Don't Miss!
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Vijay Devarakonda: ಇದು ವಿಜಯ್ ದೇವರಕೊಂಡರ 15 ಕೋಟಿ ಬೆಲೆಯ ಲಕ್ಷುರಿ ಬಂಗಲೆ!
ವಿಜಯ್ ದೇವರಕೊಂಡ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಹುಬೇಗ ಎತ್ತರಕ್ಕೆ ಬೆಳೆದ ನಟ. ಸೈಡ್ ರೋಲ್‌ನಲ್ಲಿ ಅಭಿನಯಿಸುವ ಮೂಲಕ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟ ವಿಜಯ್ ನಂತರ ಒಂದಷ್ಟು ಸಿನಿಮಾಗಳನ್ನು ಮಾಡಿದ್ರು ಕೂಡ ಅಷ್ಟಾಗಿ ಹೆಸರುವಾಸಿ ಆಗಿರಲಿಲ್ಲಾ.
ಆದರೆ 'ಅರ್ಜುನ್ ರೆಡ್ಡಿ' ಸಿನಿಮಾ ರಿಲೀಸ್ ಆಗುತ್ತಿದ್ದಂತೆ ವಿಜಯ್ ದೇವರಕೊಂಡ ಅವರಿಗೂ ಅದೃಷ್ಟ ಒಲಿದಿತ್ತು. ಅಷ್ಟು ವರ್ಷ ಚಿತ್ರರಂಗದಲ್ಲಿ ದುಡಿದಿದ್ದಕ್ಕು ಸಾರ್ಥಕವಾಗಿತ್ತು.
Samantha:
ಮಣಿರತ್ನಂ
'ರೋಜಾ'
ಚಿತ್ರಕ್ಕಾಗಿ
ಸಮಂತಾ,
ವಿಜಯ್
ದೇವರಕೊಂಡ
ಭರ್ಜರಿ
ತಯಾರಿ!
ಹೀಗೆ 'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ತನ್ನ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿಕೊಂಡ ವಿಜಯ್ ಮುಂದೆ ಮುಟ್ಟಿದ್ದೆಲ್ಲವೂ ಚಿನ್ನವಾಗಿತ್ತು. ಕಡಿಮೆ ಸಮಯದಲ್ಲೆ ಒಂದೆ ಸಿನಿಮಾದಿಂದ ದೊಡ್ಡ ನಟನಾಗಿ ಬೆಳೆದ ವಿಜಯ್ ದೇವರಕೊಂಡ ಇದೀಗ ಸಾಲು ಸಾಲು ಬಿಗ್ ಬಜೆಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಬಹು ಕೋಟಿ ವೆಚ್ಚದ ಬಂಗಲೆ ಇದು!
ವಿಜಯ್ ದೇವರಕೊಂಡ ಸಿನಿಮಾಗಳ ಯಶಸ್ಸಿನ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ವಿಜಯ್ ದೇವರಕೊಂಡ ನಿಜ ಜೀವನವೂ ಇದೀಗ ಬದಲಾಗಿದೆ. ಸಿನಿಮಾ ಮೂಲಕ ಕೋಟಿ ಕೋಟಿ ಸಂಪಾದಿಸುತ್ತಿರುವ ವಿಜಯ್ ದೇವರಕೊಂಡ ಲಕ್ಷುರಿ ಜೇವನ ನಡೆಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿರೋದು ವಿಜಯ್ ದೇವರಕೊಂಡ ತನ್ನ ಕುಟುಂಬದ ಜೊತೆ ವಾಸಿಸುತ್ತಿರುವ ಬಹು ಕೋಟಿ ವೆಚ್ಚದ ಬಂಗಲೆ. ಎಸ್, ವಿಜಯ್ ದೇವರಕೊಂಡ 15 ಕೋಟಿ ಬೆಲೆ ಬಾಳುವ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಒಳಗೆ ಹೊದರೆ ಸ್ವರ್ಗವೇ ಇದ್ದಂತಿದೆ
ಅಚ್ಚರಿಯ ವಿಚಾರ ಏನು ಅಂದರೆ ಈ ಬಂಗಲೆಯನ್ನು ಸ್ವತಃ ವಿಜಯ್ ದೇವರಕೊಂಡ ಕೊಂಡುಕೊಂಡಿದ್ದಾರೆ. ಬಹು ಕೋಣೆಗಳು, ವಿಭಿನ್ನ ವಿನ್ಯಾಸಗಳು, ಹಾಗೂ ವಿಶಾಲವಾಗಿರು ಬಂಗಲೆ ಇದಾಗಿದ್ದು, ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿದೆ. ಈ ಮನೆಯಲ್ಲಿ ವಿಜಯ್ ದೇವರಕೊಂಡ ಜೊತೆಗೆ ದೇವರಕೊಂಡ ಗೋವರ್ಧನ್ ರಾವ್(ತಂದೆ), ದೇವರಕೊಂಡ ಮಾಧವಿ(ತಾಯಿ), ಹಾಗೂ ನಟ ಆನಂದ್ ದೇವರಕೊಂಡ (ಸಹೋದರ ) ಜೊತೆಗೆ ಸೈಬೀರಿಯನ್ ಹಸ್ಕಿಯೊಂದಿಗೆ ಸುಂದರ ಜೀವನ ನಡೆಸುತ್ತಿದ್ದಾರೆ. ಈ ಬಂಗಲೆಯ ಒಳಗೆ ಹೊದರೇ ಸ್ವರ್ಗವೆ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ.
ದುಬಾರಿ ಕಲಾಕೃತಿಗಳನ್ನು ಮನೆ ಒಳಗೊಂಡಿದೆ
ಇನ್ನು ಈ ಲಕ್ಷುರಿ ಬಂಗಲೆ ವಿಶೇಷತೆ ಬಗ್ಗೆ ಹೇಳೊದಾದರೆ ಹೈದರಬಾದ್‌ನ ಜುಬಿಲಿ ಹಿಲ್ಸ್, ಬಂಜಾರಾ ಹಿಲ್ಸ್ ಸುತ್ತಮುತ್ತಲಿನ ಐಷಾರಾಮಿ ಮತ್ತು ದುಬಾರಿ ಪ್ರದೇಶಗಳಲ್ಲಿ ವಿಜಯ್ ದೇವರಕೊಂಡರ ಈ ಮನೆ ಇದೆ. ಮನೆ ಆಧುನಿಕ ಮತ್ತು ಕ್ಲಾಸಿಕ್ ಅಲಂಕಾರಗಳನ್ನು ಒಳಗೊಂಡಿದೆ. ಮನೆಯ ಪ್ರಮುಖ ಒಂದು ಗೋಡೆಯಲ್ಲಿ ವಿಜಯ್ ದೇವರಕೊಂಡ ಅಭಿನಯದ 'ಅರ್ಜುನ್ ರೆಡ್ಡಿ' ಚಿತ್ರದ ಪೋಸ್ಟರ್ ವಿಭಿನ್ನವಾಗಿ ರಚಿಸಲಾಗಿದೆ. ಹಾಗೂ ಸಾಕಷ್ಟು ದುಬಾರಿ ಕಲಾಕೃತಿಗಳನ್ನು ಈ ಮನೆ ಒಳಗೊಂಡಿದೆ. ಬಹು ಅಂತಸ್ತಿನ ಈ ಬಂಗಲೆಯ ಸುತ್ತಾ ಮುತ್ತಾ ಮರಗಳು, ದೊಡ್ಡ ಪ್ರವೇಶದ್ವಾರ ಮತ್ತು ದೊಡ್ಡ ತೆರೆದ ಟೆರೇಸ್ ಅನ್ನು ಒಳಗೊಂಡಿದೆ. ಹೀಗೆ ಸಾಕಷ್ಟು ವಿಶೇಷತೆಗಳನ್ನು ವಿಜಯ್ ದೇವರಕೊಂಡ ಮನೆ ಒಳಗೊಂಡಿದೆ.

ವಿಜಯ್ ದೇವರಕೊಂಡ ಮುಂದಿನ ಚಿತ್ರ JGM
ಇನ್ನು ವಿಜಯ್ ದೇವರಕೊಂಡ ಸಿನಿಮಾದ ವಿಚಾರಕ್ಕೆ ಬರೋದಾದರೆ ವಿಜಯ್ ದೇವರಕೊಂಡ, ಅನನ್ಯ ಪಾಂಡೆ ಮತ್ತು ಮೈಕ್ ಟೈಸನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ಲೈಗರ್' ರಿಲೀಸ್‌ಗೆ ಸಜ್ಜಾಗುತ್ತಿದೆ. ಇದು ವಿಜಯ್ ದೇವರಕೊಂಡ ಚೊಚ್ಚಲ ಬಾಲಿವುಡ್ ಚಿತ್ರವಾಗಿದ್ದು, ಹಲವರು ಈ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಇತ್ತೀಚೆಗೆ ಪೂರಿ ಜಗನ್ನಾಥ್ ಅವರ ಮುಂದಿನ ಚಿತ್ರ 'JGM' ಟೈಟಲ್‌ನ ಚಿತ್ರವನ್ನು ವಿಜಯ್ ಅನೌನ್ಸ್ ಮಾಡಿಕೊಂಡಿದ್ದಾರೆ. ಆಕ್ಷನ್ ಎಂಟರ್‌ಟೈನರ್ ಸಿನಿಮಾ ಇದಾಗಿರಲಿದ್ದು, ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಹೀಗೆ ಸಿನಿಮಾಗಳ ಜೊತೆ ಜೊತೆಗೆ ವಿಜಯ್ ದೇವರಕೊಂಡ ನಿಜ ಜೀವನದಲ್ಲು ಸೈ ಎನ್ನಿಸಿಕೊಳ್ಳುತ್ತಿದ್ದಾರೆ.