For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಿಗೆ ತಮ್ಮ ಬಗ್ಗೆ ತಿಳಿಯದ ಎರಡು ಸತ್ಯ ಹೇಳಿದ ವಿಜಯ್ ದೇವರಕೊಂಡ

  |

  ನಟ ವಿಜಯ್ ದೇವರಕೊಂಡ ಇದೀಗ ತಮ್ಮ ಹೊಸ ಸಿನಿಮಾ 'ಲೈಗರ್' ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣ, ಆಂಧ್ರ-ತೆಲಂಗಾಣ ಮಾತ್ರವೇ ಅಲ್ಲದೆ ದೇಶದ ಹಲವು ನಗರಗಳನ್ನು ಸುತ್ತಿ ಸತತವಾಗಿ ಪ್ರೊಮೋಷನ್ ಮಾಡುತ್ತಿದ್ದಾರೆ.

  ಮುಂಬೈ, ಉತ್ತರ ಪ್ರದೇಶ, ಪುಣೆ, ಲಕ್ನೋ, ಹೈದರಾಬಾದ್, ಗುಂಟೂರು, ಚೆನ್ನೈ, ಕೊಚ್ಚಿ ಇನ್ನೂ ಹಲವು ನಗರಗಳಲ್ಲಿ ವಿಜಯ್ ದೇವರಕೊಂಡ ಹಾಗೂ ತಂಡ ಪ್ರಚಾರ ನಡೆಸುತ್ತಿದೆ. ನಾಳೆ (ಆಗಸ್ಟ್ 19) ರಂದು ಬೆಂಗಳೂರಿಗೆ ಸಹ ಬರಲಿದೆ.

  ವಿಜಯ್ ದೇವರಗೊಂಡ ಮನೆ ಪೂಜೆಯಲ್ಲಿ ಅನನ್ಯಾ ಪಾಂಡೆ: ಗಾಸಿಪ್‌ಗೆ ಬಿತ್ತು ಒಗ್ಗರಣೆ!ವಿಜಯ್ ದೇವರಗೊಂಡ ಮನೆ ಪೂಜೆಯಲ್ಲಿ ಅನನ್ಯಾ ಪಾಂಡೆ: ಗಾಸಿಪ್‌ಗೆ ಬಿತ್ತು ಒಗ್ಗರಣೆ!

  ಕಳೆದ 25 ದಿನಗಳಿಂದಲೂ ಬಿಡುವಿಲ್ಲದ ಪ್ರಚಾರದಲ್ಲಿ ಭಾಗವಹಿಸಿರುವ ವಿಜಯ್ ಅಸಲಿಗೆ ಗಾಯಗೊಂಡಿದ್ದಾರೆ. ಸಿನಿಮಾ ಶೂಟಿಂಗ್ ವೇಳೆಯೇ ವಿಜಯ್ ದೇವರಕೊಂಡ ಗಾಯಗೊಂಡಿದ್ದಾರೆ. ಈ ವಿಷಯವನ್ನು ಅವರೇ ಹೇಳಿಕೊಂಡಿದ್ದು, ಇನ್ನಾರು ತಿಂಗಳು ನಾನು ವರ್ಕೌಟ್ ಸಹ ಮಾಡುವಂತಿಲ್ಲ ಎಂದಿದ್ದಾರೆ.

  ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನಟ ವಿಜಯ್ ದೇವರಕೊಂಡ, 'ನಿಮ್ಮ ಬಗ್ಗೆ ನಿಮ್ಮ ಅಭಿಮಾನಿಗಳಿಗೆ ಗೊತ್ತಿಲ್ಲದ ಸತ್ಯವನ್ನು ಹೇಳಿ' ಎಂದಾಗ, ''ನಾನು ನನ್ನ ದೇಹಕ್ಕೆ ಗಾಯ ಮಾಡಿಕೊಂಡಿದ್ದೇನೆ. ನಾನೀಗ ಅದರ ಚಿಕಿತ್ಸೆಯ ಸ್ಟೇಜ್‌ನಲ್ಲಿದ್ದೇನೆ'' ಎಂದಿದ್ದಾರೆ.

  'ಲೈಗರ್'ಗಾಗಿ ಅತಿಯಾದ ವರ್ಕೌಟ್

  'ಲೈಗರ್'ಗಾಗಿ ಅತಿಯಾದ ವರ್ಕೌಟ್

  ''ಲೈಗರ್' ಸಿನಿಮಾಕ್ಕಾಗಿ ನಾನು ಅತಿಯಾಗಿ ವರ್ಕೌಟ್‌ ಮಾಡಿದೆ. ನಾನು ಎಷ್ಟು ಮಾಡಬೇಕಿತ್ತು ಅದಕ್ಕಿಂತಲೂ ಹೆಚ್ಚಾಗಿ ಮಾಡಿಬಿಟ್ಟೆ. ನಾವು ಕೋವಿಡ್‌ಗೆ ಮುಂಚೆ ಶೂಟಿಂಗ್ ಪ್ರಾರಂಭಿಸಿದೆ. ಆದರೆ ನಡುವಲ್ಲಿ ಕೋವಿಡ್ ಬಂತು ನಾನು ನನ್ನ ದೇಹಾಕಾರ ಕಳೆದುಕೊಳ್ಳುವಂತಿರಲಿಲ್ಲ. ಹಾಗಾಗಿ ಕಳೆದ ಮೂರು ವರ್ಷಗಳಲ್ಲಿ ನನ್ನ ದೇಹ ತಡೆದುಕೊಳ್ಳಲಾರದಷ್ಟು ವರ್ಕೌಟ್ ಮಾಡಿದ್ದೇನೆ. ಅದರಿಂದ ನನ್ನ ದೇಹಕ್ಕೆ ಗಾಯವಾಗಿದೆ'' ಎಂದಿದ್ದಾರೆ.

  ಇನ್ನಾರೇಳು ತಿಂಗಳು ನಿರ್ಮಾಣ ಮಾಡುವಂತಿಲ್ಲ: ವಿಜಯ್

  ಇನ್ನಾರೇಳು ತಿಂಗಳು ನಿರ್ಮಾಣ ಮಾಡುವಂತಿಲ್ಲ: ವಿಜಯ್

  ''ಪಾತ್ರಕ್ಕೆ ಇಂಥಹದ್ದು ಬೇಕೆಂದರೆ ಅದನ್ನು ಪೂರ್ಣವಾಗಿ ಕೊಡುವವರೆಗೆ ನಾನು ವಿರಮಿಸುವುದಿಲ್ಲ. ಹಾಗಾಗಿ ಜಿಮ್‌ನಲ್ಲಿ ಪ್ರಾಣಿಯಂತೆ ವರ್ಕೌಟ್ ಮಾಡಿದ್ದೇನೆ. ಆದರೆ ಈಗದು ಅದ್ಯಾವ ಹಂತ ತಲುಪಿದೆ ಎಂದರೆ ನನಗೆ ಇನ್ನು ವರ್ಕೌಟ್ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ದೇಹಕ್ಕೆ ನಾನು ಅತೀವವಾದ ಶ್ರಮ ಕೊಟ್ಟುಬಿಟ್ಟಿದ್ದೇನೆ. ಈಗೇನಿದ್ದರೂ ಅದಕ್ಕೆ ವಿಶ್ರಾಂತಿಯ ಅಗತ್ಯವಿದೆ. ಹಾಗಾಗಿ ಮುಂದಿನ ಕೆಲವು ತಿಂಗಳು ನಾನು ವರ್ಕೌಟ್‌ನಿಂದ ದೂರ ಉಳಿಯಲಿದ್ದೇನೆ. ಇನ್ನಾರೇಳು ತಿಂಗಳು ನಾನು ವರ್ಕೌಟ್ ಮಾಡುವಂತಿಲ್ಲ. ಅತಿಯಾಗಿ ದೇಹ ದಂಡಿಸುವಂತಿಲ್ಲ'' ಎಂದಿದ್ದಾರೆ.

  ನನಗೆ ಹುಡುಗಿಯರೆಂದರೆ ಬಹಳ ಭಯ: ವಿಜಯ್ ದೇವರಕೊಂಡ

  ನನಗೆ ಹುಡುಗಿಯರೆಂದರೆ ಬಹಳ ಭಯ: ವಿಜಯ್ ದೇವರಕೊಂಡ

  ಇನ್ನೊಂದು ಸತ್ಯವನ್ನೂ ಹೇಳಿರುವ ವಿಜಯ್ ದೇವರಕೊಂಡ, ''ನನಗೆ ಹುಡುಗಿಯರೆಂದರೆ ಬಹಳ ಭಯ ಇತ್ತು. ನಾನು ಯುವತಿಯರ ಕಣ್ಣಲ್ಲಿ ಕಣ್ಣಿಟ್ಟು ಸಹ ನೋಡಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲರೂ ಹುಡುಗರೇ ಇದ್ದ ಶಾಲೆಯಲ್ಲಿ ಓದಿದ್ದ ನನಗೆ ಹುಡುಗಿಯರೆಂದರೆ ಬೇರೆ ಪ್ರಪಂಚದವರು ಎಂದೇ ಭಾವಿಸಿದ್ದೆ. ನನಗೆ ಹದಿನೆಂಟು ವರ್ಷ ತುಂಬುವವರೆಗೆ ನನಗೆ ಹುಡುಗಿಯರನ್ನು ನೋಡಲು, ಮಾತನಾಡಿಸಲು ಬಹಳ ಮುಜುಗರವಾಗುತ್ತಿತ್ತು'' ಎಂದಿದ್ದಾರೆ. ಆದರೆ ಈಗ ವಿಜಯ್ ದೇವರಕೊಂಡ ರೊಮ್ಯಾನ್ಸ್ ಕಿಂಗ್ ಆಗಿದ್ದಾರೆ.

  ಬೆಂಗಳೂರಿಗೆ ಬರಲಿರುವ ವಿಜಯ್ ದೇವರಕೊಂಡ

  ಬೆಂಗಳೂರಿಗೆ ಬರಲಿರುವ ವಿಜಯ್ ದೇವರಕೊಂಡ

  ವಿಜಯ್ ದೆವರಕೊಂಡ ಹಾಗೂ ಅನನ್ಯಾ ಪಾಂಡೆ ನಟನೆಯ 'ಲೈಗರ್' ಸಿನಿಮಾ ಇದೇ ತಿಂಗಳು 25 ರಂದು ತೆರೆಗೆ ಬರಲಿದೆ. ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳವೂ ಅವರದ್ದೇ. ಸಿನಿಮಾದಲ್ಲಿ ರಮ್ಯಾ ಕೃಷ್ಣ ಹಾಗೂ ವಿಶೇಷವಾಗಿ ಮೈಕ್ ಟೈಸನ್ ಸಹ ನಟಿಸಿದ್ದಾರೆ. ಇದೇ ಸಿನಿಮಾದ ಪ್ರಚಾರದಲ್ಲಿ ವಿಜಯ್ ತೊಡಗಿಕೊಂಡಿದ್ದು ನಾಳೆ (ಆಗಸ್ಟ್ 19)ಕ್ಕೆ ಬೆಂಗಳೂರಿನ ಮಂತ್ರಿ ಮಾಲ್‌ಗೆ ಆಗಮಿಸಲಿದ್ದಾರೆ.

  English summary
  Actor Vijay Devarakonda said He injured himself by working out heavily for the movie Liger. He said he can not work out for next six months.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X