»   » ಸುವರ್ಣ 'ಕನ್ನಡದ ಕೋಟ್ಯಾಧಿಪತಿ'ಗೆ ಕ್ಷಣಗಣನೆ

ಸುವರ್ಣ 'ಕನ್ನಡದ ಕೋಟ್ಯಾಧಿಪತಿ'ಗೆ ಕ್ಷಣಗಣನೆ

Posted By:
Subscribe to Filmibeat Kannada
Power Star Puneeth Rajkumar
ಸುವರ್ಣ ವಾಹಿನಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡಲಿರುವ ಕೆಬಿಸಿ ಮಾದರಿಯ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಇಂದಿನಿಂದ (ಮಾರ್ಚ್ 12 ರಿಂದ) ಪ್ರಾರಂಭವಾಗಲಿದೆ. ಕರ್ನಾಟಕದಲ್ಲಿ ಪ್ರಥಮಬಾರಿಗೆ ಈ ಮಾದರಿಯ ಕಾರ್ಯಕ್ರಮ ಸ್ಟಾರ್ ನೆಟ್ ವರ್ಕ್ ನ ಸುವರ್ಣ ವಾಹಿನಿಯಲ್ಲಿ ಪ್ರಾರಂಭವಾಗಲಿದೆ. ಇದಕ್ಕೆ ಕನ್ನಡದ ಹೆಸರಾಂತ ನಟ ಪುನೀತ್ ನಾಯಕ ಹಾಗೂ ನಿರೂಪಕರು.

ಈ ಕಾರ್ಯಕ್ರಮ, ಸೋಮವಾರದಿಂದ ಗುರುವಾರದವರೆಗೆ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಹಿಂದಿಯಲ್ಲಿ ಕೌನ್ ಬನೇಗಾ ಕರೋಡ್ ಪತಿ ನಿರ್ಮಿಸಿದ 'ಬಿಗ್ ಸಿನರ್ಜಿ ಪ್ರೊಡಕ್ಷನ್' ಇದನ್ನು ಕನ್ನಡದಲ್ಲೂ ನಡೆಸಲಿರುವುದು ವಿಶೇಷವಾಗಿದೆ. ಕಳೆದ 12 ವರ್ಷಗಳಲ್ಲಿ ಸಾಕಷ್ಟು ಪ್ರದರ್ಶನ ಕಂಡಿರುವ ಕೆಬಿಸಿ ಕಾರ್ಯಕ್ರಮ, ವಿದೇಶಗಳಲ್ಲೂ ಅಲ್ಲಿನ ಭಾಷೆಗಳಲ್ಲಿ ಪ್ರಸಾರ ಕಂಡಿದೆ.

ಕಾರ್ಯಕ್ರಮದ ಉದ್ದೇಶ ಜನರು ಹಣ ಗಳಿಸುವಂತೆ ಮಾಡುವುದು ಮಾತ್ರವಲ್ಲ, ಬುದ್ದಿವಂತಿಕೆ ಹೆಚ್ಚಾಗುವಂತೆ ಮಾಡಿ ಅವರ ಬದಕನ್ನು ಬದಲಾಗುವಂತೆ ಮಾಡಿ ಉನ್ನತ ಸ್ಥಿತಿಗೆ ಕೊಂಡೊಯ್ಯುವುದು ಎಂದು ಹೇಳಲಾಗಿದೆ. 20 ಲಕ್ಷಕ್ಕೂ ಹೆಚ್ಚು ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. ಇಂದಿನಿಂದ ಪ್ರಾರಂಭವಾಗಲಿರುವ ಈ ಕಾರ್ಯಕ್ರಮದ ಬಗ್ಗೆ ಜನರಿಗೆ ಹೆಚ್ಚಿನ ಕ್ರೇಜ್ ಇದೆ. ಕಾರ್ಯಕ್ರಮ ಯಶಸ್ವಿಯಾಗುವುದು ಗ್ಯಾರಂಟಿ ಎನ್ನಲಾಗುತ್ತಿದೆ. (ಒನ್ ಇಂಡಿಯಾ ಕನ್ನಡ)

English summary
Power Star Puneeth Rajkumar hosting 'Kannadada Kotyadhipati' Programme of Suvarna Channel starts from Today, on 12th March, 2012. This will telecasts Monday to Thursday, 8 pm IST.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada