»   » 'ಬದುಕು ಜಟಕಾ ಬಂಡಿ'ಯಲ್ಲಿ ರವಿಶಂಕರ್ ಗುರೂಜಿ

'ಬದುಕು ಜಟಕಾ ಬಂಡಿ'ಯಲ್ಲಿ ರವಿಶಂಕರ್ ಗುರೂಜಿ

Posted By:
Subscribe to Filmibeat Kannada
Ravi Shankar Guruji in Baduku Jataka Bandi
ಇಡೀ ವಿಶ್ವಕ್ಕೆ ಜೀವನ ಕಲೆ ಹೇಳಿಕೊಟ್ಟ ಕನ್ನಡಿಗ, ಆಧ್ಯಾತ್ಮಿಕ ಗುರು, ನಡೆದಾಡುವ ದೈವ ರವಿಶಂಕರ್ ಗುರೂಜಿ ಇದೇ ಮೊದಲ ಬಾರಿಗೆ ಕಿರು ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೀ ಕನ್ನಡ ವಾಹಿನಿಯ ಬದುಕು ಜಟಕಾ ಬಂಡಿಯಲ್ಲಿ ತಮ್ಮ ಅಂತರಾಳವನ್ನು ಗುರೂಜಿ ಬಿಚ್ಚಿಟ್ಟಿದ್ದು, ಗುರೂಜಿ ಅವರ ಈ ದಿವ್ಯ ಸಂದರ್ಶನ ಇದೇ ಫೆಬ್ರವರಿ 18 ರ ಗುರುವಾರದಂದು ಸಂಜೆ 6.30 ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

ಈ ಸಂದರ್ಶನದಲ್ಲಿ ಗುರೂಜಿಗಳು ತಮ್ಮ ಬಾಲ್ಯ, ಯೌವನ ಹಾಗೂ ತಮ್ಮ ಆಧ್ಯಾತ್ಮಿಕ ಸೆಳೆತಕ್ಕೆ ಕಾರಣವಾದ ಪ್ರಬಲ ಘಟನೆಗಳನ್ನು ಮನಮುಟ್ಟುವಂತೆ ವಿವರಿಸಿದ್ದಾರೆ. ಜೀವನ ಕಲೆಯ ಆಧ್ಯಾತ್ಮಿಕ ಗುರು ರವಿಶಂಕರ್ ಗುರೂಜಿ ಅವರ ಅಂತರಾತ್ಮದ ಮಾತುಗಳನ್ನು ಇದೇ ಗುರುವಾರ ಸಂಜೆ 6.30 ಕ್ಕೆ ವೀಕ್ಷಕರು ವೀಕ್ಷಿಸಬಹುದಾಗಿದೆ.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಬದುಕು ಜಟಕಾಬಂಡಿ 160 ಯಶಸ್ವಿ ಕಂತುಗಳನ್ನು ಪೂರೈಸಿ ಇದೀಗ ದ್ವಿಶತಕದತ್ತ ದಾಪುಗಾಲಿಡುತ್ತಿದೆ. ತನ್ನ ವೈವಿಧ್ಯಮಯ, ಮನರಂಜನಾ ಕಾರ್ಯಕ್ರಮಗಳಿಂದಾಗಿ ಕನ್ನಡಿಗರ ಕಣ್ಮಣಿ, ಜೀ ಕನ್ನಡ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಹಾಗೂ ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳುವ ಉದ್ದೇಶದಿಂದ ಬದುಕು ಜಟಕಾ ಬಂಡಿ ಆರಂಭಿಸಿತ್ತು. ಆನಂತರ ಕಾರ್ಯಕ್ರಮ ನಾಡಿನಾದ್ಯಂತ ಜನಪ್ರಿಯತೆಗೊಳ್ಳುತ್ತಿದ್ದಂತೆ ಅದರ ಕಾರ್ಯವ್ಯಾಪ್ತಿಯೂ ವಿಸ್ತಾರವಾಯಿತು.

ನೊಂದವರ ಕಣ್ಣೀರು ಒರೆಸುವುದರ ಜೊತೆಗೆ ಸಮಾಜದ ಇನ್ನಿತರ ಕ್ಷೇತಗಳ ಮೇಲೂ ಕ್ಷ ಕಿರಣ ಬೀರುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಿರುವ ಗಣ್ಯ ವ್ಯಕ್ತಿಗಳು ಸಾಗಿ ಬಂದ ಜೀವನ ಪಯಣವನ್ನು ಬದುಕು ಜಟಕಾ ಬಂಡಿಯಲ್ಲಿ ಪ್ರೇಕ್ಷಕರಿಗೆ ಪರಿಚಯಿಸಲಾಗಿದೆ.

ಈಗಾಗಲೇ ಭ್ರಷ್ಟಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಸಂತೋಷ್ ಹೆಗಡೆ, ದಕ್ಷ ಪೊಲೀಸ್ ಅಧಿಕಾರಿ ಶಂಕರ್ ಬಿದರಿ, ಸರಳ ಸಜ್ಜನಿಕೆಯ ರಾಜಕಾರಣಿ ಕಾನೂನು ಸಚಿವ ಸುರೇಶ್ ಕುಮಾರ್, ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಂಥವರು ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಲು ಪಟ್ಟ ಶ್ರಮದ ಹಾದಿಯ ಬಗ್ಗೆ ಪರಿಚಯ ಮಾಡಿಕೊಡಲಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada