For Quick Alerts
  ALLOW NOTIFICATIONS  
  For Daily Alerts

  ಸದ್ಯದಲ್ಲೆ ಕನ್ನಡಕ್ಕೆ 24/7 ನ್ಯೂಸ್, ಎಂಟರ್‌ಟೈನ್‌ಮೆಂಟ್ ಚಾನಲ್

  By Vinayakaram Kalagaru
  |

  ಕನ್ನಡದಲ್ಲಿ ಚಾನಲ್‌ಗಳು ತಿಂಗಳಿಗೊಂದು ಹುಟ್ಟಿಕೊಳ್ಳುತ್ತಿವೆ. ಒಂದಷ್ಟು ತಂತ್ರಜ್ಞರಿಗೆ ಕೆಲಸಕ್ಕೇನೂ ಕೊರತೆಯಿಲ್ಲ. ಸುದ್ದಿವಾಹಿನಿಗಳು ಬರುತ್ತಲೇ ಇವೆ. ಜನಶ್ರೀ ನ್ಯೂಸ್ ಎಲ್ಲೆಡೆ ಸುದ್ದಿಮಾಡಿದೆ ಮತ್ತೆ ಸುದ್ದಿ ಮಾಡುತ್ತಿದೆ. ಅದೇ ರೀತಿ ಕುಮಾರಸ್ವಾಮಿಯವರ ಎಂಟರ್‌ಟೈನ್‌ಮೆಂಟ್ ಚಾನೆಲ್ ಹೋಗಿ 24 ಗಂಟೆಯ ಸುದ್ದಿವಾಹಿನಿಯಾಗಿ ಬದಲಾಗುತ್ತಿದೆ.

  ಇದೀಗ ಬಂದಿರುವ ಸುದ್ದಿಯಪ್ರಕಾರ ರಾಜ್ ಮ್ಯೂಸಿಕ್ ಕೂಡ ಬರುವ ತರಾತುರಿಯಲ್ಲಿದೆ. ಉದಯಟೀವಿಯ ಹಳೇ ಆಫೀಸ್ ಇದ್ದ ಜಾಗದಲ್ಲಿ(ವಸಂತನಗರ) ರಾಜ್ ಮ್ಯೂಸಿಕ್ ಆಫೀಸ್ ಓಪನ್ ಆಗಿದೆ. ಅದಕ್ಕೆ ಹೆಡ್ ಆಗಿ ಯಾರು ಕೂರಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಉದಯ ಮತ್ತು ಕಸ್ತೂರಿ ವಾಹಿನಿಯಲ್ಲಿ ಒಂದಷ್ಟು ವರ್ಷ ಇದ್ದು, ಹೆಸರು, ದುಡ್ಡು ಮತ್ತು ಸುದ್ದಿ ಮಾಡಿರುವ ಬಾಲಾಜಿ ಅಲಿಯಾಸ್ ಮಾರ್ಕ್ ಬಾಲಾಜಿ ಅವರು ಮುಖ್ಯಸ್ಥರಾಗುವುದು ಬಹುತೇಕ ಖಚಿತವಾಗಿದೆ.

  ಕೆ. ಮಂಜು ಜೊತೆ ಸೇರಿ ಕಿಚ್ಚ ಹುಚ್ಚ, ಒಲವೇ ಜೀವನ ಲೆಕ್ಕಾಚಾರ ಚಿತ್ರಗಳನ್ನು ನಿರ್ಮಿಸಿರುವ ಬಾಲಾಜಿ ಅವರ ಜೊತೆ ಹೆಚ್ಚಿನ ಮಾತುಕತೆ ನಡೆದಿದ್ದು, ಈಗಾಗಲೇ ಕೆಲಸಗಾರರ ನೇಮಕ ನಡೆಯುವ ಹಂತ ತಲುಪಿದೆ. ರಾಜ್ ಮ್ಯೂಸಿಕ್ ಈ ಹಿಂದೆ ಪೂರ್ಣ ಪ್ರಮಾಣದಲ್ಲಿ ಆನ್ ಏರ್ ಆಗಬೇಕಿತ್ತು.

  ಆದರೆ, ಅದು ಇಲ್ಲಿಯವರೆಗೆ ಸುದ್ದಿ ಹಂತಕ್ಕಷ್ಟೇ ಇತ್ತು. ಅದೇ ರಾಜ್ ಈಗ ಪೂರ್ಣಪ್ರಮಾಣದಲ್ಲಿ ಲಾಂಚ್ ಆಗಲು ಸಿದ್ಧತೆ ನಡೆಸುತ್ತಿದೆ. ಒಂದರ ಬೆನ್ನಲ್ಲೇ ನ್ಯೂಸ್ ಹಾಗೂ ಎಂಟರ್‌ಟೈನ್‌ಮೆಂಟ್ ಚಾನಲ್ ಕೂಡ ಬರುಲಿದೆ ಎಂಬ ಸುದ್ದಿಯೂ ಇದೆ!ಅದೇನೇ ಇದ್ದರೂ ಮೀಡಿಯಾ ಮಂದಿಗಂತೂ ಕೈತುಂಬಾ ಕೆಲಸ, ಹೊಟ್ಟೆ ತುಂಬಾ ಸಂಬಳ ಗ್ಯಾರಂಟಿ!

  English summary
  Two more Kannada TV channels Kasthuri News and Raj Music are soon ready to launch in Karnataka. Kasthuri entertainment channel to becoming 24/7 news channel, that has been owned by ex- chief minister H D Kumaraswamy and Raj Music entertainment channels are set to go on air. Anitha Kumaraswamy is Managing Director of Kasthuri Medias Pvt. Ltd. has promised to launch two more 24-hour TV channels, devoted to music and news.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X