For Quick Alerts
  ALLOW NOTIFICATIONS  
  For Daily Alerts

  ಬಾಲೆಯರ ರೂಪದಲ್ಲಿ ಎರಡು ಹಾವುಗಳ ಪುನರ್ಜನ್ಮ

  By Rajendra
  |

  ದಶಕಗಳ ಹಿಂದೆ ನಿಧಿಗೋಸ್ಕರ ಯಾರೋ ದುಷ್ಟರು ಎರಡು ಹಾವುಗಳನ್ನು ಕೊಂದು ಹಾಕುತ್ತಾರೆ. ಆ ಎರಡು ಹಾವುಗಳು ಈಗ ನಾಗಲಕ್ಷ್ಮಿ ಮತ್ತು ಪಂಚಮಿ ಬಾಲೆಯರಾಗಿ ಪುನರ್ಜನ್ಮ ತಾಳಿದ್ದಾರೆ. ಈ ಸೋಜಿಗವನ್ನು ನೀವು ಸುವರ್ಣ ವಾಹಿನಿಯಲ್ಲಿ ಇಂದು ಸಂಜೆ 6ಕ್ಕೆ ನೋಡಬಹುದು.

  ಇವರಿಬ್ಬರೂ ಹಿಂದಿನ ಜನ್ಮದಲ್ಲಿ ತಮ್ಮನ್ನು ಕೊಂದವರ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ. ಇದು ಯಾವುದೋ ಸಿನಿಮಾ ಕತೆಯಲ್ಲ. ಇದೊಂದು ಧಾರಾವಾಹಿ ಕತೆ. ಸುವರ್ಣ ವಾಹಿನಿ ಆರಂಭಿಸಿರುವ ಹೊಸ ಸೀರಿಯಲ್ 'ನಾಗಪಂಚಮಿ'ಯ ಕಥಾ ಹಂದರ. ಈ ಧಾರಾವಾಹಿ ಹಲವು ವಿಶೇಷತೆಗಳಿಂದ ಕೂಡಿದೆ. ಇಲ್ಲಿನ ಬಹುತೇಕ ಕಲಾವಿದರು ಹೊಸಬರು.

  ಈ ಧಾರಾವಾಹಿಯ ಪ್ರಧಾನ ಆಕರ್ಷಣೆ ಗ್ರಾಫಿಕ್ಸ್. ಹಲವು ಬಾಲಿವುಡ್ ಚಿತ್ರಗಳಿಗೆ ಗ್ರಾಫಿಕ್ಸ್ ಅಳವಡಿಸಿರುವ ಯೂನಸ್ ಬುಕಾರಿ 'ನಾಗಪಂಚಮಿ'ಗೆ ಕೆಲಸ ಮಾಡಿದ್ದಾರೆ. ಮುಂಬೈ ಕನ್ನಡಿಗ ವಿಘ್ನೇಶ್ ರಾವ್ ಧಾರಾವಾಹಿ ನಿರ್ದೇಶಕರು. ಇವರು ಹಿಂದಿಯ ಹಲವಾರು ಧಾರಾವಾಹಿಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

  ಫೆಬ್ರವರಿ 6ರಿಂದ ಧಾರಾವಾಹಿ ಆರಂಭವಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6ರಿಂದ 6.30ರತನಕ ಈ ಧಾರಾವಾಹಿಯನ್ನು ನೋಡಬಹುದು. ಸಾಂಸಾರಿಕ, ಸಾಮಾಜಿಕ ಕಥಾಹಂದರದ ಧಾರಾವಾಹಿಗಳ ಜೊತೆಗೆ ಇದೊಂದು ವಿಭಿನ್ನ ಧಾರಾವಾಹಿ ಎನ್ನಬಹುದು. (ಒನ್‌ಇಂಡಿಯಾ ಕನ್ನಡ)

  English summary
  Nagapanchami, A new Kannada mega serial starting 6th February 2012 at 6.00 P.M On Asianet Suvarna. Watch Nagapanchami serial on Asianet Suvarna every Monday to Friday at 6.00 P.M IST.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X