twitter
    For Quick Alerts
    ALLOW NOTIFICATIONS  
    For Daily Alerts

    'ಲೈಗರ್' ಬಾಕ್ಸಾಫೀಸ್ ಭವಿಷ್ಯವೇನು? ಬಾಯ್‌ಕಾಟ್ ಮಧ್ಯೆ ಪ್ರೀಮಿಯರ್ ಬುಕಿಂಗ್ ಹೇಗಿದೆ?

    |

    ದಕ್ಷಿಣ ಭಾರತದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದುವೇ ವಿಜಯ್ ದೇವರಕೊಂಡ ಅಭಿನಯದ 'ಲೈಗರ್'. ಡೇರಿಂಗ್ ಅಂಡ್ ಡ್ಯಾಶಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ನಿರ್ದೇಶನದ ಈ ಸಿನಿಮಾ ದೇಶಾದ್ಯಂತ ಬೇಜಾನ್ ಹಾವ ಎಬ್ಬಿಸಿದೆ.

    'ಲೈಗರ್' ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗಲೇ ವಿಜಯ್ ದೇವರಕೊಂಡ ಕೂಡ ಪ್ರಚಾರವನ್ನು ಚುರುಕುಗೊಳಿಸಿದ್ದಾರೆ. ದೇಶದ ಉದ್ದಗಲಕ್ಕೂ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಇಬ್ಬರೂ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ದಿನದಿಂದ ವೇಗ ಹೆಚ್ಚಿಸಿಕೊಳ್ಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ 'ಲೈಗರ್' ಸಿನಿಮಾ ಬಾಯ್‌ಕಾಟ್ ಬಗ್ಗೆ ಅಭಿಯಾನ ಶುರುವಾಗಿತ್ತು.

    ಈ ಬೆನ್ನಲ್ಲೇ 'ಲೈಗರ್' ಬಿಡುಗಡೆಗೆ ಇನ್ನೊಂದು ವಾರವಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಅಭಿಯಾನ ಚಿತ್ರತಂಡದ ನಿದ್ದೆಕೆಡಿಸಿದೆ. ಇನ್ನೊಂದು ಕಡೆ ಬಾಕ್ಸಾಫೀಸ್ ಪಂಡಿತರು ಈ ಸಿನಿಮಾ ಗಲ್ಲಾಪಟ್ಟಿಗೆಯಲ್ಲಿ ಎಷ್ಟು ಕಮಾಯಿ ಮಾಡಬಹುದೆಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಇನ್ನೊಂದು ಅಮೆರಿಕದಲ್ಲಿ ಅಡ್ವಾನ್ಸ್ ಪ್ರೀಮಿಯರ್ ಬುಕ್ಕಿಂಗ್ ಕೂಡ ಓಪನ್ ಆಗಿದೆ. ಹಾಗಿದ್ದರೆ, 'ಲೈಗರ್' ಬಗ್ಗೆ ಏನು ಡಿಟೈಲ್ಸ್ ಇದೆ? ಅನ್ನೋದನ್ನು ತಿಳಿಯೋಕೆ ಮುಂದೆ ಓದಿ.

    'ಲೈಗರ್' ಅಡ್ವಾನ್ಸ್ ಬುಕಿಂಗ್ ಹೇಗಿದೆ?

    'ಲೈಗರ್' ಅಡ್ವಾನ್ಸ್ ಬುಕಿಂಗ್ ಹೇಗಿದೆ?

    'ಲೈಗರ್' ಆಗಸ್ಟ್ 25ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಹೀಗಾಗಿ ಪ್ರಮೋಷನ್ ಜೋರು ಮಾಡಿದೆ ಟೀಮ್. ಈ ಮಧ್ಯೆನೇ ಅಮೆರಿಕದಲ್ಲಿ ಅಡ್ವಾನ್ಸ್ ಬುಕಿಂಗ್ ಕೂಡ ಓಪನ್ ಮಾಡಲಾಗಿದೆ. 'ಲೈಗರ್' ಬಗ್ಗೆ ನಿರೀಕ್ಷೆ ಹೆಚ್ಚಾಗಿದ್ದು, ಅಮೆರಿಕಾದಲ್ಲಿ ಪ್ರೀಮಿಯರ್ ನಡೆಯಲಿದೆ. ಅದಕ್ಕೆ ಒಂದು ವಾರ ಮೊದಲೇ ಪ್ರೀಮಿಯರ್ ಶೋಗೆ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದೆ. ಸದ್ಯಕ್ಕೆ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಈ ಸಿನಿಮಾ ಸುಮಾರು 162 ಕಡೆಗಳಲ್ಲಿ ಪ್ರೀಮಿಯರ್ ಆಗುತ್ತಿದೆ. ಸುಮಾರು 484 ಶೋದಿಂದ 6163 ಟಿಕೆಟ್ ಬುಕಿಂಗ್ ಆರಂಭ ಆಗಿದೆ.

    ಅಡ್ವಾನ್ಸ್ ಬುಕಿಂಗ್ ಕಲೆಕ್ಷನ್

    ಅಡ್ವಾನ್ಸ್ ಬುಕಿಂಗ್ ಕಲೆಕ್ಷನ್

    'ಲೈಗರ್' ಸಿನಿಮಾದ ಜಗತ್ತಿನಾದ್ಯಂತ ಪ್ರೀಮಿಯರ್ ಶೋಗೆ ಅಡ್ವಾನ್ಸ್ ಬುಕಿಂಗ್ ಆರಂಭಿಸಿದೆ. ಈಗಾಗಲೇ ತೆಲುಗು ಬಾಕ್ಸಾಫೀಸ್‌ನಲ್ಲಿ ಸುಮಾರು 84 ಲಕ್ಷ ಗಳಿಕೆ ಆಗಿದ್ದು, 57 ಲಕ್ಷ ಕೇವಲ ಹೈದರಾಬಾದ್ ಒಂದರಲ್ಲೇ ಆಗಿದೆ. ಹಿಂದಿಯಲ್ಲಿ ಸುಮಾರು 4 ಲಕ್ಷ, ತಮಿಳು ನಾಡಿನಲ್ಲಿ 28 ಲಕ್ಷದಷ್ಟು ಗಳಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ. ಇಲ್ಲಿವರೆಗೂ ಸುಮಾರು 1.16 ಲಕ್ಷದಷ್ಟು ಹಣ ಕೇವಲ ಪ್ರೀಮಿಯರ್‌ನಿಂದಲೇ ಬಂದಿದೆ ಎಂದು ವರದಿಯಾಗಿದೆ.

    ಬಾಕ್ಸಾಫೀಸ್‌ನಲ್ಲಿ 'ಲೈಗರ್' ಭವಿಷ್ಯವೇನು?

    ಬಾಕ್ಸಾಫೀಸ್‌ನಲ್ಲಿ 'ಲೈಗರ್' ಭವಿಷ್ಯವೇನು?

    ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಮೊದಲ ಕಾಂಬಿನೇಷನ್ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಅಲ್ಲದೆ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಬೆನ್ನಲ್ಲೇ ಸಿನಿಮಾ ಬಗ್ಗೆ ನಿರೀಕ್ಷೆನೂ ದುಪ್ಪಟ್ಟಾಗಿದೆ. ಅದರಂತೆ 'ಲೈಗರ್' ಬಾಕ್ಸಾಫೀಸ್‌ನಲ್ಲಿ ಬಿಡುಗಡೆಯಾದ ಕೆಲವು ದಿನಗಳಲ್ಲಿಯೇ ಸುಮಾರು 200 ಕೋಟಿ ರೂ. ಗಳಿಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ಅತ್ಯದ್ಬುತ ರಿಪೋರ್ಟ್ ಬಂದರೆ, 'ಲೈಗರ್' ಇನ್ನೂ ಹೆಚ್ಚು ಗಳಿಕೆ ಕಾಣಬಹುದು ಎನ್ನುತ್ತಿದ್ದಾರೆ ಟ್ರೇಡ್ ಅನಲಿಸ್ಟ್‌ಗಳು.

    ಬಾಯ್‌ಕಾಟ್ ವಿರುದ್ಧ ಫೈಟ್

    ಬಾಯ್‌ಕಾಟ್ ವಿರುದ್ಧ ಫೈಟ್

    ಎಲ್ಲರೂ ಕಣ್ಣು ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಮೇಲಿತ್ತು. ಆದರೆ, ದಿಢೀರನೇ ಸೋಶಿಯಲ್ ಮೀಡಿಯಾದಲ್ಲಿ 'ಲೈಗರ್' ಬಾಯ್‌ಕಾಟ್‌ ಬಗ್ಗೆ ಅಭಿಯಾನ ಶುರುವಾಗಿದೆ. ಕರಣ್ ಜೋಹರ್ ನಿರ್ಮಾಣ ಹಾಗೂ ಅನನ್ಯಾ ಪಾಂಡೆಯಿಂದಾಗಿ ಈ ಅಭಿಯಾನ ಶುರುವಾಗಿದೆ. ಈ ವೇಳೆನೇ " ನಾವು ಧರ್ಮದ ಪ್ರಕಾರ ಯಾವಾಗ ನಡೆದುಕೊಳ್ಳುತ್ತೇವೋ, ಅಂತ ಸಂದರ್ಭದಲ್ಲಿ ಯಾರ ಬಗ್ಗೆನೂ ತಲೆಕೆಡಿಸಿಕೊಳ್ಳಬೇಕಿಲ್ಲ. ಇದರ ವಿರುದ್ಧ ತಿರುಗಿಬೀಳುತ್ತೇವೆ." ಎಂದು ವಿಜಯ್ ದೇವರಕೊಂಡ ಟ್ವೀಟ್ ಮಾಡಿದ್ದಾರೆ.

    English summary
    Vijay Devarakonda Starrer Liger Box Office Prediction And Advance Booking. Know More,
    Monday, August 22, 2022, 9:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X