For Quick Alerts
  ALLOW NOTIFICATIONS  
  For Daily Alerts

  ಕೋಟ್ಯಾಧಿಪತಿಗೆ ನೂಕುನುಗ್ಗಲು, 4ಲಕ್ಷ ಎಸ್ಎಂಎಸ್

  |
  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಡೆಸಿಕೊಡುವ ಕನ್ನಡ ಕೋಟ್ಯಾಧಿಪತಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸುವರ್ಣ ವಾಹಿನಿಯ ಮೂಲಗಳ ಪ್ರಕಾರ ಇದುವರೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಮೆಸೇಜ್ ಇನ್ ಬಾಕ್ಸ್ ನಲ್ಲಿ ಬಂದು ಬಿದ್ದಿದೆ. ಅಂದಾಜು ದಿನವೊಂದಕ್ಕೆ 20 ಸಾವಿರಕ್ಕೂ ಹೆಚ್ಚು ಮೆಸೇಜ್ ಗಳು ಬರುತ್ತಿವೆಯಂತೆ.

  ಸುವರ್ಣವಾಹಿನಿ ಒಟ್ಟು ಹತ್ತು ಲಕ್ಷ ಎಸ್ಎಂಎಸ್ ಗಳನ್ನು ಪಡೆಯುವ ಗುರಿ ಇಟ್ಟು ಕೊಂಡಿದೆ. ಜನರು ಕಳುಹಿಸುವ ಮೆಸೇಜುಗಳನ್ನು ಕಂಪ್ಯೂಟರಿಗೆ ಫೀಡ್ ಮಾಡಲಾಗುತ್ತದೆ. ಎಷ್ಟೇ ಲಕ್ಷ ನೊಂದಣಿಯಾಗಲಿ, ಅದರಿಂದ 250 ಮಂದಿಯನ್ನು ಮಾತ್ರ ಆಯ್ಕೆ ಮಾಡಲಾಗುವುದು.

  ಗಣಕಯಂತ್ರದ ಮೂಲಕ ಆಯ್ಕೆಯಾಗುವ ಅದೃಷ್ಟವಂತರು ಕೋಟ್ಯಾಧಿಪತಿ ಕಟಕಟೆ ಏರಲು ಅರ್ಹರಾಗುತ್ತಾರೆ. ಪುನೀತ್ ರಾಜ್‌ಕುಮಾರ್ ಕೇಳುವ ಪ್ರಶ್ನೆಗಳಿಗೆ ಸರಿಯುತ್ತರ ನೀಡಿ ಕೋಟ್ಯಾಧಿಪತಿಯಾಗಬಹುದು. ಅದೃಷ್ಟ ಕಡಿಮೆ ಇದ್ದರೆ, ಅಟ್ ಲೀಸ್ಟ್ ಲಕ್ಷಾಧಿಪತಿ ಯಾಕಾಗಬಾರದು.

  ಕಂಪ್ಯೂಟರ್ಜಿ ಆಯ್ಕೆ ಮಾಡುವ 250 ಮಂದಿಯನ್ನು ಚೆನ್ನೈಗೆ ಕರೆಸಲಾಗುತ್ತದೆ. ಅಲ್ಲಿನ ಎವಿಎಂ ಸ್ಟೂಡಿಯೋದಲ್ಲಿ ಚಿತ್ರೀಕರಣ ನಡೆಯುತ್ತದೆ. ಫೆಬ್ರವರಿ 27 ರಿಂದ ಕನ್ನಡದ ಕೋಟ್ಯಾಧಿಪತಿ ಪ್ರಸಾರ ಆರಂಭವಾಗಲಿದೆ.

  English summary
  Over whelming response for Puneeth Rajkumar's Kannadada Kotyadipathi. So far Suvarna TV received over four lacs SMS.
  Wednesday, January 4, 2012, 16:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X