಡೆ ಆಗುವ ಮುನ್ನವೇ ಕೇವಲ ಒಂದು ಹಾಡಿನಿಂದ ದಾಖಲೆಗಳನ್ನು ಮುಡಿಗೇರಿಸಿಕೊಂಡಿದೆ ಒಂದು ತೆಲುಗು ಸಿನಿಮಾ.

  ಯೂಟ್ಯೂಬ್‌ನಲ್ಲಿ ದಾಖಲೆಗಳು ಬರೆದ ಹಾಡು

  ಯೂಟ್ಯೂಬ್‌ನಲ್ಲಿ ದಾಖಲೆಗಳು ಬರೆದ ಹಾಡು

  ಟಿವಿಯಲ್ಲಿ ನಿರೂಪಣೆ ಮಾಡುತ್ತಿದ್ದ ತೆಲುಗಿನ ಪ್ರದೀಪ್ ಮಚ್ಚಿರಾಜು ಮೊದಲ ಬಾರಿ ನಾಯಕನಾಗಿ ನಟಿಸಿರುವ '30 ರೋಜುಲೋ ಪ್ರೇಮಿಂಚಡಂ ಎಲಾ' ಸಿನಿಮಾ, ತನ್ನ ಒಂದೇ ಹಾಡಿನಿಂದ ಯೂಟ್ಯೂಬ್‌ನಲ್ಲಿ ದಾಖಲೆಗಳನ್ನು ಬರೆದಿದೆ. ಅಷ್ಟೆ ಅಲ್ಲ ಕೋಟ್ಯಂತರ ಹಣವನ್ನೂ ಸಂಪಾದಿಸಿದೆ.

  16.5 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆ

  16.5 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆ

  '30 ರೋಜುಲೋ ಪ್ರೇಮಿಂಚಡಂ ಎಲಾ' ಸಿನಿಮಾದ 'ನೀಲಿ ನೀಲಿ ಆಕಾಶಂ' ಹಾಡು ಸಖತ್ ಹಿಟ್ ಆಗಿದೆ. ಯೂಟ್ಯೂಬ್ ಒಂದರಲ್ಲೇ ಈ ಹಾಡನ್ನು 16.5 ಕೋಟಿ (165,642,496) ಬಾರಿ ವೀಕ್ಷಣೆ ಮಾಡಲಾಗಿದೆ. ಯೂಟ್ಯೂಬ್ ಒಂದರಿಂದಲೇ ಹಾಡಿಗಾಗಿ ಸಿನಿಮಾಕ್ಕೆ ಬಂದ ಆದಾಯ 70 ಲಕ್ಷಕ್ಕೂ ಹೆಚ್ಚು.

  ಸಲ್ಮಾನ್ ಖಾನ್ ಚಿತ್ರಗಳಿಗೆ ರೆಹಮಾನ್ ಏಕೆ ಸಂಗೀತ ನೀಡುವುದಿಲ್ಲ?: ಕಾರಣ ಬಹಿರಂಗ

  ಕೋಟಿಗೂ ಹೆಚ್ಚು ಹಣ ಸಂಪಾದನೆ

  ಕೋಟಿಗೂ ಹೆಚ್ಚು ಹಣ ಸಂಪಾದನೆ

  ಇನ್ನು ಇದೇ ಹಾಡನ್ನು ಯೂಟ್ಯೂಬ್ ಹೊರತಾಗಿ ಇನ್ನೂ ಹಲವು ಸಂಗೀತದ ಆಪ್‌ಗಳಿಗೆ, ಇತರೆ ಫ್ಲ್ಯಾಟ್‌ಫಾರ್ಮ್‌ ಗಳಿಗೆ ಮಾರಾಟ ಮಾಡಲಾಗಿದೆ. ಇದರಿಂದಲೂ ಸಾಕಷ್ಟು ದೊಡ್ಡ ಮೊತ್ತವನ್ನೇ ಸಿನಿಮಾ ಪಡೆದಿದೆ. ಅಲ್ಲಿಗೆ ಬಿಡುಗಡೆ ಆಗುವ ಮುನ್ನವೇ ಕೇವಲ ಒಂದು ಹಾಡಿನಿಂದ ಕೋಟ್ಯಂತರ ಹಣ ಗಳಿಸಿದೆ ಚಿತ್ರತಂಡ.

  ಲಾಕ್‌ಡೌನ್ ಕಾರಣದಿಂದ ಸಿನಿಮಾ ಬಿಡುಗಡೆ ಮುಂದಕ್ಕೆ

  ಲಾಕ್‌ಡೌನ್ ಕಾರಣದಿಂದ ಸಿನಿಮಾ ಬಿಡುಗಡೆ ಮುಂದಕ್ಕೆ

  ಏಪ್ರಿಲ್‌ನಲ್ಲಿಯೇ ಸಿನಿಮಾದ ಬಿಡುಗಡೆ ಆಗಬೇಕಿತ್ತು, ಆದರೆ ಲಾಕ್‌ಡೌನ್ ಕಾರಣದಿಂದಾಗಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಸಿನಿಮಾದಲ್ಲಿ ನಾಯಕನಾಗಿ ಮೊದಲ ಬಾರಿಗೆ ಆಂಕರ್ ಪ್ರದೀಪ್ ಅಭಿನಯಿಸಿದ್ದಾರೆ. ನಾಯಕಿ ಅಮೃತಾ ಐಯ್ಯರ್, ನಿರ್ದೇಶನ ಮುನ್ನಾ, ಸಂಗೀತ ನಿರ್ದೇಶನ ಅನುಪ್ ರುಬೆನ್ಸ್.

  ಬಾಲಿವುಡ್‌ನಲ್ಲಿ ತಮ್ಮ ವಿರುದ್ಧ ಒಂದು ಗ್ಯಾಂಗ್ ಇದೆ: ಎ.ಆರ್. ರೆಹಮಾನ್ ಹೇಳಿದ ಸ್ಫೋಟಕ ಸಂಗತಿ

  English summary
  '30 rojullo preminchadam ela' Telugu movie song creates new record on YouTube and ears crores of money.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X