For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಕೋಟ್ಯಾಧಿಪತಿಗೆ ಪುನೀತ್ ಸಂಭಾವನೆಯೆಷ್ಟು?

  |

  ಸಿನಿಮಾವೊಂದಕ್ಕೆ ನಾಯಕರಾಗಿ ಪುನೀತ್ ರಾಜ್ ಕುಮಾರ್ ಮೂರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಅನ್ನೋದು ಹೊಸ ವಿಷಯವಲ್ಲ. ಆದರೆ, ಈಗ ಪ್ರಸಾರವಾಗುತ್ತಿರುವ 'ಸುವರ್ಣ' ವಾಹಿನಿಯ 'ಕನ್ನಡದ ಕೋಟ್ಯಧಿಪತಿ'ಕಾರ್ಯಕ್ರಮಕ್ಕೆ ಅವರು ಅದರ ಡಬ್ಬಲ್, ಅಂದರೆ ಆರು ಕೋಟಿ ರೂಪಾಯಿ ಪಡೆದಿದ್ದಾರೆ. ಕನ್ನಡದ ನಟನೊಬ್ಬ ಕಿರುತೆರೆಯಲ್ಲಿ ಪಡೆಯುತ್ತಿರುವ ಅತಿ ದುಬಾರಿ ಸಂಭಾವನೆಯಿದು.

  ಕನ್ನಡದ ಕೋಟ್ಯಾಧಿಪತಿಯಲ್ಲಿ ಒಟ್ಟೂ 40 ಸಂಚಿಕೆಗಳಿವೆ. ಅಂದರೆ ಸಂಚಿಕೆಯೊಂದಕ್ಕೆ ಪುನೀತ್ ಸಂಭಾವನೆ ರು. 15 ಲಕ್ಷಗಳು. ಈಗಾಗಲೇ 8 ಸಂಚಿಕೆಗಳ ಚಿತ್ರೀಕರಣ ಮುಗಿದಿದೆ. 32 ಸಂಚಿಕೆಗಳು ಬಾಕಿ ಇವೆ. ಕನ್ನಡ, ತಮಿಳು ಹಾಗೂ ಮಲೆಯಾಳಂ, ಹೀಗೆ 3 ಭಾಷೆಗಳಲ್ಲಿ ಇದು ಸಿದ್ಧವಾಗುತ್ತಿದ್ದು ಮೂರೂ ಭಾಷೆಗಳ ಚಿತ್ರೀಕರಣ ಚೆನ್ನೈನಲ್ಲಿ ನಡೆಯುತ್ತಿದೆ.

  ಪುನೀತ್‌ ಇಷ್ಟೊಂದು ಸಂಭಾವನೆ ಪಡೆಯುತ್ತಾರಾ ಎಂದು ಆಶ್ಚರ್ಯ ಪಡಬೇಕಾಗಿಲ್ಲ. ಕಾರಣ ತಮಿಳು ನಟ ಸೂರ್ಯ, ಇದೇ ಕಾರ್ಯಕ್ರಮಕ್ಕೆ ರು. 20 ಕೋಟಿ ಪಡೆಯುತ್ತಿದ್ದಾರೆ. ಮಲೆಯಾಳಂ ನಲ್ಲಿ ಇದನ್ನು ನಡೆಸಿಕೊಡುತ್ತಿರುವ ನಟ ಸುರೇಶ್ ಗೋಪಿ. ಅವರ ಸಂಭಾವನೆ ಸದ್ಯಕ್ಕೆ ಸಸ್ಪೆನ್ಸ್. ಮೂರೂ ಭಾಷೆಗಳ ಸಂಚಿಕೆಗಳು ಒಂದಾದ ನಂತರ ಮತ್ತೊಂದರಂತೆ ಚಿತ್ರೀಕರಣಗೊಳ್ಳುತ್ತಿವೆ. (ಒನ್ ಇಂಡಿಯಾ ಕನ್ನಡ)

  English summary
  As the Source, Power Star Puneeth Rajkumar charged Rs. 6 Crores Remuneration to 'Kannadada Kotyadhipati' Programme of Suvarna Channel. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X