Don't Miss!
- Sports
ಇದು ವಾಶಿಂಗ್ಟನ್ vs ನ್ಯೂಜಿಲೆಂಡ್ ಪಂದ್ಯ ಎಂಬಂತಿತ್ತು: ಸುಂದರ್ ಆಟಕ್ಕೆ ಹಾರ್ದಿಕ್ ಮೆಚ್ಚುಗೆ
- News
ಫಾರೆನ್ಸಿಕ್ ಕ್ಯಾಂಪಸ್ ಶಂಕುಸ್ಥಾಪನೆಗೆ ಆಗಮಿಸಲಿರುವ ಅಮಿತ್ ಶಾ: ಧಾರವಾಡದಲ್ಲಿ ಭಾರಿ ಬಿಗಿ ಭದ್ರತೆ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಾಲ್ತೇರು ವೀರಯ್ಯ ಫಸ್ಟ್ ಡೇ ಕಲೆಕ್ಷನ್: ವಿಜಯ್, ಅಜಿತ್ ಹಿಂದಿಕ್ಕಿ ಬಾಲಯ್ಯನ ಮುಂದೆ ಸೋತ ಚಿರಂಜೀವಿ!
ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿವೆ ಎಂದು ಘೋಷಣೆಯಾಗಿದ್ದ ತೆಲುಗು ಹಾಗೂ ತಮಿಳಿನ ಸ್ಟಾರ್ ನಟರ ಎಲ್ಲಾ ಚಿತ್ರಗಳೂ ಸಹ ಬಿಡುಗಡೆಗೊಂಡಿವೆ. ಹೌದು, ಈ ಬಾರಿಯ ಸಂಕ್ರಾಂತಿ ಪ್ರಯುಕ್ತ ತಮಿಳಿನ ಸ್ಟಾರ್ ನಟ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳು ಒಂದೇ ದಿನ ಬಿಡುಗಡೆಗೊಂಡಿದ್ದವು. ಬಳಿಕ ತೆಲುಗಿನ ಸ್ಟಾರ್ ನಟ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಹಾಗೂ ಮೆಗಾಸ್ಟಾರ್ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರಗಳು ಚಿತ್ರಮಂದಿರದ ಅಂಗಳಕ್ಕೆ ಬಂದಿದ್ದವು.
ಇನ್ನು ಈ ನಾಲ್ಕು ಚಿತ್ರಗಳ ಪೈಕಿ ಹಿರಿಯ ನಟರಾದ ಬಾಲಕೃಷ್ಣ ಹಾಗೂ ಚಿರಂಜೀವಿ ನಟನೆಯ ಚಿತ್ರಗಳಿಗಿಂತ ವಿಜಯ್ ಹಾಗೂ ಅಜಿತ್ ಕುಮಾರ್ ನಟನೆಯ ಚಿತ್ರಗಳಿಗೆ ಹೆಚ್ಚು ಕ್ರೇಜ್ ಇತ್ತು. ಹೀಗಾಗಿ ತೆಲುಗಿನ ಚಿತ್ರಗಳಿಗಿಂತ ತಮಿಳಿನ ಯಾವುದಾದರೊಂದು ಚಿತ್ರ ಮೊದಲ ದಿನ ಹೆಚ್ಚು ಗಳಿಸಬಹುದು ಎಂಬ ಊಹೆ ಇತ್ತು. ಆದರೆ ಬಿಡುಗಡೆ ಬಳಿಕ ಈ ಊಹೆ ತಪ್ಪಾಗಿದೆ.
ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಚಿತ್ರ ಈ ಬಾರಿ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡ ಉಳಿದ ಚಿತ್ರಗಳನ್ನು ಹಿಂದಿಕ್ಕಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ. ತಮಿಳಿನ ವಿಜಯ್ ಹಾಗೂ ಅಜಿತ್ ನಟನೆಯ ಚಿತ್ರಗಳು ಒಂದೇ ದಿನ ಬಿಡುಗಡೆಯಾದ್ದರಿಂದ ಎರಡೂ ಚಿತ್ರಗಳು ಮೊದಲ ದಿನ ತುಸು ಕಡಿಮೆ ಕಲೆಕ್ಷನ್ ಮಾಡಿದವು ಎನ್ನಬಹುದು. ಹಾಗೂ ತೆಲುಗಿನ ಚಿತ್ರಗಳು ವಿವಿಧ ದಿನಗಳಲ್ಲಿ ಬಿಡುಗಡೆಯಾದ ಕಾರಣ ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ತಮಿಳು ಚಿತ್ರಗಳನ್ನು ಹಿಂದಿಕ್ಕಿರುವುದಂತೂ ನಿಜ. ಹಾಗಿದ್ದರೆ ಈ ನಾಲ್ಕು ಚಿತ್ರಗಳ ಪೈಕಿ ಬಿಡುಗಡೆ ದಿನ ಯಾವ ಚಿತ್ರ ಎಷ್ಟು ಕಲೆಕ್ಷನ್ ಮಾಡಿ ಗೆದ್ದಿತು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ರಿಲೀಸ್ ಡೇ ವಿಶ್ವದಾದ್ಯಂತ ಗಳಿಸಿದ ಮೊತ್ತ
ಈ ನಾಲ್ಕು ಚಿತ್ರಗಳ ಪೈಕಿ ಬಿಡುಗಡೆ ದಿನ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ವಿಶ್ವದಾದ್ಯಂತ 54 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಈ ಬಾರಿಯ ಸಂಕ್ರಾಂತಿ ಚಿತ್ರಗಳಲ್ಲಿ ರಿಲೀಸ್ ಡೇ ಅತಿಹೆಚ್ಚು ಕಲೆಕ್ಷನ್ ಮಾಡಿ ಗೆದ್ದ ಚಿತ್ರ ಎನಿಸಿಕೊಂಡಿದೆ. ಇನ್ನುಳಿದಂತೆ ಕೊನೆಯದಾಗಿ ಬಿಡುಗಡೆಗೊಂಡ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಬಿಡುಗಡೆ ದಿನ ವಿಶ್ವದಾದ್ಯಂತ 49 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇನ್ನುಳಿದಂತೆ ವಿಜಯ್ ನಟನೆಯ ವಾರಿಸು ಚಿತ್ರ ಬಿಡುಗಡೆಯ ದಿನ ವಿಶ್ವದಾದ್ಯಂತ 46 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಹಾಗೂ ಅಜಿತ್ ನಟನೆಯ ತುನಿವು ಚಿತ್ರ 43 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದವು.

ಕರ್ನಾಟಕದಲ್ಲಿ ಮೊದಲ ದಿನ ಹೆಚ್ಚು ಗಳಿಸಿದ ಚಿತ್ರ?
ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡ ಈ ನಾಲ್ಕು ಚಿತ್ರಗಳ ಪೈಕಿ ಅವುಗಳ ಬಿಡುಗಡೆ ದಿನ ವಿಜಯ್ ನಟನೆಯ ವಾರಿಸು ಚಿತ್ರ 5.65 ಕೋಟಿ ರೂಪಾಯಿ ಗ್ರಾಸ್ ಗಳಿಸುವ ಮೂಲಕ ಮೊದಲ ದಿನ ಅತಿಹೆಚ್ಚು ಗಳಿಸಿದ ಚಿತ್ರ ಎನಿಸಿಕೊಂಡಿದೆ. ಇನ್ನುಳಿದಂತೆ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರ ಬಿಡುಗಡೆ ದಿನ 4.77 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಎರಡನೇ ಸ್ಥಾನದಲ್ಲಿದೆ. ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಕರ್ನಾಟಕದಲ್ಲಿ ಮೊದಲ ದಿನ 2.87 ಕೋಟಿ ಗಳಿಸಿದರೆ, ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ 2.34 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಕರ್ನಾಟಕ ಮೊದಲ ದಿನದ ಕಲೆಕ್ಷನ್ ರೇಸ್‌ನಲ್ಲಿ ವಿಜಯ್ ನಟನೆಯ ವಾರಿಸು ಗೆದ್ದಿದೆ.

ನೂರು ಕೋಟಿ ಸೇರಿದ ವಾರಿಸು
ಇನ್ನು ವಾರಿಸು ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಗಳಿಸಿದೆ ಎಂಬ ಸುದ್ದಿಯನ್ನು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಹಂಚಿಕೊಂಡಿದ್ದಾರೆ. ಈ ಮೂಲಕ ವಾರಿಸು ತುನಿವು ಚಿತ್ರದ ವಿರುದ್ಧ ವಿಶ್ವ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಗೆದ್ದಿದೆ. ಅತ್ತ ತುನಿವು ಚಿತ್ರ ತಮಿಳುನಾಡು ಬಾಕ್ಸ್ ಆಫೀಸ್‌ನಲ್ಲಿ ವಾರಿಸುಗಿಂತ ಉತ್ತಮ ಕಲೆಕ್ಷನ್ ಮಾಡಿದೆ.