For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಸಿನಿಮಾಕ್ಕೆ ಭಾರಿ ಬೇಡಿಕೆ, ಕೋಟ್ಯಂತರ ಹಣಕ್ಕೆ ಹಕ್ಕು ಮಾರಾಟ

  |

  ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಭಾರತದ ನಟರ ಪೈಕಿ ನಟ ಪವನ್ ಕಲ್ಯಾಣ್ ಸಹ ಒಬ್ಬರು. ತೆಲಂಗಾಣ, ಆಂಧ್ರ ಮಾತ್ರವಲ್ಲದೆ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳದಲ್ಲಿಯೂ ಪವನ್ ಕಲ್ಯಾಣಿ ಅಭಿಮಾನಿಗಳು ಲಕ್ಷಾಂತರ ಮಂದಿ ಇದ್ದಾರೆ.

  ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಪವನ್ ಕಲ್ಯಾಣ್‌, ಸಿನಿಮಾಗಳಿಗೆ ಬೇಡಿಕೆಯೂ ಹೆಚ್ಚು. ಅವರ ಸಿನಿಮಾ ಪ್ರೊಡ್ಯೂಸ್ ಮಾಡಲು, ವಿತರಣೆ ಹಕ್ಕುಕೊಂಡುಕೊಳ್ಳಲು ಮುಗಿಬೀಳುತ್ತಾರೆ. ಜೊತೆಗೆ ಅವರ ಸಿನಿಮಾದ ಡಿಜಿಟಲ್, ಟಿವಿ ಹಕ್ಕುಗಳಿಗೆ ಸಹ ಬೇಡಿಕೆ ಹೆಚ್ಚು.

  ಪವನ್ ಕಲ್ಯಾಣ್ ಮುಂದಿನ ಚಿತ್ರಕ್ಕೆ ಚಿರಂಜೀವಿ ಸಿನಿಮಾ ಹೆಸರು!ಪವನ್ ಕಲ್ಯಾಣ್ ಮುಂದಿನ ಚಿತ್ರಕ್ಕೆ ಚಿರಂಜೀವಿ ಸಿನಿಮಾ ಹೆಸರು!

  ಎರಡು ವರ್ಷಗಳ ನಂತರ ಪವನ್ ಕಲ್ಯಾಣ್ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಬಿಡುಗಡೆಗೆ ಮುನ್ನವೇ ಕೋಟ್ಯಂತರ ಹಣ ಸಂಪಾದಿಸಿದೆ. ಹೌದು, ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ಸಿನಿಮಾದ ಸ್ಯಾಟಲೈಟ್ ಹಕ್ಕು ಕೋಟ್ಯಂತರ ರೂಪಾಯಿಗೆ ಮಾರಾಟವಾಗಿದೆ. ನಿರ್ಮಾಪಕ ಜೇಬು ತುಂಬಿಸಿದೆ.

  ಸ್ಯಾಟಲೈಟ್ ಹಕ್ಕನ್ನು ಜೆಮಿನಿ ಟಿವಿ ಖರೀದಿಸಿದೆ

  ಸ್ಯಾಟಲೈಟ್ ಹಕ್ಕನ್ನು ಜೆಮಿನಿ ಟಿವಿ ಖರೀದಿಸಿದೆ

  ವಕೀಲ್ ಸಾಬ್ ಸಿನಿಮಾದ ಟಿವಿ ಪ್ರಸಾರ ಹಕ್ಕು (ಸ್ಯಾಟಲೈಟ್ ಹಕ್ಕು) ಬರೋಬ್ಬರಿ 16.5 ಕೋಟಿಗೆ ಮಾರಾಟವಾಗಿದೆ. ಪ್ರಖ್ಯಾತ ಜೆಮಿನಿ ಟಿವಿ ವಕೀಲ್ ಸಾಬ್ ಸಿನಿಮಾದ ಹಕ್ಕುಗಳನ್ನು ಖರೀದಿಸಿದೆಯಂತೆ.

  ಪಿಂಕ್ ಸಿನಿಮಾದ ರೀಮೇಕ್ ವಕೀಲ್ ಸಾಬ್

  ಪಿಂಕ್ ಸಿನಿಮಾದ ರೀಮೇಕ್ ವಕೀಲ್ ಸಾಬ್

  ವಕೀಲ್ ಸಾಬ್ ಸಿನಿಮಾ ಹಿಂದಿಯ ಸೂಪರ್ ಹಿಟ್ ಸಿನಿಮಾ 'ಪಿಂಕ್' ನ ರೀಮೇಕ್. ಅಲ್ಲಿ ಅಮಿತಾಬ್ ಬಚ್ಚನ್ ನಿರ್ವಹಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಪವನ್ ಕಲ್ಯಾಣ್ ನಿರ್ವಹಿಸುತ್ತಿದ್ದಾರೆ. ಕಥೆಯ ಎಳೆಯ ಒಂದೇ ಆಗಿದ್ದರು, ವಕೀಲ್ ಸಾಬ್‌ನಲ್ಲಿ ಪವನ್ ಕಲ್ಯಾಣ್ ಪಾತ್ರ ಹಿಂದಿಯ ಅಮಿತಾಬ್ ಪಾತ್ರಕ್ಕಿಂತಲೂ ಪೂರ್ಣ ಭಿನ್ನವಾಗಿರಲಿದೆ.

  ವಕೀಲ್ ಸಾಬ್ ಬಳಿಕ ನಾಲ್ಕು ಸಿನಿಮಾಕ್ಕೆ ಓಕೆ ಎಂದಿರುವ ಪವನ್

  ವಕೀಲ್ ಸಾಬ್ ಬಳಿಕ ನಾಲ್ಕು ಸಿನಿಮಾಕ್ಕೆ ಓಕೆ ಎಂದಿರುವ ಪವನ್

  ಎರಡು ವರ್ಷಗಳ ಕಾಲ ಸಿನಿಮಾದಿಂದ ದೂರವೇ ಉಳಿದಿದ್ದ ಪವನ್ ಕಲ್ಯಾಣ್, ಈಗ ಸಾಲು-ಸಾಲಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ವಕೀಲ್ ಸಾಬ್ ಮುಗಿದ ಬಳಿಕ, ಕ್ರಿಶ್ ನಿರ್ದೇಶನದ ವಿರೂಪಾಕ್ಷ, ಹರೀಶ್ ಶಂಕರ್ ನಿರ್ದೇಶನದ ಒಂದು ಸಿನಿಮಾ, ಸಾಗರ್ ಕೆ ಚಂದ್ರ ನಿರ್ದೇಶನದ ಒಂದು ಸಿನಿಮಾ, ಸುರೇಂದ್ರ ರೆಡ್ಡಿ ನಿರ್ದೇಶನದ ಸಿನಿಮಾಗಳಲ್ಲಿ ನಟಿಸಲಿದ್ದಾರೆ.

  English summary
  Pawan Kalyan starer Vakeel Saab movie satellite rights sold to Gemini TV for 16.5 crore rupees.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X