For Quick Alerts
  ALLOW NOTIFICATIONS  
  For Daily Alerts

  ಉದಯಟಿವಿ ಪಾಲಾದ 2011ರ ಹಿಟ್ ಚಿತ್ರಗಳ ರೈಟ್ಸ್

  |
  2011 ರಲ್ಲಿ ಬಿಡುಗಡೆಗೊಂಡು ತುಂಬಿದ ಪ್ರದರ್ಶನ ಕಂಡ ಬಹುತೇಕ ಹೆಚ್ಚಿನ ಚಿತ್ರಗಳ ಟಿವಿ ರೈಟ್ಸ್ ನ್ನು ಉದಯ ಟಿವಿ ತನ್ನ ಮಡಿಲಿಗೆ ಹಾಕಿಕೊಂಡು ಉಳಿದ ವಾಹಿನಿಗಳಿಗೆ ತೀವ್ರ ಪೈಪೋಟಿ ನೀಡಿದೆ. ಇದರಿಂದಾಗಿ ಕಿರುತೆರೆಯಲ್ಲಿ ಚಲನಚಿತ್ರ ಪ್ರದರ್ಶನದಲ್ಲಿ ಈ ವರ್ಷ ಉದಯ ವಾಹಿನಿಯನ್ನು ಹಿಂದಿಕ್ಕುವುದು ಇತರ ವಾಹಿನಿಗಳಿಗೆ ಕಷ್ಟದ ಮಾತು.

  ಮುಂಗಾರುಮಳೆ, ಮಿಲನ ಮುಂತಾದ ಚಿತ್ರಗಳು ಬಿಡುಗಡೆಗೊಂಡಾಗ ಸುವರ್ಣವಾಹಿನಿ ಮತ್ತು ಜೀ ಕನ್ನಡ ವಾಹಿನಿಗಳು ಉದಯ ಟಿವಿಗೆ ಪೈಪೋಟಿ ನೀಡಿ ಟಿವಿ ರೈಟ್ಸ್ ಗಳನ್ನೂ ದಾಖಲೆ ಮೊತ್ತಕ್ಕೆ ಖರೀದಿಸಿದ್ದವು. 2011 ರಲ್ಲಿ ಬಿಡುಗಡೆಗೊಂಡ ಹುಡುಗ್ರು ಮತ್ತು ಪರಮಾತ್ಮ ಚಿತ್ರದ ರೈಟ್ಸ್ ಗಳನ್ನೂ ಬಿಟ್ಟು ಉಳಿದ ಎಲ್ಲಾ ಸೂಪರ್ ಹಿಟ್ ಚಿತ್ರಗಳ ಟಿವಿ ರೈಟ್ಸ್ ಉದಯ ಟಿವಿ ಪಾಲಾಗಿದೆ.

  ಉದಯ ಟಿವಿ ತನ್ನ ಮಡಿಲಿಗೆ ಹಾಕಿಕೊಂಡ 2011 ರ ಯಶಸ್ವಿ ಚಿತ್ರಗಳಲ್ಲಿ ಪ್ರಮುಖವಾಗಿ ಕಳೆದ ವರ್ಷ ಬ್ಲಾಕ್ ಬಸ್ಟರ್ ಚಿತ್ರಗಳಾಗಿ ಹೊರಹೊಮ್ಮಿದ ಸಾರಥಿ ಮತ್ತು ಕೆಂಪೇಗೌಡ ಚಿತ್ರಗಳೂ ಸೇರಿವೆ. ಉಳಿದಂತೆ ವರ್ಷಾಂತ್ಯದಲ್ಲಿ ಬಿಡುಗಡೆಗೊಂಡ ತುಂಬಿದ ಪ್ರದರ್ಶನ ಕಾಣುತ್ತಿರುವ ವಿಷ್ಣುವರ್ಧನ ಮತ್ತು ಶೈಲೂ ಚಿತ್ರಗಳೂ ಸೇರಿವೆ. ಜೋಗಯ್ಯ ಚಿತ್ರ ಕೂಡ ಉದಯ ಟಿವಿ ಪಾಲಾಗಿದೆ.

  ಉಳಿದಂತೆ ಕಳ್ಳ ಮಳ್ಳ ಸುಳ್ಳ, ಕಿರಾತಕ, ಒಲವೇ ಮಂದಾರ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಭದ್ರ, ಜರಾಸಂಧ, ಮರ್ಯಾದೆ ರಾಮಣ್ಣ ಮುಂತಾದ ಚಿತ್ರಗಳು ಸೇರಿವೆ.

  English summary
  Udaya TV has got the TV rights of Super Hit Kannada movies of 2011. This including Kempe Gowda, Sarathi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X