»   » ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಮೀರ್ ಖಾನ್ ಪತ್ರ

ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಮೀರ್ ಖಾನ್ ಪತ್ರ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts
  Aamir Khan writes letter to KFCC
  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಅವರಿಗೆ ಬಾಲಿವುಡ್ ನಟ ಅಮೀರ್ ಖಾನ್ ಪತ್ರವೊಂದನ್ನು ಬರೆದಿದ್ದಾರೆ. ಇದೇ ಮೇ 6, ಭಾನುವಾರ ಬೆಳಿಗ್ಗೆ 11 ಗಂಟೆಗೆ ಆರಂಭವಾಗುತ್ತಿರುವ ತಮ್ಮ ನಿರ್ಮಾಣದ 'ಸತ್ಯಮೇವ ಜಯತೆ' ಹಿಂದಿ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡಿರುವ 13 ಎಸಿಸೋಡುಗಳನ್ನು ಸುವರ್ಣ ಟಿವಿಯಲ್ಲಿ ಪ್ರದರ್ಶಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

  ಸದ್ಯಕ್ಕೆ, ಚೆಂಡು ಕೆಎಫ್‌ಸಿಸಿ ಅಂಗಳದಲ್ಲಿದೆ. ಖ್ಯಾತ ನಟ, ನಿರ್ಮಾಪಕ ಅಮೀರ್ ಖಾನ್ ಅವರ ಮನವಿಗೆ ಒಲಿದು, ಭಾರತದ ಸಾಮಾಜಿಕ ಸಮಸ್ಯೆಗಳ ಮೇಲೆ ಕ್ಷಕಿರಣ ಬೀರುವ ಈ ಕಾರ್ಯಕ್ರಮದ ಕನ್ನಡ ಅವತರಣಿಗೆಗೆ ಡಬ್ಬಿಂಗ್ ವಿರೋಧಿಸುತ್ತಿರುವ ಕೆ.ವಿ. ಚಂದ್ರಶೇಖರ್ (ಕೆಎಫ್‌ಸಿಸಿ) ಅವಕಾಶ ಮಾಡಿಕೊಡುತ್ತಾರೆಯೆ?

  ಡಬ್ಬಿಂಗ್ ಬೇಕೆನ್ನುವವರು ಮತ್ತು ಡಬ್ಬಿಂಗ್ ವಿರೋಧಿಸುವವರು ಈಗಾಗಲೆ ತೋಳೇರಿಸಿ ನಿಂತಿದ್ದಾರೆ. ಡಬ್ಬಿಂಗ್‌ಗೆ ಅವಕಾಶ ಮಾಡಿಕೊಟ್ಟರೆ ಕನ್ನಡ ಚಿತ್ರರಂಗ ಮುಳುಗಿಹೋಗುತ್ತದೆ, ಕನ್ನಡ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂಬ ವಾದ ಒಂದೆಡೆಯಾದರೆ, ಡಬ್ಬಿಂಗ್ ಮಾರಕವಲ್ಲ ಪೂರಕ. ಡಬ್ಬಿಂಗ್‌ಗೆ ಪರವಾನಗಿ ನೀಡಿದರೆ, ಹಿಂದಿ ಅಥವಾ ಇನ್ನಾವುದೇ ಭಾಷೆಯಲ್ಲಿ ಬರುವ ಅತ್ಯುತ್ತಮ ಕಾರ್ಯಕ್ರಮಗಳನ್ನು ಅನ್ಯ ಭಾಷೆ ಅರಿಯದ ಜನರಿಗೆ ತಿಳಿಸಿದಂತಾಗುತ್ತದೆ ಎಂಬ ಪ್ರತಿವಾದ ಹೂಡಲಾಗಿದೆ. ಸತ್ಯಮೇವ ಜಯತೆ ಕನ್ನಡ ಡಬ್ಬಿಂಗ್‌ಗೆ ಅವಕಾಶ ಮಾಡಿಕೊಡಬೇಕಾ?

  ಡಬ್ಬಿಂಗ್ ಪರವಿರೋಧದ ಯುದ್ಧದಲ್ಲಿ ಯಾರು ಜಯಶಾಲಿಯಾಗುತ್ತಾರೆ ಎಂಬುದನ್ನು ಆಮೇಲೆ ನೋಡೋಣ. ಅದಕ್ಕೂ ಮೊದಲು ಅಮೀರ್ ಖಾನ್ ಬರೆದ ಪತ್ರವನ್ನು ಓದಿಬಿಡಿ. ಹಾಗೆಯೆ, ಸತ್ಯಮೇವ ಜಯತೆ ಕಾರ್ಯಕ್ರಮವನ್ನು ಕನ್ನಡದಲ್ಲಿ ನೋಡಲು ಇಷ್ಟಪಡುತ್ತೀರೋ, ಹಿಂದಿಯಲ್ಲಿಯೇ ನೋಡಲು ಇಷ್ಟಪಡುತ್ತೀರೋ ಎಂಬುದನ್ನು ತಿಳಿಸಿರಿ.

  To,
  Mr. K.V. Chandrasekhara,
  President,
  The Karnataka Film Chamber of Commerce,
  No.28, 1st Main,
  Crescent Road,
  High Grounds,
  Bangalore - 560 001.

  Dear Sir,

  I have produced a Television show called Satyamev Jayate. It is weekly program of a total 13 episodes. In each episode we try to shed light on one social issue, which affects every Indian. Because this show is about social issues, I am very keen that language should not be a barrier for any Indian to watch this show. The original language of this show is Hindi. We are dubbing the show in number of languages so that people who are not comfortable with Hindi can also participate and learn about the social issues. I have been informed that your association has an objection to telecast of dubbed content on Kannada channels. I hope and trust that you will not have any objection to this show being dubbed in Kannada and being telecast on Suvarna channel, especially because it deals with social issues.

  Thank you,

  Aamir Khan

  English summary
  Bollywood actor, producer Aamir Khan has written a letter to Karnataka Film Chamber of Commerce (KFCC) president K.V. Chandrasekhara to allow Kannada dubbed version of his Hindi serial Satyamev Jayate to to telecast on Suvarna TV. Should dubbing be allowed?

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more