For Quick Alerts
  ALLOW NOTIFICATIONS  
  For Daily Alerts

  ಮೆಹಂದಿ ಶಾಸ್ತ್ರದ ಸಂಭ್ರಮದಲ್ಲಿ ನಟಿ ಕಾಜಲ್ ಅಗರ್ವಾಲ್

  |

  ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಮದುವೆಗೆ ಇನ್ನೊಂದೆ ದಿನ ಬಾಕಿ ಇದೆ. ಇದೇ ತಿಂಗಳು 30ರಂದು ಕಾಜಲ್ ಬಹುಕಾಲದ ಗೆಳೆಯ ಗೌತಮ್ ಕಿಚಲು ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ಈಗಾಗಲೇ ಕಾಜಲ್ ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ಮದುವೆ ಶಾಸ್ತ್ರಗಳು ಜೋರಾಗಿ ನಡೆಯುತ್ತಿವೆ.

  ದಸರಾ ಹಬ್ಬಕ್ಕೆ ಕಾಜಲ್ ಕುರ್ತಾ ಮತ್ತು ಘರಾರಾ ಸೆಟ್ ನಲ್ಲಿ ಮಿಂಚಿದ್ದರು. ಮದುಮಗಳು ಕಾಜಲ್ ಧರಿಸಿದ್ದ ಬಟ್ಟೆಯ ಬೆಲೆ ಕೇಳಿದ್ರೆ ನಿಜಕ್ಕು ಅಚ್ಚರಿ ಪಡುತ್ತೀರಿ. ಖ್ಯಾತ ಡಿಸೈನಲ್ ಅರ್ಪಿತಾ ಮೆಹ್ತಾ ಅವರ ಹೊಸ ಕಲೆಕ್ಷನ್ ಬ್ಲರ್ಡ್ ಲೈನ್ಸ್ ತಯಾರಿತ ಉಡುಗೆ ಇದಾಗಿದೆ. ಇದರೆ ಬೆಲೆ ಬರೋಬ್ಬರಿ 78 ಸಾವಿರ. ಇದೀಗ ಕಾಜಲ್ ಮೆಹಂದಿ ಶಾಸ್ತ್ರದ ಫೋಟೋ ಹಂಚಿಕೊಂಡಿದ್ದಾರೆ. ಮುಂದೆ ಓದಿ..

  ಅಬ್ಬಾ..ದಸರಾ ಹಬ್ಬಕ್ಕೆ ನಟಿ ಕಾಜಲ್ ಧರಿಸಿದ್ದ ಬಟ್ಟೆಯ ಬೆಲೆ ಇಷ್ಟೊಂದಾ!ಅಬ್ಬಾ..ದಸರಾ ಹಬ್ಬಕ್ಕೆ ನಟಿ ಕಾಜಲ್ ಧರಿಸಿದ್ದ ಬಟ್ಟೆಯ ಬೆಲೆ ಇಷ್ಟೊಂದಾ!

  ಮೆಹಂದಿ ಸಂಭ್ರಮದಲ್ಲಿ ಕಾಜಲ್

  ಮೆಹಂದಿ ಸಂಭ್ರಮದಲ್ಲಿ ಕಾಜಲ್

  ನಿನ್ನೆ (ಅಕ್ಟೋಬರ್ 29) ಬುಧವಾರ ಕಾಜಲ್ ಮನೆಯಲ್ಲಿ ಮೆಹಂದಿ ಸಂಭ್ರಮ. ಮದುಮಗಳು ಕಾಜಲ್ ಮದರಂಗಿ ಹಾಕಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಎರಡೂ ಕೈಗೆ ಮೆಹಂದಿ ಹಾಕಿಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಫೋಟೋದಲ್ಲಿ ಕಾಜಲ್ ಹಸಿರು ಬಣ್ಣದ ಡ್ರೆಸ್ ಧರಿಸಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ನಟಿ

  ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ನಟಿ

  ಫೋಟೋ ಶೇರ್ ಮಾಡಿ #kajgautkitched ಎಂದು ಬರೆದುಕೊಂಡಿದ್ದಾರೆ. ಇಂದು ಕಾಜಲ್ ಮನೆಯಲ್ಲಿ ಹಳದಿ ಶಾಸ್ತ್ರದ ಸಂಭ್ರಮ ಇರಲಿದೆ. ಇತ್ತೀಚಿಗೆ ಕಾಜಲ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೋಟೋ ಶೇರ್ ಮಾಡಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಕಾಜಲ್ ಪತಿಯ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದರು.

  ನಿಶ್ಚಿತಾರ್ಥದ ಉಂಗುರ ರಿವೀಲ್ ಮಾಡಿದ ನಟಿ ಕಾಜಲ್ ಅಗರ್ವಾಲ್ನಿಶ್ಚಿತಾರ್ಥದ ಉಂಗುರ ರಿವೀಲ್ ಮಾಡಿದ ನಟಿ ಕಾಜಲ್ ಅಗರ್ವಾಲ್

  ಅಕ್ಟೋಬರ್ 30ಕ್ಕೆ ಮದುವೆ

  ಅಕ್ಟೋಬರ್ 30ಕ್ಕೆ ಮದುವೆ

  ಅಕ್ಟೋಬರ್ 30ರಂದು ಕಾಜಲ್ ಮುಂಬೈ ಮೂಲದ ಉದ್ಯಮಿ ಗೌತಮ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತೀರಾ ಖಾಸಗಿಯಾಗಿ ನಡೆಯುವ ಮದುವೆ ಸಮಾರಂಭಕ್ಕೆ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗವಹಿಸಲಿದ್ದಾರೆ. ಕೊರೊನಾ ವೈರಸ್ ಪರಿಣಾಮ ಕಾಜಲ್ ಸರಳವಾಗಿ ಹಸೆಮಣೆ ಏರುತ್ತಿದ್ದಾರೆ. ಮದುವೆ ಬಳಿಕ ಕಾಜಲ್ ಪತಿಯ ಜೊತೆ ಮುಂಬೈನಲ್ಲಿ ನೆಲೆಸಲಿದ್ದಾರೆ.

  ಮದುವೆ ಬಳಿಕವೂ ನಟನೆ ಮುಂದುವರೆಸುತ್ತಾರೆ ಕಾಜಲ್

  ಮದುವೆ ಬಳಿಕವೂ ನಟನೆ ಮುಂದುವರೆಸುತ್ತಾರೆ ಕಾಜಲ್

  ಮದುವೆ ಬಳಿಕವೂ ನಟನೆ ಮುಂದುವರೆಸುವುದಾಗಿ ಹೇಳಿರುವ ಕಾಜಲ್, ಮದುವೆಯ ಜೊತೆಗೆ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಮೊದಲ ಬಾರಿಗೆ ಕಾಜಲ್ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಲೈವ್ ಟೆಲಿಕಾಸ್ಟ್ ಎಂಬ ತಮಿಳು ವೆಬ್ ಸರಣಿಯಲ್ಲಿ ನಟಿಸುವ ಮೂಲಕ ಡಿಜಿಟಲ್ ಲೋಕಕ್ಕೆ ಕಾಲಿಡುತ್ತಿದ್ದಾರೆ.

  English summary
  Tollywood Actress Kajal Aggarwal Shares Mehandi ceremony photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X