Don't Miss!
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- News
ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿರಂಜೀವಿ v/s ಬಾಲಯ್ಯ: ಸಿನಿಮಾ ಬಿಡುಗಡೆಗೆ ಮುನ್ನ ಮೇಲುಗೈ ಯಾರದ್ದು?
ನಟ ಚಿರಂಜೀವಿ ಹಾಗೂ ಬಾಲಕೃಷ್ಣ ನಡುವೆ ಮತ್ತೊಂದು ಸಂಕ್ರಾಂತಿ ಪೈಪೋಟಿಗೆ ದಿನಗಳಷ್ಟೆ ಬಾಕಿ ಇದೆ. ತೆಲುಗು ಚಿತ್ರರಂಗದ ಇಬ್ಬರು ಸೂಪರ್ ಸ್ಟಾರ್‌ಗಳು ಬಹಳ ವರ್ಷಗಳ ಬಳಿಕ ಸಂಕ್ರಾಂತಿ ದಿನದಂದು ಎದುರು ಬದುರಾಗುತ್ತಿದ್ದಾರೆ.
ಇದೇ ತಿಂಗಳ 12ನೇ ತಾರೀಖಿನಂದು ತೆಲುಗಿನ ಮೆಗಾಸ್ಟಾರ್ ಚಿರಂಜೀವಿಯ 'ವಾಲ್ತೇರು ವೀರಯ್ಯ' ಹಾಗೂ ನಂದಮೂರಿ ಬಾಲಕೃಷ್ಣ ನಟನೆಯ 'ವೀರ ಸಿಂಹ ರೆಡ್ಡಿ' ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಇಬ್ಬರ ನಡುವೆ ದಶಕಗಳಿಂದಲೂ ತುರುಸಿನ ಸ್ಪರ್ಧೆ ಇದ್ದು ಈಗಲೂ ಆ ಸ್ಪರ್ಧೆ ಹಾಗೆಯೇ ಮುಂದುವರೆದಿದೆ.
ಸಿನಿಮಾ ಬಿಡುಗಡೆಗೆ ಇನ್ನೂ ತುಸು ದಿನ ಇರುವಂತೆಯೇ ಎರಡೂ ಸಿನಿಮಾಗಳು ಪ್ರೀ ರಿಲೀಸ್ ಬ್ಯುಸಿನೆಸ್ ಮೇಲೆ ಕಣ್ಣಿಟ್ಟಿದ್ದು, ಸಿನಿಮಾ ಬಿಡುಗಡೆ ಆಗುವ ಮುನ್ನ ಯಾರ ಸಿನಿಮಾ ಹೆಚ್ಚು ಗಳಿಸಿದೆ, ಯಾರ ಸಿನಿಮಾ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ ಎಂಬ ಬಗ್ಗೆ ಇಬ್ಬರು ಸ್ಟಾರ್ ನಟರ ಅಭಿಮಾನಿಗಳಲ್ಲಿ ಜೋರು ಚರ್ಚೆ ನಡೆದಿದೆ. ಆ ಕುರಿತಂತೆ ಕೆಲವು ಅಂಕಿ-ಅಂಶಗಳು ಇಲ್ಲಿವೆ.

ಯಾರ ಸಿನಿಮಾ ಮುಂಚೂಣಿಯಲ್ಲಿದೆ?
ಪ್ರೀ ರಿಲೀಸ್ ಬ್ಯುಸಿನೆಸ್‌ನಲ್ಲಿ ಬಾಲಕೃಷ್ಣ ಅವರನ್ನು ಚಿರಂಜೀವಿ ಹಿಂದಿಕ್ಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಸಿನಿಮಾ 'ವೀರ ಸಿಂಹ ರೆಡ್ಡಿ'ಗೆ ಹೋಲಿಸಿದರೆ ಹೆಚ್ಚು ಬ್ಯುಸಿನೆಸ್ ಮಾಡಿದೆ. 'ವಾಲ್ತೇರು ವೀರಯ್ಯ' ಸಿನಿಮಾವು ಬಿಡುಗಡೆಗೆ ಮುನ್ನವೇ 88 ಕೋಟಿ ವ್ಯವಹಾರ ಮಾಡಿದೆ ಎಂದು ಟಾಲಿವುಡ್‌ನ ಪರಿಣಿತರು ಲೆಕ್ಕ ನೀಡಿದ್ದಾರೆ.

'ವಾಲ್ತೇರು ವೀರಯ್ಯ' ಸಿನಿಮಾದ ಬ್ಯುಸಿನೆಸ್ ಎಷ್ಟು?
'ವಾಲ್ತೇರು ವೀರಯ್ಯ' ಸಿನಿಮಾದ ಆಂಧ್ರ ರಾಜ್ಯದ ಬಿಡುಗಡೆ ಹಕ್ಕು 40 ಕೋಟಿಗೆ ಮಾರಾಟವಾಗಿದೆ. ನಿಜಾಮ್ ಪ್ರದೇಶಕ್ಕೆ 18 ಕೋಟಿಗೆ ಮಾರಾಟವಾಗಿದೆ. ಸೀಡೆಡ್ ಜಿಲ್ಲೆಗಳ ಪ್ರದೇಶಕ್ಕೆ 14.50 ಕೋಟಿಗೆ ಮಾರಾಟವಾಗಿದೆ. ವಿದೇಶಗಳಿಗೆ 9 ಕೋಟಿಗೆ ಮಾರಾಟವಾಗಿದೆ. ಭಾರತದ ಇತರ ರಾಜ್ಯಗಳಿಗೆ ಹಾಗೂ ಸಿನಿಮಾದ ಆಡಿಯೋ ಹಕ್ಕುಗಳು ಸೇರಿ 6.50 ಕೋಟಿ ರುಪಾಯಿಗೆ ಮಾರಾಟವಾಗಿದೆ. ಚಿರಂಜೀವಿಯ ಇತ್ತೀಚಿನ ಸಿನಿಮಾಗಳಲ್ಲಿ ಒಂದಾದ 'ಆಚಾರ್ಯ' ದೊಡ್ಡ ಫ್ಲಾಪ್ ಆಗಿದ್ದರೂ ಸಹ ಈ ಸಿನಿಮಾಕ್ಕೆ ಭಾರಿ ಬೇಡಿಕೆಯೇ ಕುದುರಿದೆ. ಸಿನಿಮಾದ ಒಟಿಟಿ, ಟಿವಿ ಹಕ್ಕುಗಳು ಸೇರಿದರೆ 100 ಕೋಟಿಗೂ ಹೆಚ್ಚು ಬ್ಯುಸಿನೆಸ್ ಆಗಲಿದೆ.

ಬಾಲಯ್ಯ ಸಿನಿಮಾದ ಬ್ಯುಸಿನೆಸ್ ಎಷ್ಟು?
ಇನ್ನು ಬಾಲಕೃಷ್ಣ ನಟನೆಯ 'ವೀರ ಸಿಂಹ ರೆಡ್ಡಿ' ಸಿನಿಮಾವು ಪ್ರೀ ರಿಲೀಸ್ ಬ್ಯುಸಿನೆಸ್‌ನಲ್ಲಿ ಹಿಂದೆ ಉಳಿದಿಲ್ಲ. ಈ ಸಿನಿಮಾದ ಈವರೆಗಿನ ಪ್ರೀ ರಿಲೀಸ್ ಬ್ಯುಸಿನೆಸ್ 73 ಕೋಟಿಗಳದ್ದಾಗಿದೆ ಎನ್ನಲಾಗುತ್ತಿದೆ. ಆಂಧ್ರ ರಾಜ್ಯದ ಹಕ್ಕು 35 ಕೋಟಿಗೆ ಮಾರಾಟವಾಗಿದೆ. ನಿಜಾಮ್ ವಲಯದಲ್ಲಿ 15 ಕೋಟಿಗೆ ಮಾರಾಟವಾಗಿದೆ. ಸೀಡೆಡ್ ಜಿಲ್ಲಾ ಪ್ರದೇಶಗಳ ಬಿಡುಗಡೆ ಹಕ್ಕು 12.50 ಕೋಟಿಗೆ ಮಾರಾಟವಾಗಿದೆ. ವಿದೇಶಿ ಬಿಡುಗಡೆ ಹಕ್ಕು 6.50 ಕೋಟಿಗೆ ಮಾರಾಟವಾಗಿದೆ. ದೇಶದ ಇತರೆ ರಾಜ್ಯಗಳಲ್ಲಿ ಬಿಡುಗಡೆ ಹಾಗೂ ಆಡಿಯೋ ಹಕ್ಕು ಮಾರಾಟದಿಂದ 5 ಕೋಟಿ ಹಣ ಬಂದಿದೆ. ಅಲ್ಲಿಗೆ ಚಿರಂಜೀವಿ ಸಿನಿಮಾ ಸದ್ಯಕ್ಕೆ ಮುಂದಿದೆ. ಸಿನಿಮಾ ಬಿಡುಗಡೆ ಬಳಿಕ ಯಾರ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡುತ್ತದೆಯೋ ಕಾದು ನೋಡಬೇಕಿದೆ.

'ವಾಲ್ತೇರು ವೀರಯ್ಯ' v/s 'ವೀರ ಸಿಂಹ ರೆಡ್ಡಿ'
'ವಾಲ್ತೇರು ವೀರಯ್ಯ' ಸಿನಿಮಾವನ್ನು ಕೆಎಸ್ ರವೀಂದ್ರ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಚಿರಂಜೀವಿ ಜೊತೆಗೆ ರವಿತೇಜ ಸಹ ನಟಿಸಿದ್ದಾರೆ. ಇನ್ನು 'ವೀರ ಸಿಂಹ ರೆಡ್ಡಿ' ಸಿನಿಮಾವನ್ನು ಗೋಪಿಚಂದ್ ಮೇಲಿನೇನಿ ನಿರ್ದೇಶನ ಮಾಡಿದ್ದಾರೆ. ಎರಡೂ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿರುವುದು ವಿಶೇಷ. ಎರಡೂ ಸಿನಿಮಾಗಳನ್ನು ನಿರ್ಮಾಣ ಮಾಡಿರುವುದು ಮೈತ್ರಿ ಮೂವಿ ಮೇಕರ್ಸ್‌ನವರೇ ಎಂಬುದು ಮತ್ತೊಂದು ವಿಶೇಷ. ವಾಲ್ತೇರು ವೀರಯ್ಯ ಸಿನಿಮಾದಲ್ಲಿ ದೇವಿಶ್ರೀಪ್ರಸಾದ್ ಸಂಗೀತ ನೀಡಿದ್ದರೆ, 'ವೀರ ಸಿಂಹ ರೆಡ್ಡಿ' ಸಿನಿಮಾಕ್ಕೆ ಎಸ್ ತಮನ್ ಸಂಗೀತ ನೀಡಿದ್ದಾರೆ.