For Quick Alerts
  ALLOW NOTIFICATIONS  
  For Daily Alerts

  ವೀಣಾಗೆ ತಾಳಿ ಕಟ್ಟಲು ಎಪ್ಪತ್ತು ಸಾವಿರ ಅರ್ಜಿಗಳು

  By Rajendra
  |

  "ನನ್ನನ್ನು ಮದುವೆಯಾಗುತ್ತೀರಾ?" ಎಂದು ಪಾಕಿಸ್ತಾನಿ ತಾರೆ ವೀಣಾ ಮಲ್ಲಿಕ್‌ರಲ್ಲಿ ಹರಕೆಯಿಟ್ಟ ಪುರುಷ ಪುಂಗವರ ಸಂಖ್ಯೆ ಇದು. 'ವೀಣಾ ಕಾ ವಿವಾಹ್' ಹೆಸರಿನ ರಿಯಾಲಿಟಿ ಶೋಗಾಗಿ ಹರಿದುಬಂದ ಪತ್ರಗಳ ಮಹಾಪೂರವಿದು. ಎನ್‌ಡಿ ಟಿವಿ ಇಮ್ಯಾಜಿನ್‌ನಲ್ಲಿ ಶೀಘ್ರದಲ್ಲೇ ಈ ರಿಯಾಲಿಟಿ ಶೋ ಪ್ರಸಾರವಾಗಲಿದೆ.

  ಈ ಹಿಂದೆ 'ಸ್ವಯಂವರ' ಹೆಸರಿನಲ್ಲಿ ರಾಖಿ ಸಾವಂತ್, ರಾಹುಲ್ ಮಹಾಜನ್, ರತನ್ ರಾಜ್‌ಪುತ್ ರಿಯಾಲಿಟಿ ಶೋ ನಿರ್ವಹಿಸಿದ್ದರು. ಆದರೆ ಅವರ್ಯಾರಿಗೂ ಸಿಗದ ಭಾಗ್ಯ ವೀಣಾಗೆ ಧಕ್ಕಿದೆ. ವೀಣಾ ಮಾಲಿಕ್ ವಿವಾದಾತ್ಮಕ ತಾರೆ ಎಂಬ ಕಾರಣಕ್ಕೋ ಏನೋ ದಾಖಲೆ ಸಂಖ್ಯೆಯ ಅರ್ಜಿಗಳು ಹರಿದು ಬಂದಿವೆ.

  ಅಸ್ಮಿತ್ ಪಟೇಲ್ ಜೊತೆಗಿನ ಕದ್ದುಮುಚ್ಚಿ ಚುಂಬನ, ಆಲಿಂಗನ, ಬಾಹುಬಂಧನ. ಅರೆನಗ್ನ ಫೋಟೋಗಳ ಮೂಲಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು ವೀಣಾ. ಈ ವಿವಾದಗಳೇ ಈಗ ಆಕೆಗೆ ವರವಾಗಿ ಪರಿಣಮಿಸಿವೆ. ಕೇವಲ ಭಾರತದಿಂದಷ್ಟೇ ಅಲ್ಲ, ಪಾಕಿಸ್ತಾನ ಸೇರಿದಂತೆ ಹದಿನಾಲ್ಕು ದೇಶಗಳಿಂದ ವೀಣಾರನ್ನು ಮದುವೆಯಾಗಲು ಅರ್ಜಿ ಗುಜರಾಯಿಸಲಾಗಿದೆ.

  ರಿಯಾಲಿಟಿ ಶೋನ ನಿರ್ವಾಹಕರು ಕೂಡಿ, ಕಳೆದು, ಭಾಗಿಸಿ, ವಿಭಾಗಿಸಿ ಕಡೆಗೆ ನೂರಾ ಹದಿನಾರು ಅರ್ಜಿಗಳನ್ನು ಆಯ್ಕೆ ಮಾಡಿ ವೀಣಾಳ ಕೈಗಿಟ್ಟಿದ್ದಾರೆ. ಅವುಗಳಲ್ಲಿ 16 ಪತ್ರಗಳನ್ನು ವೀಣಾ ಕಸದ ಬುಟ್ಟಿಗೆ ಎಸೆದು ಉಳಿದ ನೂರನ್ನು ಅವರ ಮುಂದಿಟ್ಟಿದ್ದಾರೆ. ಈ ಶೋಗಾಗಿ ವೀಣಾ ಮಲ್ಲಿಕ್ ತೆಗೆದುಕೊಂಡ ಮೊತ್ತವೆಷ್ಟು ಗೊತ್ತೆ? ಅಕ್ಷರಶಃ ನಾಲ್ಕುವರೆ ಕೋಟಿ ರುಪಾಯಿಗಳು.

  ಒಟ್ಟಿನಲ್ಲಿ ವೀಣಾ ತಾಳಿನೇ ಕಟ್ಟಿಸಿಕೊಳ್ಳುತ್ತಾರೋ, ಹಾರ ಬದಲಾಯಿಸಿಕೊಳ್ಳುತ್ತಾರೋ ಅಥವಾ ಉಂಗುರ ಬದಲಾಯಿಸಿಕೊಳ್ಳುತ್ತಾರೋ, ಇಲ್ಲ ರಾಖಿ ಸಾವಂತ್ ತರಹ ಚಳ್ಳೆ ಹಣ್ಣು ತಿನ್ನಿಸುತ್ತಾರೋ ಕಾದು ನೋಡೋಣ. (ಏಜೆನ್ಸೀಸ್)

  English summary
  Pakistani actress Veena Malik has set a record of sorts by receiving more than 70,000 proposals for reality TV show Swayamvar. Veena Malik has certainly hit a jackpot with her stint on Bigg Boss as 71,240 prospects have expressed their desire to marry her on Veena Ka Vivaah - Swayamvar Season 4.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X