twitter
    For Quick Alerts
    ALLOW NOTIFICATIONS  
    For Daily Alerts

    ಎರಡನೇ ದಿನಕ್ಕೆ ಮಕಾಡೆ ಮಲಗಿದ 'ಲೈಗರ್' ಶುಕ್ರವಾರ ಗಳಿಸಿದ್ದೆಷ್ಟು?

    |

    ಭಾರಿ ನಿರೀಕ್ಷೆ ಇಡಲಾಗಿದ್ದ ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಮಕಾಡೆ ಮಲಗಿದೆ. ಸಿನಿಮಾದ ಬಗ್ಗೆ ಅತ್ಯಂತ ಕೆಟ್ಟ ವಿಮರ್ಶೆಗಳು ಹೊರಬಿದ್ದಿವೆ. ಸಿನಿಮಾವನ್ನು ಕಸದ ಬುಟ್ಟಿಗೆ ಎಸೆಯಬೇಕೆಂದೆಲ್ಲ ಕೆಲ ಹಿರಿಯ ಸಿನಿ ವಿಮರ್ಶಕರೇ ಟೀಕಿಸಿದ್ದಾರೆ.

    ಏನೇ ಆಗಲಿ ಸಿನಿಮಾ ಮೊದಲ ದಿನ ಉತ್ತಮ ಕಲೆಕ್ಷನ್ ಅನ್ನೇ ಮಾಡಿತ್ತು. ಮೊದಲ ದಿನ 19 ಕೋಟಿ ಕಲೆಕ್ಷನ್ ಅನ್ನುನ 'ಲೈಗರ್' ಸಿನಿಮಾ ಮಾಡಿತ್ತು. ಇದು ಕಳಪೆ ಕಲೆಕ್ಷನ್ ಏನಲ್ಲ. ಸಿನಿಮಾ ಹೇಗಿರುತ್ತದೆಂಬ ಕುತೂಹಲದಲ್ಲಿ ಜನ ಮೊದಲ ದಿನ ಚಿತ್ರಮಂದಿರಕ್ಕೆ ಆಗಮಿಸಿದ್ದರಿಂದ ಮೊದಲ ದಿನ ಉತ್ತಮ ಕಲೆಕ್ಷನ್ ಆಗಿತ್ತು.

    ಆದರೆ ಎರಡನೇ ದಿನಕ್ಕೆ ಅಂದರೆ ಶುಕ್ರವಾರಕ್ಕೆ ಸಿನಿಮಾದ ಕಲೆಕ್ಷನ್ ಮೊದಲ ದಿನದ ಅರ್ಧದಷ್ಟು ಕಡಿಮೆ ಆಗಿದೆ. ಮೊದಲ ದಿನ 19 ಕೋಟಿ ಕಲೆಕ್ಷನ್ ಆಗಿದ್ದರೆ ಎರಡನೇ ದಿನ ಅಂದರೆ ಶುಕ್ರವಾರದಂದು ಸಿನಿಮಾದ ಒಟ್ಟು ಕಲೆಕ್ಷನ್ 9.25 ಕೋಟಿ ಆಗಿದೆ. ಅಲ್ಲಿಗೆ ಎರಡು ದಿನದ ಒಟ್ಟು ಕಲೆಕ್ಷನ್ 28.25 ಕೋಟಿ ಆಗಿದೆ.

    Vijay Devarakonda Liger Movie Second Day Box Office Collection

    'ಲೈಗರ್' ಸಿನಿಮಾವು ಕರ್ನಾಟಕದಲ್ಲಿ ಎರಡು ಕೋಟಿ, ತಮಿಳುನಾಡಿನಲ್ಲಿ 1.40 ಕೋಟಿ, ಕೇರಳದಲ್ಲಿ 35 ಲಕ್ಷ, ಭಾರತದ ಇತರೆ ಪ್ರದೇಶಗಳಲ್ಲಿ 6.20 ಕೋಟಿ ಹಣ ಮಾಡಿದೆ. ಇದರ ಹೊರತಾಗಿ ಅಮೆರಿಕದಲ್ಲಿ 3.50 ಕೋಟಿ ರುಪಾಯಿ ಹಣ ಗಳಿಸಿದೆ. ವೀಕೆಂಡ್‌ನಲ್ಲಿ ಸಿನಿಮಾ ಹೇಗೆ ಕಲೆಕ್ಷನ್ ಮಾಡಲಿದೆ ಎಂಬುದರ ಆಧಾರದ ಮೇಲೆ ಬಾಕ್ಸ್‌ ಆಫೀಸ್ ಗೆಲುವು-ಸೋಲು ನಿರ್ಧಾರವಾಗಲಿದೆ.

    'ಲಾಲ್ ಸಿಂಗ್ ಚಡ್ಡ' ಸೇರಿದಂತೆ ಇನ್ನಿತರೆ ಬಾಲಿವುಡ್ ಸಿನಿಮಾಗಳಿಗೆ ಹೋಲಿಸಿದರೆ 'ಲೈಗರ್' ಸಿನಿಮಾ ಒಳ್ಳೆಯ ಕಲೆಕ್ಷನ್ ಅನ್ನೇ ಮಾಡಿದೆ. 'ಲಾಲ್ ಸಿಂಗ್ ಚಡ್ಡ' ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ 8 ಕೋಟಿ. ಲೈಗರ್ ಸಿನಿಮಾ ಮೊದಲ ದಿನ 19 ಕೋಟಿ ರುಪಾಯಿ ಹಣ ಗಳಿಸಿದೆ.

    'ಲೈಗರ್' ಸಿನಿಮಾದ ಬಗ್ಗೆ ಭಾರಿ ಋಣಾತ್ಮಕ ವಿಮರ್ಶೆಗಳು ವ್ಯಕ್ತವಾಗಿವೆ. ಸಿನಿಮಾದಲ್ಲಿ ವಿಜಯ್ ದೇವರಕೊಂಡ ಹೊರತಾಗಿ ಇನ್ನೇನು ಉತ್ತಮ ಅಂಶವಿಲ್ಲ ಎನ್ನಲಾಗಿದೆ. ಪುರಿ ಜಗನ್ನಾಥ್ ಬಹಳ ಕಳಪೆ ನಿರ್ದೇಶನ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ ವಿಮರ್ಶಕರು. ಅನನ್ಯಾ ಪಾಂಡೆ ನಟನೆಯೂ ತೀರ ಕಳಪೆಯಾಗಿದೆಯಂತೆ.

    'ಲೈಗರ್' ಸಿನಿಮಾವು ಎಂಎಂಎ ಫೈಟರ್ ಒಬ್ಬನ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಅನನ್ಯಾ ಪಾಂಡೆ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಪುರಿ ಜಗನ್ನಾಥ್, ನಿರ್ಮಾಣವೂ ಅವರದ್ದೇ ನಟಿ ಚಾರ್ಮಿ ಸಹ ನಿರ್ಮಾಪಕಿ. ವಿಜಯ್ ದೇವರಕೊಂಡ ತಾಯಿಯ ಪಾತ್ರದಲ್ಲಿ ರಮ್ಯಾ ಕೃಷ್ಣ ನಟಿಸಿದ್ದಾರೆ.

    English summary
    Vijay Devarakonda starrer Liger movie second day box office collection, Movie collected 28 crore rs in two days,
    Saturday, August 27, 2022, 15:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X