For Quick Alerts
  ALLOW NOTIFICATIONS  
  For Daily Alerts

  'ಅರ್ಜುನ್ ರೆಡ್ಡಿ' ಸಿನಿಮಾಗೆ ಮೊದಲು ಆಯ್ಕೆ ಆಗಿದ್ದು ದೇವರಕೊಂಡ ಅಲ್ಲ

  |

  ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಸಿನಿಮಾ ಅರ್ಜುನ್ ರೆಡ್ಡಿ. ಈ ಸಿನಿಮಾ ಮೂಲಕ ವಿಜಯ್ ದೇವರಕೊಂಡ ರಾತ್ರೋ ರಾತ್ರಿ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಅರ್ಜುನ್ ರೆಡ್ಡಿ ಸಿನಿಮಾಗಿಂತ ಮೊದಲು ವಿಜಯ್ ದೇವರಕೊಂಡ ಯಾರು ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಆದರೆ ಒಂದು ಸಿನಿಮಾ ವಿಜಯ್ ದೇವರಕೊಂಡ ಜೀವನದ ದಿಕ್ಕನ್ನೆ ಬದಲಾಯಿಸಿದೆ.

  ನಿವಿ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಟ್ಟ ಚಂದನ್ ಶೆಟ್ಟಿ..! | Nivedhita Gowda | Chandan Shetty

  ಸಂದೀಪ್ ರೆಡ್ಡಿ ವಂಗಾ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾಗೆ ಕೇವಲ ತೆಲಗು ಚಿತ್ರರಂಗ ಮಾತ್ರವಲ್ಲ ಭಾರತೀಯ ಚಿತ್ರರಂಗ ದಂಗ್ ಆಗಿತ್ತು. ದೊಡ್ಡ ಮಟ್ಟದಲ್ಲಿ ಹಿಟ್ ಆದ ಅರ್ಜುನ್ ರೆಡ್ಡಿ ಸಿನಿಮಾಗೆ ಮೊದಲು ಆಯ್ಕೆಯಾಗಿದ್ದು ವಿಜಯ್ ದೇವರಕೊಂಡ ಅಲ್ಲವಂತೆ. ಹಾಗಾದರೆ 'ಅರ್ಜುನ್ ರೆಡ್ಡಿ' ಅವಕಾಶ ಮಿಸ್ ಮಾಡಿಕೊಂಡ ಆ ತೆಲುಗು ನಟ ಯಾರು? ಮುಂದೆ ಓದಿ..

  ಸುಳ್ಳು ಸುದ್ದಿ ಬರೆದವರ ವಿರುದ್ಧ ದೂರು ನೀಡಲಿರುವ ವಿಜಯ್ ದೇವರಕೊಂಡಸುಳ್ಳು ಸುದ್ದಿ ಬರೆದವರ ವಿರುದ್ಧ ದೂರು ನೀಡಲಿರುವ ವಿಜಯ್ ದೇವರಕೊಂಡ

  ಆಂಗ್ರಿ ಯಂಗ್ ಮ್ಯಾನ್ ಪಾತ್ರಕ್ಕೆ ಆಯ್ಕೆಯಾದ ಮೊದಲ ನಟ

  ಆಂಗ್ರಿ ಯಂಗ್ ಮ್ಯಾನ್ ಪಾತ್ರಕ್ಕೆ ಆಯ್ಕೆಯಾದ ಮೊದಲ ನಟ

  ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕಥೆಯನ್ನು ತಯಾರಿಸಿಕೊಂಡು ತೆಲುಗು ನಟ ಶರ್ವಾನಂದ್ ಅವರಿಗೆ ಮೊದಲು ಸಿನಿಮಾದಲ್ಲಿ ಅಭಿನಯಿಸಲು ಆಫರ್ ಮಾಡಿದ್ದಾರೆ. ಅಲ್ಲದೆ ಕಥೆ ಕೇಳಿ ನಟ ಶರ್ವಾನಂದ್ ಸಹ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದರಂತೆ. ಆದರೆ ಕಾರಣಾಂತರಗಳಿಂದ ಶರ್ವಾನಂದ್ ಸಿನಿಮಾದಿಂದ ಹೊರ ನಡೆದಿದ್ದಾರೆ. ಆ ನಂತರ ಸಂದೀಪ್, ವಿಜಯ್ ಬಳಿ ಹೋಗಿದ್ದಾರೆ.

  ಸಂದೀಪ್ ಮತ್ತು ಶರ್ವಾನಂದ್ ಮತ್ತೊಂದು ಸಿನಿಮಾ

  ಸಂದೀಪ್ ಮತ್ತು ಶರ್ವಾನಂದ್ ಮತ್ತೊಂದು ಸಿನಿಮಾ

  ಅರ್ಜುನ್ ರೆಡ್ಡಿ ಸಿನಿಮಾದಿಂದ ಹೊರಬಂದ ನಂತರ ಶರ್ವಾನಂದ್ ಮತ್ತು ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್ ನಲ್ಲಿ ಮತ್ತೊಂದು ಪ್ರಾಜೆಕ್ಟ್ ಮಾಡುವ ಬಗ್ಗೆ ಮಾತುಕಥೆ ನಡೆದಿತ್ತು. ಆದರೆ ಅರ್ಜುನ್ ರೆಡ್ಡಿ ಸೂಪರ್ ಹಿಟ್ ಆದ ನಂತರ ಶರ್ವಾನಂದ್ ಮತ್ತು ಸಂದೀಪ್ ವಂಗಾ ಸಿನಿಮಾ ಸೆಟ್ಟೇರಿಲಿಲ್ಲ. ಇನ್ನೂ ಸಹ ಇಬ್ಬರ ಪ್ರಾಜೆಕ್ಟ್ ಬಗ್ಗೆ ಮಾತುಕತೆಯಾಗಿಲ್ಲ.

  ಶರ್ವಾನಂದ್ ಸಿನಿಮಾಗಳು

  ಶರ್ವಾನಂದ್ ಸಿನಿಮಾಗಳು

  ಶರ್ವಾನಂದ್ ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಟಾಲಿವುಡ್ ನಲ್ಲಿ ದೊಡ್ಡ ಸ್ಟಾರ್ ಆಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತೆಲುಗು ಜೊತೆಗೆ ತಮಿಳು ಭಾಷೆಯಲ್ಲಿಯೂ ಶರ್ವಾನಂದ್ ಅಭಿನಯಿಸಿದ್ದರೆ. ಇತ್ತೀಚಿಗೆ ಶರ್ವಾನಂದ್ ಸಮಂತಾ ಜೊತೆ ಜಾನು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸದ್ಯ ಶರ್ವಾನಂದ್ ಕೀರ್ವಾನಿ ಮತ್ತು ಶ್ರೀಕಾರಂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  ಬಾಲಿವುಡ್ ಗೆ ರಿಮೇಕ್ ಆದ ಅರ್ಜುನ್ ರೆಡ್ಡಿ

  ಬಾಲಿವುಡ್ ಗೆ ರಿಮೇಕ್ ಆದ ಅರ್ಜುನ್ ರೆಡ್ಡಿ

  ಅರ್ಜುನ್ ರೆಡ್ಡಿ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟಕ್ಕೆ ಹಿಟ್ ಆಗುತ್ತಿದ್ದಂತೆ ರಿಮೇಕ್ ರೈಟ್ಸ್ ಗೆ ಭಾರಿ ಡಿಮ್ಯಾಂಡ್ ಬಂದಿದೆ. ಆ ನಂತರ ಅರ್ಜುನ್ ರೆಡ್ಡಿ ಬಾಲಿವುಡ್ ನಲ್ಲಿ ಕಬೀರ್ ಸಿಂಗ್ ರಿಲೀಸ್ ಆಗಿದೆ. ಚಿತ್ರದಲ್ಲಿ ಶಾಹಿದ್ ಕಪೂರ್ ನಾಯಕನಾಗಿ ಮಿಂಚಿದ್ದಾರೆ. ಬಾಲಿವುಡ್ ನಲ್ಲಿಯೂ ಕಬೀರ್ ಸಿಂಗ್ ದೊಡ್ಡ ಮಟ್ಟಕ್ಕೆ ಹಿಟ್ ಆಗಿದೆ.

  English summary
  Actor Vijay Devarakonda was not first choice for Super hit Arjun Reddy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X