For Quick Alerts
  ALLOW NOTIFICATIONS  
  For Daily Alerts

  ರಾಣಾ ದಗ್ಗುಬಾಟಿ ಭಾವಿ ಪತ್ನಿ ಮಿಹಿಕಾ ಬಜಾಜ್ ಯಾರು? ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ

  |

  ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟ ರಾಣಾ ದಗ್ಗುಬಾಟಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಲಾಕ್ ಡೌನ್ ನಲ್ಲಿ ಭಾವಿ ಪತ್ನಿಯನ್ನು ಪರಿಚಯಿಸಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಬಾಹುಬಲಿ ಸಿನಿಮಾ ನಂತರ ರಾಣಾ ಅಭಿಮಾನಿ ಬಳಗ ಹೆಚ್ಚಾಗಿದ್ದು, ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟನಾಗಿಯೂ ಗುರುತಿಸಿಕೊಂಡಿದ್ದಾರೆ.

  ಮತ್ತೊಂದು ಖುಷಿಯನ್ನು ಶೇರ್ ಮಾಡಿದ 'ಲವ್ ಮಾಕ್ ಟೇಲ್' ಚಿತ್ರತಂಡ..? | Milana Nagaraj | Darling Krishna

  ಸದ್ಯ ದಿಢೀರನೆ ಮದುವೆ ಬಗ್ಗೆ ಬಹಿರಂಗಪಡಿಸಿ, ಭಾವಿ ಪತ್ನಿ ಮಿಹಿಕಾ ಬಜಾಜ್ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಕೊನೆಗೂ ಅವಳು ಓಕೆ ಎಂದಳು' ಎಂದು ರಾಣಾ ದಗ್ಗುಬಾಟಿ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಂದ್ಹಾಗೆ ಬಲ್ಲಾಳ ದೇವ ಮದುವೆಯಾಗುತ್ತಿರುವ ಮಿಹಿಕಾ ಬಜಾಜ್ ಯಾರು? ಚಿತ್ರರಂಗದ ಹಿನ್ನಲೆ ಇಲ್ಲದ ಮಿಹಿಕಾ ಬಜಾಜ್ ಏನು ಮಾಡುತ್ತಿದ್ದಾರೆ? ಮುಂದೆ ಓದಿ..

  ಮದುವೆಯಾಗಲಿದ್ದಾರೆ ರಾಣಾ ದಗ್ಗುಬಾಟಿ: ಯುವತಿ ಯಾರು?ಮದುವೆಯಾಗಲಿದ್ದಾರೆ ರಾಣಾ ದಗ್ಗುಬಾಟಿ: ಯುವತಿ ಯಾರು?

  ಭಾವಿ ಪತ್ನಿ ಪರಿಚಯಿಸಿದ ರಾಣಾ ದಗ್ಗುಬಾಟಿ

  ಭಾವಿ ಪತ್ನಿ ಪರಿಚಯಿಸಿದ ರಾಣಾ ದಗ್ಗುಬಾಟಿ

  ರಾಣಾ ದಗ್ಗುಬಾಟಿ ತನ್ನ ಪ್ರೇಯಸಿ ಮಿಹಿಕಾ ಬಜಾಜ್ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಕ್ಲಿಕ್ಕಿಸಿಕೊಂಡಿರುವ ಸುಂದರವಾದ ಸೆಲ್ಫಿಯನ್ನು ರಾಣಾ ದಗ್ಗುಬಾಟಿ ಪೋಸ್ಟ್ ಮಾಡಿದ್ದಾರೆ. ರಾಣಾ ಎಂಗೇಜ್ ಆದ ವಿಷಯವನ್ನು ಬಹಿರಂಗ ಪಡಿಸುತ್ತಿದ್ದಂತೆ ಭಾರತೀಯ ಚಿತ್ರರಂಗದ ಸ್ಟಾರ್ಸ್ ಶುಭಾಶಯ ತಿಳಿಸುತ್ತಿದ್ದಾರೆ.

  ಮಿಹಿಕಾ ಬಜಾಜ್ ಯಾರು?

  ಮಿಹಿಕಾ ಬಜಾಜ್ ಯಾರು?

  ಮಿಹಿಕಾ ಬಜಾಜ್ ವೃತ್ತಿಯಲ್ಲಿ ಉದ್ಯಮಿ. ಲಂಡನ್ ನ ಚೆಲ್ಸಿಯಾ ಆರ್ಟ್ ಅಂಡ್ ಡಿಸೈನ್ ವಿಶ್ವವಿದ್ಯಾನಿಲಯದಲ್ಲಿ ಈವೆಂಟ್ ಮತ್ತು ವೆಡ್ಡಿಂಗ್ ಪ್ಲಾನ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಮಿಹಿಕಾ ಮುಂಬೈನ ಆರ್ಕಿಟ್ರೆಕ್ಟರ್ ಸ್ಕೂಲ್ ನಲ್ಲಿ ಇಂಟಿರಿಯರ್ ಡಿಸೈನ್ ನಲ್ಲಿ ಡಿಪ್ಲೊಮ ಕೋರ್ಸ್ ಸಹ ಮಾಡಿದ್ದಾರೆ.

  ಓ ಮೈ ಗಾಡ್ 'ಬಲ್ಲಾಳದೇವ' ರಾಣಾ ದಗ್ಗುಬಾಟಿಗೆ ಏನಾಯಿತು?

  2017ರಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ ಕಂಪೆನಿ ಪ್ರಾರಂಭ

  2017ರಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ ಕಂಪೆನಿ ಪ್ರಾರಂಭ

  ಇಂಟಿರಿಯರ್ ಡೆಸೈನ್ ಆಗಿ ಕೆಲಸ ಮಾಡುತ್ತಿದ್ದ ಮಿಹಿಕಾ ನಂತರ ತನ್ನದೆ ಆದ ಸ್ವಂತ ಕಂಪನಿಯನ್ನು ಪ್ರಾರಂಭಿಸಿದ್ದಾರೆ. 2017ರಲ್ಲಿ ಡ್ಯೂ ಡ್ರಾಪ್ ಡಿಸೈನ್ ಎನ್ನುವ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಸ್ಥಾಪಿಸಿದ್ದಾರೆ. ಭಾರತದ ದೊಡ್ಡ ದೊಡ್ಡ ಮದುವೆ ಸಮಾರಂಭದ ಈವೆಂಟ್ ಗಳನ್ನು ಈ ಕಂಪನಿ ಮಾಡುತ್ತಿದೆ. ಚಿತ್ರರಂಗದ ಹಿನ್ನಲೆ ಇಲ್ಲದಿದ್ದರು, ಭಾರತೀಯ ಚಿತ್ರರಂಗದ ಖ್ಯಾತ ಸ್ಟಾರ್ಸ್ ಗಳ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ.

  ಕಿಡ್ನಿ ವೈಫಲ್ಯ ರೂಮರ್ಸ್ ಬಗ್ಗೆ ಮೌನ ಮುರಿದ 'ಬಾಹುಬಲಿ' ನಟ ರಾಣಾ ದಗ್ಗುಬಾಟಿಕಿಡ್ನಿ ವೈಫಲ್ಯ ರೂಮರ್ಸ್ ಬಗ್ಗೆ ಮೌನ ಮುರಿದ 'ಬಾಹುಬಲಿ' ನಟ ರಾಣಾ ದಗ್ಗುಬಾಟಿ

  ಖ್ಯಾತ ಜ್ಯುವೆಲ್ಲರಿ ಉದ್ಯಮಿಯ ಮಗಳು

  ಖ್ಯಾತ ಜ್ಯುವೆಲ್ಲರಿ ಉದ್ಯಮಿಯ ಮಗಳು

  ಮಿಹಿಕಾ ಬಜಾಜ್ ಖ್ಯಾತ ಜ್ಯುವೆಲ್ಲರಿ ಡೆಸೈನರ್ ಮತ್ತು ಉದ್ಯಮಿ ಬಂಟಿ ಬಜಾಜ್ ಮಗಳು. ಅವರು ಪ್ರಸಿದ್ಧ ಆಭರಣ ಮಳಿಗೆ ಕ್ರಾಸಲಾ ಮಾಲಿಕರಾಗಿದ್ದಾರೆ. ಸಹೋದರ ಸಮರ್ತ್, ಕ್ರಾಸಲಾ ಮಳಿಗೆಯನ್ನು ನೋಡಿಕೊಳ್ಳುತ್ತಿದ್ದಾರೆ. ಬಂಟಿ ಮೊದಲು ಈವೆಂಟ್ ಮ್ಯಾನೇಜ್ಮೆಂಟ್ ಪ್ರಾರಂಭಿಸಿ ದೊಡ್ಡ ಮದುವೆ ಸಮಾರಂಭಗಳ ಈವೆಂಟ್ ನಡೆಸಿಕೊಡುತ್ತಿದ್ದರು. ಆ ನಂತರ ಜ್ಯುವೆಲ್ಲರಿ ಡಿಸೈನರ್ ಆಗಿ ಖ್ಯಾತಿಗಳಿಸಿದ್ದಾರೆ.

  ರಾಣಾ ದಗ್ಗುಬಾಟಿಗೆ ಸ್ಟಾರ್ ಗಳ ವಿಶ್

  ರಾಣಾ ದಗ್ಗುಬಾಟಿಗೆ ಸ್ಟಾರ್ ಗಳ ವಿಶ್

  ರಾಣಾ ದಗ್ಗುಬಾಟಿ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸುತ್ತಿದ್ದಂತೆ ಸಿನಿಮಾ ಸ್ಟಾರ್ಸ್ ಶುಭಾಶಯಗಳ ಸುರಿಮಳೆಯೆ ಹರಿದುಬರುತ್ತಿದೆ. ಸಮಂತಾ, ಚಿರಂಜೀವಿ, ಶ್ರುತಿ ಹಾಸನ್, ದುಲ್ಕರ್ ಸಲ್ಮಾನ್, ಅನಿಲ್ ಕಪೂರ್, ಹನ್ಸಿಕಾ ಸೇರಿದಂತೆ ಅನೇಕರು ಶುಭ ಹಾರೈಸುತ್ತಿದ್ದಾರೆ.

  English summary
  Actor Rana Daggubati introduced his fiancee Miheeka Bajaj. Who is Miheeka Bajaj?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X