twitter
    For Quick Alerts
    ALLOW NOTIFICATIONS  
    For Daily Alerts

    ಡಿಸೆಂಬರ್ 13ರಿಂದ ಜೀ ಕನ್ನಡದಲ್ಲಿ 'ಒಗ್ಗರಣೆ ಡಬ್ಬಿ'

    By Rajendra
    |

    ನಾಡಿನ ಮಹಿಳೆಯರಿಗಾಗಿ ಜೀ ಕನ್ನಡ ಪ್ರಸಾರ ಮಾಡುತ್ತಿರುವ ಅಚ್ಚುಮೆಚ್ಚಿನ ಅಡುಗೆ ಕಾರ್ಯಕ್ರಮ ಇದೀಗ ಹೊಸ ರೂಪದಲ್ಲಿ ಅನಾವರಣಗೊಳ್ಳಲ್ಲಿದೆ. ಜೀ ಕನ್ನಡದ ಅಡುಗೆ ಕಾರ್ಯಕ್ರಮ ತಂಡ ರಾಜ್ಯದಾದ್ಯಂತ ಸಂಚರಿಸಲಿದ್ದು ವಿವಿಧ ಜಿಲ್ಲೆಗಳ ವಿಶೇಷ ಅಡುಗೆಗಳನ್ನು ಕುರಿತು ಕಾರ್ಯಕ್ರಮ ನಿರ್ಮಿಸಲಿದೆ.
    ಈ ಕಾರ್ಯಕ್ರಮ 'ಒಗ್ಗರಣೆಡಬ್ಬಿ' ಎಂಬ ಹೆಸರಿನಲ್ಲಿ ಇದೇ ತಿಂಗಳ 13ನೇ ತಾರೀಕಿನಿಂದ ಜೀ ಕನ್ನಡದಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೂ ಮಧ್ಯಾಹ್ನ 1 ಗಂಟೆಗೆ ಪ್ರಸಾರ ಕಾಣಲಿದೆ.

    ಈ ಹಿಂದಿನ ಅಡುಗೆ ಕಾರ್ಯಕ್ರಮಗಳಿಗಿಂತಲೂ ಇದು ಭಿನ್ನವಾಗಿದ್ದು ಸಾಂಪ್ರದಾಯಿಕ ಅಡುಗೆಗಳ ಮೇಲೆ ಈ ಕಾರ್ಯಕ್ರಮ ಬೆಳಕು ಚೆಲ್ಲಲಿದೆ. ಹಬ್ಬ ಹರಿದಿನಗಳು ಸೇರಿದಂತೆ ವಿಶೇಷ ದಿವಸಗಳಲ್ಲಿ ತಯಾರಿಸುವ ಅಡುಗೆಗಳು ಹಾಗೂ ವಿವಿಧ ಜಿಲ್ಲೆಯಲ್ಲಿ ತಯಾರಿಸಲಾಗುವ ವಿಶೇಷ ಖಾದ್ಯಗಳನ್ನು ಈ ಕಾರ್ಯಕ್ರಮದಲ್ಲಿ ಪರಿಚಯಿಸಲಾಗುವುದು.

    ಅಡುಗೆ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಜೀ ಸಮೂಹ ಸಂಸ್ಥೆ ಬಹಳ ವರ್ಷಗಳಿಂದಲೂ ಮೊದಲ ಸ್ಥಾನ ಕಾಯ್ದುಕೊಂಡು ಬಂದಿದ್ದು ಕಾನಾಕಜಾನ ಮನೆ ಮಾತಾಗಿದೆ ಈ ನಿಟ್ಟಿನಲ್ಲಿ ಜೀ ಕನ್ನಡದ 'ಒಗ್ಗರಣೆ ಡಬ್ಬಿ'ಯು ಸಹ ಕರ್ನಾಟಕದ ಮನೆ ಮಾತಾಗಲಿದೆ ಎಂದು ಜೀ ಸೌಥ್ ಹೆಡ್ ಡಾ. ಗೌತಮ್ ಮಾಚಯ್ಯ ತಿಳಿಸಿದ್ದಾರೆ. ಕರ್ನಾಟಕದ ವೈವಿಧ್ಯಮಯ ಹಾಗೂ ಸಾಂಪ್ರದಾಯಿಕ ಅಡುಗೆಗಳ ತಯಾರಿ ಹಾಗೂ ವೈಶಿಷ್ಠ್ಯವನ್ನು ಅವುಗಳು ಹುಟ್ಟಿದ ಸ್ಥಳದಿಂದಲೇ ಪರಿಚಯಿಸಲಾಗುವುದು ಎಂದು ಅವರು ಹೇಳಿದರು.

    ಕಾರ್ಯಕ್ರಮ ಸಂಪೂರ್ಣ ಮನೋರಂಜನೋತ್ಮಕವಾಗಿದ್ದು ಪ್ರತಿ ಸಂಚಿಕೆ ಐದು ಭಾಗಗಳನ್ನು ಹೊಂದಿರುತ್ತದೆ. ಈ ನವೀನ ಕಾರ್ಯಕ್ರಮವನ್ನು ಚಲನಚಿತ್ರ ನಟ ಹಾಗೂ ಕಿರುತೆರೆಯ ನಿರೂಪಕ ಲಿಖಿತ್ ಶೆಟ್ಟಿ ನಡೆಸಿಕೊಡಲಿದ್ದಾರೆ. ಈಗಾಗಲೇ ಈ ಕಾರ್ಯಕ್ರಮಕ್ಕೆ ವೈವಿಧ್ಯತೆಯ ಆಗರವೆನಿಸಿರುವ ಸಹ್ಯಾದ್ರಿ ಮಡಿಲಿನ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿಶೇಷ ಸಾಂಪ್ರದಾಯಿಕ ಅಡುಗೆಗಳ ಕುರಿತು ಜೀ ಕನ್ನಡ ತಂಡ ಚಿತ್ರೀಕರಣ ನಡೆಸಿದ್ದು ಕಾರ್ಯಕ್ರಮ ನಿರ್ಮಿಸಿದೆ.

    ಇದೇ ಮಾದರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಜೀ ಕನ್ನಡ ತಂಡ ತಲುಪಲಿದ್ದು ಅಲ್ಲಿನ ಸಾಂಪ್ರದಾಯಿಕ ವಿಶೇಷ ಅಡುಗೆಗಳ ಕುರಿತು ಕಾರ್ಯಕ್ರಮ ನಿರ್ಮಿಸಿ ಪ್ರಸಾರ ಮಾಡಲಿದೆ. ವಿವಿಧ ಜಿಲ್ಲೆ, ತಾಲ್ಲೂಕು ಹಾಗೂ ಮನೆತನದಲ್ಲಿ ವಿಶೇಷವೆನಿಸುವಂತಹ ಸಾಂಪ್ರದಾಯಿಕ ಅಡುಗೆಗಳನ್ನು ರೂಢಿಸಿಕೊಂಡು ಬಂದಿದ್ದರೆ ಈ ಕುರಿತು ನೇರವಾಗಿ ಜೀ ಕನ್ನಡಕ್ಕೆ ತಿಳಿಸಬಹುದಾಗಿದೆ. ಅಂತಹ ಅಡುಗೆಗಳು ವಿಶೇಷತೆ ಹಾಗೂ ವೈಶಿಷ್ಠ್ಯಪೂರ್ಣವಾಗಿದ್ದರೆ ಸಂಬಂಧಿಸಿದವರನ್ನು ಜೀ ಕನ್ನಡ ಸಂಪರ್ಕಿಸಿ ಕಾರ್ಯಕ್ರಮ ನಿರ್ಮಿಸಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು: 97422 77837 ಅಥವಾ 95388 80881.

    ಲಿಖಿತ್‌ಶೆಟ್ಟಿ ಬಗ್ಗೆ: ಪೆರೋಲ್ ಚಿತ್ರದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪರಿಚಿತರಾದ ಲಿಖಿತ್ ಶೆಟ್ಟಿ ಮೂಲತಃ ಮಂಗಳೂರಿನವರು. ತಮ್ಮ ವಿದ್ಯಾರ್ಥಿ ದಿನಗಳಲ್ಲಿಯೇ ಕಿರುತೆರೆಯಲ್ಲಿ ನಿರೂಪಕನಾಗಿ ಸೇರಿಕೊಂಡ ಶೆಟ್ಟಿಗೆ ಅನೇಕ ಕಾರ್ಯಕ್ರಮಗಳನ್ನು ನಿರ್ವಹಿಸಿದ ಅನುಭವವಿದೆ. ಬೆಂಗಳೂರಿನ ನವರಸ ಸ್ಕೂಲ್ ಆಫ್ ಆರ್ಟ್ಸ್ ನಲ್ಲಿ ನಾಟಕಕ್ಕೆ ಸಂಬಂಧಿಸಿದಂತೆ ಡಿಪ್ಲೊಮಾ ಪದವಿ ಪಡೆದಿರುವ ಅವರು ಮಾಯನ್ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಜೊತೆಜೊತೆಗೆ ಜಾಹಿರಾತು ರಂಗದಲ್ಲಿಯೂ ಕೆಲಸ ಮಾಡಿದ ಅನುಭವ ಅವರಿಗಿದೆ.

    English summary
    Zee Kannada is proud to present a Brand New Cookery Show titled ‘Oggarane Dabbi’ (the Spice Box) from 13th of December, 2010. The show will be telecast every Monday to Friday at 1 pm and is designed exclusively for the women of Karnataka.
    Monday, December 6, 2010, 18:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X