Just In
Don't Miss!
- News
ಮುಂದಿನ ಎರಡು ದಿನಗಳಲ್ಲಿ ಶಾಲಾ ಶುಲ್ಕ ನಿಗದಿ:ಸುರೇಶ್ ಕುಮಾರ್
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಾಯಲ್ಲಿ ದೇವರಕೊಂಡ ಚಿತ್ರ ಬಿಡಿಸಿದ ಅಭಿಮಾನಿ ಕಂಡು ನಟ ಫಿದಾ
ಅರ್ಜುನ್ ರೆಡ್ಡಿ, ಗೀತಾ ಗೋವಿಂದಂ ಸಿನಿಮಾಗಳ ಯಶಸ್ಸಿನ ನಂತರ ದೇವರಕೊಂಡ ಇಮೇಜ್, ಅಭಿಮಾನಿ ಬಳಗ ಹೆಚ್ಚಾಗಿದೆ. ಯುವ ಅಭಿಮಾನಿಗಳ ಪಾಲಿನ ನೆಚ್ಚಿನ ನಟ ಎನಿಸಿಕೊಂಡಿರುವ ದೇವರಕೊಂಡಗೆ ವಿಶೇಷ ಅಭಿಮಾನಿಯೊಬ್ಬರು ಪ್ರೀತಿಯ ಉಡುಗೊರೆ ನೀಡಿದ್ದಾರೆ.
ವಿಶೇಷ ಚೇತನ ಅಭಿಮಾನಿಯೊಬ್ಬರು ಬಾಯಿಯ ಮೂಲಕ ದೇವರಕೊಂಡ ಅವರ ಚಿತ್ರ ಬಿಡಿಸಿದ್ದಾರೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ವಿಜಯ್ ದೇವರಕೊಂಡ ಸಹೋದರ ಚಿತ್ರ ನೋಡಿ ಗುಣಗಾನ ಮಾಡಿದ ರಶ್ಮಿಕಾ
ಬಾಯಿಯ ಮೂಲಕ ಚಿತ್ರ ಬಿಡಿಸುತ್ತಿರುವ ಯುವತಿಯ ವಿಡಿಯೋ ದೇವರಕೊಂಡ ಕಣ್ಣಿಗೆ ಬಿದ್ದಿದ್ದು, ಆ ಪ್ರತಿಭೆಗೆ ಹ್ಯಾಟ್ಸಾಪ್ ಹೇಳಿದ್ದಾರೆ. 'ನಿಮ್ಮ ಪ್ರೀತಿ ನಮಗೆ ಸ್ಫೂರ್ತಿ' ಎಂದು ಸಂತಸ ವ್ಯಕ್ತಪಡಿಸಿರುವ ನಟ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.
ವಿಜಯ್ ದೇವರಕೊಂಡ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸುಮಾರು 85 ಸಾವಿರಕ್ಕೂ ಅಧಿಕ ಜನರು ನೋಡಿದ್ದು, ಮೆಚ್ಚಗೆ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟಿಯನ್ನು ಹಾಡಿ ಹೊಗಳಿದ ವಿಜಯ್ ದೇವರಕೊಂಡ
ಫೈಟರ್ ಸಿನಿಮಾದಲ್ಲಿ ದೇವರಕೊಂಡ
ಲಾಕ್‌ಡೌನ್ ಜಾರಿಯಾದ ಕ್ಷಣದಿಂದ ಮನೆಯಲ್ಲಿಯೇ ಸಮಯ ಕಳೆದಿರುವ ನಟ ಈಗ ಫೈಟರ್ ಸಿನಿಮಾ ಚಿತ್ರೀಕರಣಕ್ಕೆ ಆರಂಭಿಸಬೇಕಿದೆ. ಪೂರಿ ಜಗನ್ನಾಥ್ ನಿರ್ದೇಶಿಸುತ್ತಿರುವ ಫೈಟರ್ ಚಿತ್ರದಲ್ಲಿ ದೇವರಕೊಂಡ ಕಾಣಿಸಿಕೊಳ್ಳುತ್ತಿದ್ದು, ಜನವರಿಯಲ್ಲಿ ಶೂಟಿಂಗ್‌ಗೆ ಮರು ಚಾಲನೆ ನೀಡಲಿದ್ದಾರೆ.
ಕಳೆದ ತಿಂಗಳಲ್ಲಿ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ನಟನೆಯ 'ಮಿಡ್ಲ್‌ಕ್ಲಾಸ್ ಮೆಲೋಡೀಸ್' ಸಿನಿಮಾ ತೆರೆಕಂಡಿತ್ತು.