For Quick Alerts
ALLOW NOTIFICATIONS  
For Daily Alerts

ಡಿಸ್ಕವರಿ ವಾಹಿನಿಯಲ್ಲಿ ಚಿತ್ರದುರ್ಗದ ಕೋತಿ ರಾಜ

By Rajendra
|

ಚಿತ್ರದುರ್ಗದ ಜ್ಯೋತಿ ರಾಜ್ (23) ಭಾರತದ ಸ್ಪೈಡರ್ ಮ್ಯಾನ್ ಎಂದೇ ಜನಜನಿತ. ಈತನನ್ನು ಜನ ಪ್ರೀತಿಯಿಂದ ಕೋತಿ ರಾಜ, ಕೋತಿ ಮನುಷ್ಯ, ಮಂಕಿ ಮ್ಯಾನ್ ಎಂದು ಕರೆಯುತ್ತಾರೆ. ಈ ಬಗ್ಗೆ ಆತನಿಗೇನು ಬೇಸರವೂ ಇಲ್ಲ, ಯಾವುದೇ ನೋವು ಇಲ್ಲ. ಜನ ಹಾಗೆ ಕರೆಯುತ್ತಿದ್ದರೆ ಹೆಮ್ಮೆಯಿಂದ ಬೀಗುತ್ತಾನೆ.

ಚಿತ್ರದುರ್ಗದ ಬಂಡೆಗಲ್ಲುಗಳು, ಕೋಟೆಯನ್ನು ಈತ ಸರಸರನೆ ಹತ್ತುತ್ತಾನೆ. ಅದೂ ಯಾವುದೇ ಪರಿಕರಗಳನ್ನು ಬಳಸದೆ ಬರಿಗೈಯಲ್ಲಿ ಈತ ಕೋತಿಯಂತೆ ಕಟ್ಟಡಗಳನ್ನೇರುತ್ತಾನೆ. ಮೂಲತಃ ಈತ ತಮಿಳುನಾಡಿನವ. ಜೀವನದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಚಿತ್ರದುರ್ಗದ ಕೋಟೆ ಸರಸರನೆ ಹತ್ತಿದ್ದ.

ಆಗಲೇ ಆತನಿಗೆ ಗೊತ್ತಾಗಿದ್ದು ತನ್ನಲ್ಲಿ ಈ ಶಕ್ತಿ ಇದೆ ಎಂಬ ಸಂಗತಿ. ಅಲ್ಲಿಂದ ಆತ ಹಿಂತಿರುಗಿ ನೋಡಲೆ ಇಲ್ಲ. ಯಾವುದೇ ಗೋಡೆ ಇರಲಿ ಕೋಟೆ ಕೊತ್ತಲ ಬಂಡೆಗಲ್ಲುಗಳೆ ಇರಲಿ ಕೋತಿಯಂತೆ ಸರಸರನೆ ಏರುತ್ತಾನೆ. ಚೆನ್ನೈನಿಂದ ಈತ ಚಿತ್ರದುರ್ಗಕ್ಕೆ ಬಂದಿದ್ದೇ ಒಂದು ಸಾಹಸಗಾಥೆ.

ಚಿತ್ರದುರ್ಗದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಈತ ಜೀವನದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ. ಬೆಟ್ಟದ ಮೇಲಿಂದ ಕೆಳಗೆ ಜಿಗಿದ ಈತ ಬಚಾವಾಗಲು ಟ್ರೈ ಮಾಡಿ ಬದುಕುಳಿದ. ತನ್ನಲ್ಲಿರುವ ಸಂಥಿಂಗ್ ಸ್ಪೆಷಲ್ ಈತನಿಗೆ ಗೊತ್ತಾಗಿದ್ದೇ ಆಗ. ಅಲ್ಲಿಂದ ಕೋತಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಕೆಲವರ್ಷಗಳಲ್ಲೆ ಅವುಗಳಂತೆ ಹತ್ತಲು ಕಲಿತ.

ಈಗ ಈ ಕೋತಿ ರಾಜ ಡಿಸ್ಕವರಿ ಚಾನಲ್‌ನಲ್ಲಿ ತನ್ನ ಚಾಕಚಕ್ಯತೆಯನ್ನು ತೋರಲಿದ್ದಾನೆ. "ಸ್ಟಾನ್ ಲೀಸ್ ಸೂಪರ್ ಹ್ಯೂಮನ್" ಎಂಬ ಸರಣಿ ಸೋಮವಾರ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. "ಜ್ಯೋತಿ ರಾಜ (ಕೋತಿ ರಾಜ) ಅಲ್ಟಿಮೇಟ್ ಕ್ಲೈಂಬರ್-ಸ್ಪೈಡರ್ ಮ್ಯಾನ್ ಆಫ್ ಇಂಡಿಯಾ" ಕಾರ್ಯಕ್ರಮದಲ್ಲಿ ಈತನ ಸಾಹಸಗಳನ್ನು ಕಣ್ತುಂಬಿಕೊಳ್ಳಬಹುದು. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Chitradurga Jyothi Raj (22) is known as India's Spider-man, but he prefers himself be called as "Kothi Manusha" or Monkey Man. He climbs the local fort in Chitradurga, reaches heights of up to 300ft without using a harness. A special programme on wonder boy Jyothi Raj will be aired on Discovery channel on 4th July at 8.30 pm IST.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more