»   » ಗೋದ್ರೇಜ್ ಗೇಮ್ ಆಡಿ ಅಪಾರ್ಟ್‌ಮೆಂಟ್ ಗೆಲ್ಲಿ

ಗೋದ್ರೇಜ್ ಗೇಮ್ ಆಡಿ ಅಪಾರ್ಟ್‌ಮೆಂಟ್ ಗೆಲ್ಲಿ

Posted By:
Subscribe to Filmibeat Kannada

ಗೋದ್ರೇಜ್ ಪ್ರಸ್ತುತ ಪಡಿಸುತ್ತಿರುವ ಹೊಸ ರಿಯಾಲಿಟಿ ಗೇಮ್ ಶೋ "ಗೋದ್ರೇಜ್ ಆಡಿ ಲೈಫ್ ಚೇಂಜ್ ಮಾಡಿ" ಅಕ್ಟೋಬರ್ 2ರಿಂದ ಪ್ರತಿ ಶನಿವಾರ ರಾತ್ರಿ 9ರಿಂದ 10 ಗಂಟೆಯ ತನಕ ನಿಮ್ಮ ನೆಚ್ಚಿನ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಕನ್ನಡದ ಮನಮೋಹಕ ನಟಿ ಭಾವನಾ ನಿರೂಪಿಸಲಿದ್ದಾರೆ.

ಹಿಂದಿ ಭಾಷೆಯಲ್ಲಿ ಪ್ರಸಾರವಾದ ಮೊದಲ ಆವೃತ್ತಿಯ ಯಶಸ್ಸಿನ ಸಂತಸದಲ್ಲಿರುವ ಗೋದ್ರೇಜ್ ಈಗ ಸನ್ ನೆಟ್ ವರ್ಕ್‌ನ ಸಹಯೋಗದಲ್ಲಿ ದಕ್ಷಿಣ ಭಾರತದ ಮೂರು ಪ್ರಮುಖ ಭಾಷೆಗಳಲ್ಲಿ (ಕನ್ನಡ, ತೆಲುಗು ಮತ್ತು ತಮಿಳು) ಎರಡನೆ ಆವೃತ್ತಿಯನ್ನು ಪ್ರಸ್ತುತಪಡಿಸುತ್ತಿದೆ. ಮನೆಯ ಮಾದರಿಯ ಸೆಟ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಈ ಸ್ಪರ್ಧೆಯಲ್ಲಿ ಗೋದ್ರೇಜ್ ಗ್ರಾಹಕರು ತಮ್ಮ ಕುಟುಂಬ ಒಬ್ಬ ಸಂಬಂಧಿಯೊಂದಿಗೆ ಪಾಲ್ಗೊಳ್ಳಬಹುದು. ಗೆದ್ದವರಿಗೆ ಗೋದ್ರೇಜ್ ಪ್ರಾಪರ್ಟೀಸ್‌ನಿಂದ ಒಂದು ಅಪಾರ್ಟ್‌ಮೆಂಟ್ ಬಹುಮಾನ. ಕರ್ನಾಟಕ ಮತ್ತು ಆಂಧ್ರದ ಗ್ರಾಹಕರು ತಾವು ಖರೀದಿಸಿದ ಗೋದ್ರೇಜ್ ಉತ್ಪನ್ನ್ನದ ಬಗ್ಗೆ ಎಸ್ಸೆಂಎಸ್ ಅಥವಾ ಐವಿಆರ್ ಮಾಡುವ ಮೂಲಕ ಗೇಮ್ ಶೋಗೆ ಪ್ರವೇಶ ಪಡೆಯಬಹುದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada