For Quick Alerts
  ALLOW NOTIFICATIONS  
  For Daily Alerts

  ಆರ್‌ಆರ್‌ಆರ್‌ ಸಿನಿಮಾದಲ್ಲಿ ಜೂ.ಎನ್‌ಟಿಆರ್ ಗೆ ನಾಯಕಿ ಇವರಾ?

  |

  ಬಹುನಿರೀಕ್ಷಿತ ಸಿನಿಮಾ ಆರ್‌ಆರ್‌ಆರ್‌ ಇತ್ತೀಚೆಗೆ ವಿವಾದದಲ್ಲಿ ಸಿಲುಕಿದೆ. ಸಿನಿಮಾದಲ್ಲಿ ಜೂ.ಎನ್‌ಟಿಆರ್ ನಿರ್ವಹಿಸಿರುವ ಕೋಮರಂ ಭೀಮ್ ಪಾತ್ರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ನಿರ್ದೇಶಕ ರಾಜಮೌಳಿಗೆ ಬೆದರಿಕೆ ಸಹ ಹಾಕಲಾಗಿದೆ.

  ವಿವಾದದ ಸುದ್ದಿ ಬಿಟ್ಟರೆ ಹೊಸದೊಂದು ಸುದ್ದಿ ಆರ್‌ಆರ್‌ಆರ್‌ ಚಿತ್ರತಂಡದಿಂದ ಹೊರಬಿದ್ದಂತಿದೆ. ಬಹುಕುತೂಹಲ ಹುಟ್ಟಿಸಿರುವ ಕೋಮರಂ ಭೀಮ್ ಪಾತ್ರಧಾರಿ ಜೂ.ಎನ್‌ಟಿಆರ್ ಗೆ ನಾಯಕಿ ಯಾರೆಂಬುದರ ಬಗ್ಗೆ ಸುದ್ದಿ ಹರಿದಾಡುತ್ತಿದೆ.

  RRR ಸಿನಿಮಾ ವಿವಾದ: ರಾಜಮೌಳಿಗೆ ಬೆದರಿಕೆ ಹಾಕಿದ ಬಿಜೆಪಿ ಸಂಸದRRR ಸಿನಿಮಾ ವಿವಾದ: ರಾಜಮೌಳಿಗೆ ಬೆದರಿಕೆ ಹಾಕಿದ ಬಿಜೆಪಿ ಸಂಸದ

  ಜೂ.ಎನ್‌ಟಿಆರ್ ಎದುರು ನಾಯಕಿ ಯಾರು ಎಂಬ ಬಗ್ಗೆ ಮೊದಲಿನಿಂದಲೂ ಕುತೂಹಲ ಇತ್ತು, ಬ್ರಿಟನ್ ಸುಂದರಿ ಒಲಿವಿಯಾ ಮೋರಿಸ್ ಜೂ.ಎನ್‌ಟಿಆರ್ ಗೆ ನಾಯಕಿ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಹೊಸ ಸುದ್ದಿಯೆಂದರೆ ಜೂ.ಎನ್‌ಟಿಆರ್ ಎದುರು ನಾಯಕಿಯಾಗಿ ತಮಿಳಿನ ನಟಿಯೊಬ್ಬರು ಆಯ್ಕೆ ಆಗಲಿದ್ದಾರಂತೆ.

  ತಮಿಳಿನ ನಟಿ ಐಶ್ವರ್ಯಾ ರಾಜೇಶ್ ನಟನೆ

  ತಮಿಳಿನ ನಟಿ ಐಶ್ವರ್ಯಾ ರಾಜೇಶ್ ನಟನೆ

  ಹೌದು, ಜೂ.ಎನ್‌ಟಿಆರ್ ಗೆ ಎದುರಾಗಿ ತಮಿಳಿನ ನಟಿ ಐಶ್ವರ್ಯಾ ರಾಜೇಶ್ ನಟಿಸಲಿದ್ದಾರೆ ಎನ್ನಲಾಗಿದೆ. ಉತ್ತಮ ನಟಿಯಾಗಿರುವ ಐಶ್ವರ್ಯಾ ರಾಜೇಶ್, ಬುಡಕಟ್ಟು ಹೆಣ್ಣುಮಗಳ ಪಾತ್ರದಲ್ಲಿ ನಟಿಸಲಿದ್ದಾರಂತೆ.

  ಆಕ್ಷನ್ ದೃಶ್ಯಗಳಲ್ಲಿ ಸಹ ನಟಿಸಲಿದ್ದಾರೆ ಐಶ್ವರ್ಯಾ

  ಆಕ್ಷನ್ ದೃಶ್ಯಗಳಲ್ಲಿ ಸಹ ನಟಿಸಲಿದ್ದಾರೆ ಐಶ್ವರ್ಯಾ

  ಐಶ್ವರ್ಯಾ ರಾಜೇಶ್ ಪಾತ್ರ ಬಹಳ ಗಟ್ಟಿ ಪಾತ್ರವಾಗಿದ್ದು, ಕೆಲವು ಆಕ್ಷನ್‌ ದೃಶ್ಯಗಳಲ್ಲಿ ಸಹ ಆಕೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಕೋಮರಂ ಭೀಮ್‌ನ ಹೋರಾಟ ಸಹವರ್ತಿಯಾಗಿ ಐಶ್ವರ್ಯಾ ರಾಜೇಶ್ ನಟಿಸುವ ಸಾಧ್ಯತೆ ಇದೆ.

  ಮುಸ್ಲಿಂ ಅಥವಾ ಹಿಂದು, ಕೋಮರಂ ಭೀಮ್ ಯಾರು? ಧರ್ಮವನ್ನೇ ಬದಲಾಯಿಸಿದರೇ ರಾಜಮೌಳಿ?ಮುಸ್ಲಿಂ ಅಥವಾ ಹಿಂದು, ಕೋಮರಂ ಭೀಮ್ ಯಾರು? ಧರ್ಮವನ್ನೇ ಬದಲಾಯಿಸಿದರೇ ರಾಜಮೌಳಿ?

  ರಾಮ್ ಚರಣ್ ಗೆ ಆಲಿಯಾ ಭಟ್ ನಾಯಕಿ

  ರಾಮ್ ಚರಣ್ ಗೆ ಆಲಿಯಾ ಭಟ್ ನಾಯಕಿ

  ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ನಟಿಸುತ್ತಿರುವ ರಾಮ್ ಚರಣ್ ತೇಜಾ ಗೆ ಬಾಲಿವುಡ್ ನಟಿ ಆಲಿಯಾ ಭಟ್ ನಾಯಕಿಯಾಗಿದ್ದಾರೆ. ಆಲಿಯಾ ಭಟ್, ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಲಿಯಾ ಭಟ್ ಇದೇ ವಾರದಿಂದ ಆರ್‌ಆರ್‌ಆರ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

  ವಿವಾದಕ್ಕೆ ಸಿಲುಕಿಕೊಂಡ ಆರ್‌ಆರ್‌ಆರ್ ಸಿನಿಮಾ

  ವಿವಾದಕ್ಕೆ ಸಿಲುಕಿಕೊಂಡ ಆರ್‌ಆರ್‌ಆರ್ ಸಿನಿಮಾ

  ಆರ್‌ಆರ್‌ಆರ್‌ ಸಿನಿಮಾದ ವಿವಾದಕ್ಕೆ ಸಿಲುಕಿಕೊಂಡಿದೆ. ಕೋಮರಂ ಭೀಮ್ ಪಾತ್ರಧಾರಿ ಜೂ.ಎನ್‌ಟಿಆರ್ ಅನ್ನು ಮುಸ್ಲಿಂ ಆಗಿ ತೋರಿಸಿರುವ ಟೀಸರ್ ಒಂದು ಈ ವಿವಾದಕ್ಕೆ ಕಾರಣವಾಗಿದೆ. ಕೋಮರಂ ಭೀಮ್ ಮುಸ್ಲಿಂ ಆಗಿರಲಿಲ್ಲ, ಆತನ ಧರ್ಮವನ್ನು ಬದಲಿಸಿ ಇತಿಹಾಸ ತಿರುಚುವ ಪ್ರಯತ್ನ ಮಾಡಲಾಗಿದೆ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ನಾಯಕರೊಬ್ಬರು, ಚಿತ್ರಮಂದಿರಕ್ಕೆ ಬೆಂಕಿ ಇಡುವ ಬೆದರಿಕೆಯನ್ನೂ ಹಾಕಿದ್ದಾರೆ.

  ಜೂ.ಎನ್‌ಟಿಆರ್ ಪಾತ್ರದ ಬಗ್ಗೆ ನಿಜ ಕೋಮರಂ ಭೀಮ್ ಮೊಮ್ಮಗನ ಆಕ್ಷೇಪಜೂ.ಎನ್‌ಟಿಆರ್ ಪಾತ್ರದ ಬಗ್ಗೆ ನಿಜ ಕೋಮರಂ ಭೀಮ್ ಮೊಮ್ಮಗನ ಆಕ್ಷೇಪ

  English summary
  Who will be heroine for Jr NTR in RRR movie. Some news source saying Tamil actress Aishwarya Rajesh is acting alongside Jr NTR.
  Wednesday, November 4, 2020, 13:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X