Don't Miss!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- News
ಫೆಬ್ರವರಿ 6ರಂದು 280 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಥಿಯೇಟರ್ ಕಟ್ಟಿ ಸಕ್ಸಸ್.. ಹೊಸ ಬ್ಯುಸಿನೆಸ್ ಆರಂಭಿಸುತ್ತಿರುವ ಮಹೇಶ್ ಬಾಬು
ಸ್ಟಾರ್ ನಟರು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ವ್ಯಾಪಾರ ವ್ಯವಹಾರಗಳಲ್ಲೂ ಹಣ ತೊಡಗಿಸುತ್ತಿದ್ದಾರೆ. ತೆಲುಗು ನಟ ಮಹೇಶ್ ಬಾಬು ಈಗಾಗಲೇ ಹೈದರಾಬಾದ್‌ನಲ್ಲಿ ಮಲ್ಟಿಫ್ಲೆಕ್ಸ್ ಥಿಯೇಟರ್ ಮಾಲೀಕರಾಗಿದ್ದಾರೆ. ಇದೀಗ ಮತ್ತೊಂದು ಮತ್ತೊಂದು ಬ್ಯುಸಿನೆಸ್ ಆರಂಭಿಸುತ್ತಿದ್ದಾರೆ.
ಮಹೇಶ್
ಬಾಬುವನ್ನೇ
ನಾಯಕನನ್ನಾಗಿ
ಆಯ್ಕೆ
ಮಾಡಿದ್ದೇಕೆ
ರಾಜಮೌಳಿ?
ಸದ್ಯ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ಮಹೇಶ್ ಬಾಬು ನಟಿಸ್ತಿದ್ದಾರೆ. ಆ ನಂತರ ಎಸ್. ಎಸ್ ರಾಜಮೌಳಿ ನಿರ್ದೇಶನದಲ್ಲಿ ನಟಿಸೋದು ಪಕ್ಕಾ ಆಗಿದೆ. ಇತ್ತೀಚಿಗೆ ತಂದೆಯನ್ನು ಕಳೆದುಕೊಂಡ ಟಾಲಿವುಡ್ ಪ್ರಿನ್ಸ್ ಶೀಘ್ರದಲ್ಲೇ ಮತ್ತೆ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿ ಆಗಲಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಹೇಶ್ ಬಾಬು ಬೇರೆ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇದೀಗ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟು ರೆಸ್ಟೋರೆಂಟ್ ಆರಂಭಿಸುತ್ತಿದ್ದಾರೆ.
ಸದ್ಯ ಜಿ. ಮಹೇಶ್ ಬಾಬು ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ 5 ಸಿನಿಮಾಗಳಿಗೆ ಮಹೇಶ್ ಬಾಬು ಸಹ ನಿರ್ಮಾಪಕರಾಗಿದ್ದರು. ಸಿನಿಮಾ ನಿರ್ಮಾಣ ಸಂಸ್ಥೆ ಜೊತೆಗೆ ಎಎಂಬಿ ಥಿಯೇಟರ್ ಹೊಂದಿರುವ ಮಹೇಶ್ ಬಾಬು, ಕ್ಲಾತ್ ಬ್ರ್ಯಾಂಡ್ ಕೂಡ ಇದೆ. ಪತ್ನಿ ನಮ್ರತಾ ಶಿರೋಡ್ಕರ್ ಬ್ಯುಸಿನೆಸ್ ಎಲ್ಲಾ ನೋಡಿಕೊಳ್ಳುತ್ತಾರೆ. ಇದೀಗ ಪತ್ನಿಯ ಹೆಸರಿನಲ್ಲಿ ಒಂದು ಸಂಸ್ಥೆ ಜೊತೆ ಸೇರಿ ಟಾಲಿವುಡ್ ಪ್ರಿನ್ಸ್ ರೆಸ್ಟೋರೆಂಟ್ ಪ್ರಾರಂಭಿಸುತ್ತಿದ್ದಾರೆ ಎಂದು ವರದಿಯಾಗಿದೆ. ಏಷಿಯನ್ ಗ್ರೂಪ್ ಜೊತೆ ಸೇರಿ ಈ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದೇ ಸಂಸ್ಥೆ ಜೊತೆ ಸೇರಿ ಥಿಯೇಟರ್ ತೆರೆದಿದ್ದರು.

ಏಷ್ಯನ್ ಸುನೀಲ್ ನಾರಂಗ್ ಹಾಗೂ ಭರತ್ ನಾರಂಗ್ ಅವರೊಂದಿಗೆ 'ಎಎನ್ ರೆಸ್ಟೊರೆಂಟ್ಸ್' ಹೆಸರಿನಲ್ಲಿ ಬ್ಯುಸಿನೆಸ್ ಆರಂಭಿಸುತ್ತಿದ್ದಾರೆ. ಇದರ ಭಾಗವಾಗಿ ಡಿಸೆಂಬರ್ 8 ರಂದು ಮಿನರ್ವಾ ಕಾಫಿ ಶಾಪ್ ಅನ್ನು ಅದ್ಧೂರಿಯಾಗಿ ಶುರುವಾಗಲಿದೆ. ಈ ರೆಸ್ಟೋರೆಂಟ್ ತನ್ನ ಮೊದಲ ಶಾಖೆಯನ್ನು ಬಂಜಾರಾ ಹಿಲ್ಸ್‌ನಲ್ಲಿರುವ ನೀರಾ ಟವರ್ಸ್‌ನಲ್ಲಿ ತೆರೆಯಲಿದೆ. ಮತ್ತೊಂದೆಡೆ, ಏಷ್ಯನ್ ಪ್ಯಾಲೇಸ್ ಹೈಟ್ಸ್ ಅನ್ನು ಸಹ ಸ್ಥಾಪಿಸುವ ಬಗ್ಗೆ ಸುಳಿವು ಸಿಕ್ತಿದೆ.
ಮಹೇಶ್
ಬಾಬು
ವಿಗ್
ಧರಿಸುತ್ತಾರಾ?
ಸೀಕ್ರೆಟ್
ಬಿಚ್ಚಿಟ್ಟ
ಪರ್ಸನಲ್
ಮೇಕಪ್‌ಮ್ಯಾನ್!