»   » ಒಂಭತ್ತನೇ ಬಾರಿ ಜೀ ಕನ್ನಡದಲ್ಲಿ ಕುಣಿಯೋಣ ಬಾರಾ

ಒಂಭತ್ತನೇ ಬಾರಿ ಜೀ ಕನ್ನಡದಲ್ಲಿ ಕುಣಿಯೋಣ ಬಾರಾ

Posted By:
Subscribe to Filmibeat Kannada
Zee Kannada Kuniyonu Bara
ಈಗಾಗಲೆ ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಕುಣಿಯೋಣ ಬಾರಾ' ಎಂಟು ಸೀರೀಸ್‌ಗಳಲ್ಲಿ ಪ್ರದರ್ಶನ ಕಂಡಿದೆ. ಈಗ ಒಂಭತ್ತನೆ ಬಾರಿ ವೀಕ್ಷಕರ ಮುಂದೆ ಬಂದಿದೆ. ಅ.13ರಿಂದ ಪ್ರತಿ ಗುರುವಾರ ಮತ್ತ್ತು ಶುಕ್ರವಾರ ರಾತ್ರಿ 9 ಗಂಟೆಗೆ 'ಕುಣಿಯೋಣ ಬಾರಾ' ಕನ್ನಡಿಗರ ಕಣ್ಮಣಿ ಜೀ ಕನ್ನಡದಲ್ಲಿ ಪ್ರಸಾರ ಪ್ರಾರಂಭಿಸಿದೆ.

ಈ ಬಾರಿಯ ವಿಶೇಷವೆಂದರೆ ಎಂಟು ಮಂದಿ ಕಿರುತೆರೆ ಕಲಾವಿದೆಯರು ಕುಣಿಯಲಿದ್ದಾರೆ. ಗೌತಮಿ, ಶ್ವೇತಾ ಚಂಗಪ್ಪ, ಗ್ರೀಷ್ಮಾ, ಇಳಾ ವಿಟ್ಲ, ಹಂಸ, ಮೋನಿಷಾ, ವೈಷ್ಣವಿ ಹಾಗೂ ಅಂಕಿತಾ ತಂಡದಲ್ಲಿದ್ದಾರೆ. ಇವರೊಂದಿಗೆ ಹೆಜ್ಜೆ ಹಾಕಲು ರಾಜ್ಯದ ನಾನಾ ಭಾಗಗಳ ಹುಡುಗರನ್ನು ಆಯ್ಕೆ ಮಾಡಲಾಗಿದೆ.

ಒಟ್ಟು 34 ಕಂತುಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ಅಂತಿಮವಾಗಿ ಒಂದು ತಂಡ ಕುಣಿಯೋಣ ಬಾರಾ ಟೈಟಲ್ ಗೆಲ್ಲಲಿದೆ. ಚಿತ್ರನಟಿ ನಿಧಿ ಸುಬ್ಬಯ್ಯ ಹಾಗೂ ಮಾಲೂರು ಶ್ರೀನಿವಾಸ್ ಚಿತ್ರದ ತೀರ್ಪುಗಾರರು. ಖ್ಯಾತ ನೃತ್ಯ ನಿರ್ದೇಶಕಿ ಕಲಾ ಮಾಸ್ಟರ್ ಅವರು ನಿರ್ದೇಶಿಸಲಿದ್ದಾರೆ. ಅನಿಲ್ ಅಂಬಾನಿ ಅವರ ಬಿಗ್ ಪ್ರೊಡಕ್ಷನ್ಸ್ ಸಂಸ್ಥೆ ಕಾರ್ಯಕ್ರಮವನ್ನು ನಿರ್ಮಿಸುತ್ತಿದೆ. (ಒನ್‌ಇಂಡಿಯಾ ಕನ್ನಡ)

English summary
"Zee Kannada’s hit dance reality show “Kuniyonu Bara” is back to enthral audience. The ninth season of this hit show premiers on the 13th of Oct 2011 and will be on air every Thursday & Friday 9pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada