»   » ವಾರ್ತೆಗಳು; ಓದುತ್ತಿರುವವರು ಶಂಕರ ಬಿದರಿ!

ವಾರ್ತೆಗಳು; ಓದುತ್ತಿರುವವರು ಶಂಕರ ಬಿದರಿ!

Posted By:
Subscribe to Filmibeat Kannada
Shankar Bidari
ನಮಸ್ಕಾರ, ವಾರ್ತೆಗಳು, ಓದುತ್ತಿರುವವರು ಶಂಕರ ಮಹಾದೇವ ಬಿದರಿ...! ಇದೇನಿದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಕೆಲಸ ಬಿಟ್ಟು ಟಿವಿ ವಾಹಿನಿ ಸೇರಿದರೆ ? ಅಥವಾ ಟಿವಿಯ ಥಳುಕು- ಬಳುಕು ಅವರನ್ನು ಅತೀವವಾಗಿ ಆಕರ್ಷಿಸಿದೆಯೇ? ಅಥವಾ ರಾಜಕಾರಣಿಗಳ ರೀತಿ ಚಾನೆಲ್‌ನಲ್ಲಿ ಮಿಂಚುವ ಕ್ರೇಜಿ ಆಲೋಚನೆಯೇ ?

ಇದು ಬಿದರಿಯವರ ಹೈಟೆಕ್ ಪೊಲೀಸಿಂಗ್. ಜನವರಿ 1ರಂದು ಆಯೋಜಿಸಿದ್ದ ಔತಣಕೂಟದಲ್ಲಿ ನಗರ ಪೊಲೀಸರಿಗೆ ಇದು ತಂತ್ರಜ್ಞಾನದ ವರ್ಷ ಎಂದು ಸೂಚ್ಯ ವಾಗಿ ಹೇಳಿದ್ದ ಬಿದರಿ, ಈಗ ಟಿವಿ ವಾಹಿನಿ ಆರಂಭವನ್ನು ಬುಧವಾರ ಬಹಿರಂಗೊಳಿಸಿದ ಅವರು, 'ದೇಶದಲ್ಲೇ ಮೊದಲ ಬಾರಿಗೆ ಪೊಲೀಸ್ ಇಲಾಖೆಗಾಗಿ ಟಿವಿ ಚಾನೆಲ್ ಆರಂಭಿಸಲು ನಿರ್ಧರಿಸಲಾಗಿದೆ. ಪರವಾನಗಿ ಪಡೆಯಲು ಕೇಂದ್ರ ಸರಕಾರಕ್ಕೆ ಹಾಗೂ ಹಣಕಾಸು ನೆರವಿಗಾಗಿ ರಾಜ್ಯ ಸರಕಾರಕ್ಕೆ ಮನವಿ ಪತ್ರ ಬರೆಯಲಾಗುವುದು" ಎಂದಿದ್ದಾರೆ.

ಫೆ.10ರ ಹೊತ್ತಿಗೆ ಟಿವಿ ಚಾನೆಲ್‌ನ ಫ್ರೇಮ್ ವರ್ಕ್ ಮುಕ್ತಾಯಗೊಳ್ಳುತ್ತದೆ. ಸುಮಾರು 15 ಕೋಟಿ ರೂ. ವೆಚ್ಚ ತಗಲುವ ನಿರೀಕ್ಷೆ ಇದ್ದು, ಪೊಲೀಸ್ ಆಧುನೀಕರಣ ಯೋಜನೆಯಲ್ಲಿ ಹಣಮಂಜೂರು ಮಾಡುವಂತೆ ಸರಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ ಎಂದರು.

ಈ ಚಾನ್‌ಲ್‌ಅನ್ನು ಪೊಲೀಸ್ ಕಂಟ್ರೋಲ್ ರೂಂ ಜತೆ ಸಮನ್ವಯಗೊಳಿಸಲಾಗುವುದು. ಜತೆಗೆ ಎಫ್‌ಎಂ ಚಾನೆಲ್‌ನಲ್ಲೂ ಪ್ರಸಾರ ಮಾಡಲಾಗುವುದು. ಶೇ.25ರಷ್ಟು ಇಲಾಖೆ ಸಿಬ್ಬಂದಿ ಚಾನೆಲ್ ಗೆ ಕೆಲಸ ಮಾಡುತ್ತಾರೆ. ಇನ್ನುಳಿದವರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದರು. ಚಂದನ ಕೇಂದ್ರ ಸರಕಾರಕ್ಕೆ ಸೇರಿದ ಪ್ರಾದೇಶಿಕ ಚಾನೆಲ್. ಇದು ರಾಜ್ಯ ಸರಕಾರಕ್ಕೆ ಸಂಬಂಧಿಸಿದ್ದು, ಸದ್ಯದಲ್ಲೇ ವಾಹಿನಿಗೆ ಸೂಕ್ತ ಹೆಸರು ಇಡಲಾಗುವುದು ಎಂದರು. (ಸ್ನೇಹಸೇತು: ವಿಜಯ ಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada