For Quick Alerts
  ALLOW NOTIFICATIONS  
  For Daily Alerts

  2024ರ ಸಂಕ್ರಾಂತಿಗೆ ಟಾಲಿವುಡ್ ಬಾಕ್ಸಾಫೀಸ್‌ನಲ್ಲಿ ಟ್ರಯಾಂಗಲ್ ಫೈಟ್!

  |

  ಮೊನ್ನೆ ಮೊನ್ನೆ ಸಂಕ್ರಾಂತಿ ಹಬ್ಬ ಮುಗಿದಿದೆ. ಸುಗ್ಗಿ ಹಬ್ಬಕ್ಕೆ ಟಾಲಿವುಡ್, ಕಾಲಿವುಡ್‌ನಲ್ಲಿ ಬಹುನಿರೀಕ್ಷಿತ ಸಿನಿಮಾಗಳು ತೆರೆಗಪ್ಪಳಿಸಿ ಸದ್ದು ಮಾಡ್ತಿದೆ. ಇದೀಗ ಮುಂದಿನ ಸಂಕ್ರಾಂತಿಗೆ ಯಾವ ಸಿನಿಮಾ ರಿಲೀಸ್ ಆಗುತ್ತೆ? ಎನ್ನುವ ಲೆಕ್ಕಾಚಾರ ಶುರುವಾಗಿದೆ.

  ಎಷ್ಟೇ ದೊಡ್ಡ ಸಿನಿಮಾ ಮಾಡಿದ್ರು, ಒಂದೇ ದಿನ ನೋಡಿ ರಿಲೀಸ್ ಮಾಡಬೇಕು. ಹಬ್ಬದ ವೀಕೆಂಡ್ ಇದ್ದರೆ ಸಿನಿಮಾ ಕಲೆಕ್ಷನ್‌ಗೆ ಪ್ಲಸ್ ಆಗುತ್ತೆ. ಹಬ್ಬ ಸಂಭ್ರಮದಲ್ಲಿ ಸಿನಿರಸಿಕರು ದೊಡ್ಡಮಟ್ಟದಲ್ಲಿ ಥಿಯೇಟರ್‌ಗೆ ಬರ್ತಾರೆ. ಆವರೇಜ್ ಸಿನಿಮಾ ಕೂಡ ಹಿಟ್ ಆಗುವ ಸಾಧ್ಯತೆ ಇರುತ್ತದೆ. ಟಾಲಿವುಡ್, ಕಾಲಿವುಡ್‌ನಲ್ಲಿ ಹಬ್ಬಕ್ಕೆ ಬಾಕ್ಸಾಫೀಸ್ ಕ್ಲ್ಯಾಶ್ ಆದ್ರು, ಪರವಾಗಿಲ್ಲಾ ಎಂದು ಸಿನಿಮಾಗಳನ್ನು ರಿಲೀಸ್ ಮಾಡ್ತಾರೆ. ಈ ಬಾರಿ 'ವೀರಸಿಂಹ ರೆಡ್ಡಿ', 'ವಾಲ್ತೇರು ವೀರಯ್ಯ', 'ಥುನಿವು', 'ವಾರಿಸು' ಸಿನಿಮಾಗಳು ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡ್ತಿವೆ. ಅದೇ ರೀತಿ ಟಾಲಿವುಡ್‌ನಲ್ಲಿ ಮುಂದಿನ ಸಂಕ್ರಾಂತಿಗೆ 3 ಬಹುನಿರೀಕ್ಷಿತ ಸಿನಿಮಾಗಳ ನಡುವೆ ಪೈಪೋಟಿ ನಡೆಯುವ ಸುಳಿವು ಸಿಕ್ತಿದೆ.

  ಅಮೆರಿಕಾದಲ್ಲಿ 2 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದ ಚಿತ್ರಗಳು; ಪ್ಯಾನ್ ಇಂಡಿಯಾ ಮಾಡದಿದ್ರೂ ಈತ ಕಿಂಗ್!ಅಮೆರಿಕಾದಲ್ಲಿ 2 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದ ಚಿತ್ರಗಳು; ಪ್ಯಾನ್ ಇಂಡಿಯಾ ಮಾಡದಿದ್ರೂ ಈತ ಕಿಂಗ್!

  ಸಂಕ್ರಾಂತಿಗೆ ಬಂದ 4 ಸಿನಿಮಾಗಳು ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿವೆ. ಆದರೆ ಹಬ್ಬದ ಸಮಯದಲ್ಲಿ ಪ್ರೇಕ್ಷಕರು ಬೇರೆ ದಾರಿಯಿಲ್ಲದೇ ಸಿನಿಮಾ ನೋಡಿದ್ದರು. ಹಾಗಾಗಿ 4 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿವೆ.

  ಮುಂದಿನ ಸಂಕ್ರಾಂತಿ ತ್ರಿಕೋನ ಸ್ಪರ್ಧೆ

  ಮುಂದಿನ ಸಂಕ್ರಾಂತಿ ತ್ರಿಕೋನ ಸ್ಪರ್ಧೆ

  ಹೌದು ಮುಂದಿನ ವರ್ಷ ಸಂಕ್ರಾಂತಿಗೆ ತೆಲುಗಿನ 3 ಸಿನಿಮಾಗಳು ರಿಲೀಸ್ ಆಗಿ ಸಾಧ್ಯತೆ ಇದೆ. ರಾಮ್‌ಚರಣ್- ಶಂಕರ್ ಕಾಂಬಿನೇಷನ್‌ನ Rc15, ಪ್ರಭಾಸ್ ನಟನೆಯ ರಾಜಾ ಡೀಲಕ್ಸ್ ಹಾಗೂ ಸುಕುಮಾರ್- ಅಲ್ಲು ಅರ್ಜುನ್ ಜೋಡಿಯ 'ಪುಷ್ಪ' ಸಿನಿಮಾಗಳು ತೆರೆಗೆ ಬರುವ ಸುಳಿವು ಸಿಕ್ತಿದೆ. 3 ಸಿನಿಮಾಗಳ ಬಗ್ಗೆ ಭಾರೀ ನಿರೀಕ್ಷೆ ಇದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾಗಳು ಸದ್ದು ಮಾಡಲಿವೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಈ ಸಿನಿಮಾಗಳನ್ನು ಹಬ್ಬದ ವೀಕೆಂಡ್‌ನಲ್ಲಿ ರಿಲೀಸ್ ಮಾಡಿದರೆ ಅನುಕೂಲ ಎನ್ನುವ ಚರ್ಚೆ ನಡೀತಿದೆ.

  ಮೋಸ್ಟ್ ಎಕ್ಸ್‌ಪೆಕ್ಟೆಡ್ #Rc15

  ಮೋಸ್ಟ್ ಎಕ್ಸ್‌ಪೆಕ್ಟೆಡ್ #Rc15

  ಸಾಮಾಜಿಕ ಸಂದೇಶಗಳ ಜೊತೆಗೆ ಅದ್ಭುತ ಸಿನಿಮಾಗಳನ್ನು ಮಾಡಿ ಗೆದ್ದವರು ಶಂಕರ್. ಇತ್ತೀಚಿನ ವರ್ಷಗಳಲ್ಲಿ ಅವರ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಆದರೆ ಮತ್ತೆ ಫೀನಿಕ್ಸ್‌ನಂತೆ ಎದ್ದು ಬರಲು ಶಂಕರ್ ಮುಂದಾಗಿದ್ದಾರೆ. ರಾಮ್‌ಚರಣ್ ನಟನೆಯ ಇನ್ನು ಹೆಸರಿಡದ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೈರಾ ಅದ್ವಾನಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚುತ್ತಿದ್ದು ಚರಣ್ ದ್ವಿಪಾತ್ರದಲ್ಲಿ ನಟಿಸ್ತಿದ್ದಾರೆ ಎನ್ನಲಾಗ್ತಿದೆ. ಚಿತ್ರವನ್ನು ಮುಂದಿನ ವರ್ಷ ಸಂಕ್ರಾಂತಿಗೆ ತೆರೆಗೆ ತರುವ ಲೆಕ್ಕಾಚಾರ ನಡೀತಿದೆ.

  'ಪುಷ್ಪ'- 2 ರಿಲೀಸ್ ಯಾವಾಗ?

  'ಪುಷ್ಪ'- 2 ರಿಲೀಸ್ ಯಾವಾಗ?

  2021ರಲ್ಲಿ 'ಪುಷ್ಪ' ಸಿನಿಮಾ ಬಿಡುಗಡೆಯಾಗಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಹಿಂದಿ ಬೆಲ್ಟ್‌ನಲ್ಲೂ ಸಿನಿಮಾ ಕೋಟಿ ಕೋಟಿ ಬಾಚಿತ್ತು. ಒಟ್ಟು 350 ಕೋಟಿ ಕಲೆಕ್ಷನ್ ಮಾಡಿ ಈ ಮಾಸ್ ಮಾಸಾಲ ಎಂಟರ್‌ಟೈನರ್ ಸಿನಿಮಾ ದಾಖಲೆ ದಾಖಲೆ ಬರೆದಿತ್ತು. ಸಿನಿಮಾ ಸೀಕ್ವೆಲ್ ಶೂಟಿಂಗ್ ತಡವಾಗುತ್ತಾ ಬಂದಿತ್ತು. ಅಂತೂ ಇಂತೂ ಈಗ ವಿಶಾಖಪಟ್ಟಣದಲ್ಲಿ ಚಿತ್ರೀಕರಣ ಆರಂಭ ಆಗಿದೆ. ಈ ವರ್ಷಾಂತ್ಯಕ್ಕೆ ಶೂಟಿಂಗ್ ಕಂಪ್ಲೀಟ್ ಮಾಡಿ ಸುಗ್ಗಿ ಹಬ್ಬಕ್ಕೆ 'ಪುಷ್ಪ'ರಾಜ್‌ನ ಬಾಕ್ಸಾಫೀಸ್ ಕಣಕ್ಕೆ ಇಳಿಸುವ ಲೆಕ್ಕಾಚಾರವೂ ಇದೆ.

  ಸಂಕ್ರಾಂತಿ ರೇಸ್‌ನಲ್ಲಿ ಪ್ರಭಾಸ್

  ಸಂಕ್ರಾಂತಿ ರೇಸ್‌ನಲ್ಲಿ ಪ್ರಭಾಸ್

  ರಾಮ್‌ಚರಣ್ ಹಾಗೂ ಅಲ್ಲು ಅರ್ಜುನ್ ಜೊತೆಗೆ ಮುಂದಿನ ಸಂಕ್ರಾಂತಿ ರೇಸ್‌ನಲ್ಲಿ ಪ್ರಭಾಸ್ ಕೂಡ ಇದ್ದಾರೆ ಎನ್ನಲಾಗ್ತಿದೆ. 6 ತಿಂಗಳ ಅಂತರದಲ್ಲಿ ಡಾರ್ಲಿಂಗ್ ನಟನೆಯ 3 ಸಿನಿಮಾಗಳು ಬಿಡುಗಡೆಯಾಗುವ ಸಾಧ್ಯತೆಯಿದೆ. ಜೂನ್ 16ಕ್ಕೆ 'ಆದಿಪುರುಷ್' ಸಿನಿಮಾ ರಿಲೀಸ್ ಆದ್ರೆ, ಸೆಪ್ಟೆಂಬರ್ 28ಕ್ಕೆ 'ಸಲಾರ್' ತೆರೆಗಪ್ಪಳಿಸೋದು ಪಕ್ಕಾ ಆಗಿದೆ. ಈ 2 ಸಿನಿಮಾಗಳ ಜೊತೆಗೆ ಪ್ರಭಾಸ್ 'ರಾಜಾ ಡೀಲಕ್ಸ್' ಎನ್ನುವ ಒಂದು ಮೀಡಿಯಂ ಬಜೆಟ್ ಸಿನಿಮಾ ಕೂಡ ಕೈಗೆತ್ತಿಕೊಂಡಿದ್ದಾರೆ. ಮಾರುತಿ ನಿರ್ದೇಶನದ ಈ ಹಾರರ್ ಕಾಮಿಡಿ ಸಿನಿಮಾ ಕೂಡ ಸಂಕ್ರಾಂತಿಗೆ ತೆರೆಗೆ ಬರುತ್ತೆ ಎನ್ನಲಾಗ್ತಿದೆ. ಹಾಗಾಗಿ 3 ಸಿನಿಮಾಗಳ ನಡುವೆ ಭಾರೀ ಪೈಪೋಟಿ ನಿರೀಕ್ಷೆ ಮಾಡಬಹುದು.

  English summary
  Ramcharan, Prabhas, Allu Arjun triangle Fight in 2024 Sankranthi. Rc15, Pushpa 2 and Raja deluxe films are testing their luck at the Tollywood box-office for next Sankranthi. Know more.
  Sunday, January 22, 2023, 12:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X