For Quick Alerts
  ALLOW NOTIFICATIONS  
  For Daily Alerts

  ಉದಯ ಟಿವಿನಲ್ಲಿ ಶನಿವಾರ ನಾನು ಸೂಪರೋ ರಂಗಾ..

  |

  2011ರಲ್ಲಿ ಕನ್ನಡ ಚಿತ್ರೋದ್ಯಮ ಕಂಡ ಎಲ್ಲಾ ಹಿಟ್ ಚಿತ್ರಗಳ ರೈಟ್ಸ್ ಗಳನ್ನು ಹೆಚ್ಚುಕಮ್ಮಿ ತನ್ನ ಮಡಿಲಿಗೆ ಹಾಕಿಕೊಂಡಿದ್ದ ಉದಯವಾಹಿನಿ, ಡಿಸೆಂಬರ್ 2010ರಲ್ಲಿ ಬಿಡುಗಡೆಗೊಂಡು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೆ ಸಾಕು ಸಾಕು ಅನಿಸುವಷ್ಟು ಹಣದ ಹೊಳೆಯನ್ನೇ ಹರಿಸಿದ್ದ ಉಪೇಂದ್ರ ಅಭಿನಯದ ಸೂಪರ್ ಚಿತ್ರದ ಪ್ರಸಾರದ ಹಕ್ಕನ್ನೂ ಪಡೆದುಕೊಂಡಿತ್ತು.

  ಚಿತ್ರ ಬಿಡುಗಡೆಯಾದ 13ತಿಂಗಳ ನಂತರ 'ಸೂಪರ್' ಚಿತ್ರ ಮಕರಸಂಕ್ರಾಂತಿಯ ಪ್ರಯುಕ್ತ ಇದೇ ಶನಿವಾರ (ಜ 14) ಉದಯವಾಹಿನಿಯಲ್ಲಿ ಸಂಜೆ ಆರು ಗಂಟೆಗೆ ಪ್ರಸಾರವಾಗಲಿದೆ. ರಿಯಲ್ ಸ್ಟಾರ್ ನಟಿಸಿ, ಕಥೆ, ಚಿತ್ರಕಥೆ ಹೆಣೆದು ನಿರ್ದೇಶಿಸಿದ ಈ ಚಿತ್ರದಲ್ಲಿ ಕನ್ನಡದಲ್ಲಿ ಇದೇ ಮೊದಲಬಾರಿಗೆ ನಯನತಾರ ನಟಿಸಿದ್ದರು. ಹರಿಕೃಷ್ಣ ಸಂಗೀತ ನೀಡಿದ ಈ ಚಿತ್ರದ ಹಾಡು ಯಕ್ಕಾಮಾಕ್ಕ ಹಿಟ್ ಆಗಿದ್ದು ನಿಮಗೆ ತಿಳಿದೇ ಇದೇ. 20 ಕೋಟಿ ರೂಪಾಯಿ ವೆಚ್ಚದಲ್ಲಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ 50 ಕೋಟಿ ಬಾಚಿತ್ತು.

  ಪೂರ್ಣಿಮಾ ಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ ಅಕ್ಟೋಬರ್ 2010ರಲ್ಲಿ ಬಿಡುಗಡೆಗೊಂಡ ಇನ್ನೊಂದು ಬ್ಲಾಕ್ ಬಸ್ಟರ್ ಚಿತ್ರ ಪುನೀತ್ ಅಭಿನಯದ 'ಜಾಕಿ'. ದುನಿಯಾ ಸೂರಿ ನಿರ್ದೇಶನದ ಈ ಚಿತ್ರ ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಂಡಿತ್ತು. ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ಈ ಚಿತ್ರ ಮೊದಲ 25 ದಿನದಲ್ಲೇ 30 ಕೋಟಿ ರೂಪಾಯಿ ಬಾಚಿತ್ತು. ಈ ಚಿತ್ರ ಎರಡನೇ ಬಾರಿಗೆ ಉದಯ ವಾಹಿನಿಯಲ್ಲಿ ಭಾನುವಾರ (ಜ 15) ಮಧ್ಯಾಹ್ನ ಮೂರು ಗಂಟೆಗೆ ಬಿತ್ತರ ಗೊಳ್ಳಲಿದೆ.

  ವೀಕ್ಷಕರಲ್ಲಿ ವಿ.ಸೂ: ಜಾಕಿ ಚಿತ್ರ ಮೊದಲಬಾರಿ ಉದಯಟಿವಿಯಲ್ಲಿ ಪ್ರಸಾರವಾದಾಗ ಸಿನಿಮಾದೊಳಗೆ ಜಾಹೀರಾತು ಇತ್ತೋ ಅಥವಾ ಜಾಹೀರಾತಿನೊಳಗೆ ಸಿನಿಮಾ ಇತ್ತೋ ಎನ್ನುವ ಮಟ್ಟಿಗೆ ಜಾಹೀರಾತು ಮಯವಾಗಿತ್ತು. ಸೂಪರ್ ಚಿತ್ರ ಕೂಡ ಪ್ರಸಾರದ ಅವಧಿಯಲ್ಲಿ ಇನ್ನೊಂದು ದಾಖಲೆ ಮಾಡುವುದರಲ್ಲಿ ಸಂಶಯವೇ ಇಲ್ಲ.

  English summary
  Upendra starrer Super and Puneeth Rajkumar starrer Jackie movie telecasting on Jan 14th and 15th respectively in Udaya TV.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X