Just In
Don't Miss!
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- News
"ಸಿಬಿಐ, ಇಡಿ ಮೂಲಕ ಮೋದಿ ತಮಿಳುನಾಡನ್ನು ನಿಯಂತ್ರಿಸುವ ಪ್ರಯತ್ನದಲ್ಲಿದ್ದಾರೆ"
- Automobiles
2021ರ ಕ್ರೆಟಾ ಕಂಪ್ಯಾಕ್ಟ್ ಎಸ್ಯುವಿ ಕಾರಿನ ಬೆಲೆ ಹೆಚ್ಚಳ ಮಾಡಿದ ಹ್ಯುಂಡೈ
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗೂಬೆ ಕೂರಿಸುವವರ ತಲೆಮೇಲೆ ಗೂಬೆ ಕೂರಿಸಿದ ರಂಗ
ಈ ಎಂಟು ವಾರಗಳ ಅವಧಿಯಲ್ಲಿ ಸುವರ್ಣ ನ್ಯೂಸ್ TRP ಏರಿತೋ ಅಥವಾ ಮತ್ತೆ ಕೆಳಗೆ ಬಿತ್ತೋ ನಮ್ಮಲ್ಲಿ ಅಂಕಿಅಂಶಗಳಿಲ್ಲ. ಅವರು ಕೆಲಸದಿಂದ ತಾವೇ ಬಿಟ್ಟರೋ ಅಥವಾ ಮ್ಯಾನೇಜ್ ಮೆಂಟ್ ಸಾಕಪ್ಪಾ ನಿನ್ನ ಸಹವಾಸ ಎಂದರೋ ಅದೂ ಖಚಿತವಾಗಿಲ್ಲ. ಏಪ್ರಿಲ್ ಕೊನೆಯ ವಾರದಲ್ಲಿ ಇನ್ ಫ್ಯಾಂಟ್ರಿ ರಸ್ತೆಯಲ್ಲಿರುವ ಸುವರ್ಣ ಟವರ್ಸ್ ಲಿಫ್ಟ್ ನಿಂದ ರಂಗ ಕೆಳಗೆ ಜಾರುವ ಸಮಯಕ್ಕೆ ಸರಿಯಾಗಿ ಟಿ ಆರ್ ಪಿ 64 ತಲುಪಿತ್ತು. ಕಾಗೆ ಕುಳಿತುಕೊಳ್ಳುವುದಕ್ಕೂ ಟೊಂಗೆ ಮುರಿದು ಬೀಳುವುದಕ್ಕೂ ಸರಿಹೋಯ್ತು.
ರಂಗ ಅವರ ಮೇಲೆ "ರಾಜಕೀಯ ಪಕ್ಷಪಾತ" ಎಸಗಿದ ಗಂಭೀರ ಆಪಾದನೆಗಳನ್ನು ಹೊರಿಸುವವರು ಇದ್ದಾರೆ. ಪ್ರಮುಖವಾಗಿ ಬಿಜೆಪಿ ಸರಕಾರವನ್ನು ಬೀಳಿಸುವ ನ್ಯೂಸ್ ಅಜೆಂಡ ಹಾಕಿಕೊಂಡದ್ದು ಮತ್ತು ಜೆಡಿಎಸ್ ಪಕ್ಷವನ್ನು ಪ್ರೊಮೋಟ್ ಮಾಡಲು ಪ್ರಯತ್ನಿಸಿದರು ಎನ್ನುವುದು ಆರೋಪ. ಕೆಟ್ಟ ಸರಕಾರ ಇಳಿಸುವುದಕ್ಕೆ ಜರ್ನಲಿಸ್ಟ್ ಇಂಥ ಕೆಲಸಗಳನ್ನು ಮಾಡಬೇಕಾಗ್ತದೆ ಎಂದು ರಂಗ ಅವರನ್ನು ಕವರ್ ಮಾಡುವವರೂ ಇದ್ದಾರೆ. ಪ್ರೂವ್ ಮಾಡುವುದಕ್ಕೆ ಆಧಾರಗಳೇ ಸಿಗುತ್ತಿಲ್ಲ ಎಂದು ಕೈಕೈ ಹಿಸುಕಿಕೊಳ್ಳುವವರೂ ಬೇಜಾನ್ ಇದ್ದಾರೆ.
ರಂಗನಾಥ್ ಅವರು ತಮ್ಮ ಪತ್ರಿಕಾಧರ್ಮವನ್ನೇ ಬಲಿಕೊಟ್ಟರು ಎಂದು ಹೇಳುವವರಿಗಿಂತ ಅವರ ದರ್ಪ, ತನ್ನ ಬಿಟ್ಟರೆ ಮೂರು ಲೋಕದಲ್ಲಿ ಇನ್ನಾರೂ ಇಲ್ಲ ಎಂದು ವರ್ತಿಸುವ ರೀತಿಯಿಂದಾಗಿ ಅವರ ಗುಂಡಿಯನ್ನು ಅವರೇ ತೋಡಿಕೊಂಡರು ಎಂದು ಅಭಿಮತ ವ್ಯಕ್ತಪಡಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಾರೆ. ಆದಾಗ್ಯೂ, ನಿಮ್ಮ ವಿಶ್ವಾಸಿ ಸಿಂಗನನ್ನು ಈ ಮೇಲಿನ ಯಾವ ಗುಂಪೂ ಚಂದಾದಾರನನ್ನಾಗಿ ಮಾಡಿಕೊಂಡಿಲ್ಲ ಎಂಬ ಸಂತೋಷ ಕಾಡುತ್ತಿರುವ ಹೊತ್ತಿಗೆ ರಂಗನಾಥ್ ಎದುರಾದರು. ಹುಡುಕುತ್ತಿದ್ದ ಬ್ರಾಂಡ್ ಕಣ್ಣಿಗೆ ಬಿತ್ತು.
ದಟ್ಸ್ ಕನ್ನಡದ ಜತೆ ಮಾತನಾಡುವ ವೇಳೆ ರಂಗ ಅವರೇ ವಿಷಯ ಎತ್ತಿಕೊಂಡರು. "ನನ್ನ ಮೇಲೆ ಯಾರು ಆಪಾದನೆ ಮಾಡುತ್ತಾರೋ ಅವರಿಗೆಲ್ಲ ಒಂದು ಸವಾಲ್. ಆಪಾದನೆಗಳನ್ನು ಋಜುವಾತುಪಡಿಸುವ ಮಹಾಶಯರು ಇಲ್ಲಿ ಯಾರಾದರು ಇದ್ದರೆ ಪ್ರೂವ್ ಮಾಡಲಿ, ನಾನು ಗಳಿಸಿರುವ "ಎಂಜಲು ಫಲ"ದಲ್ಲಿ ಅರ್ಧ ಪ್ರೂವ್ ಮಾಡಿದವರಿಗೆ, ಇನ್ನರ್ಧ ಗೌರ್ನಮೆಂಟಿಗೆ ಕೊಡುತ್ತೇನೆ. ಇದು ಸರಕಾರಿ ಸವಾಲ್, ಒಂದ್ಸಲ ಎರಡ್ಸಲ, ಮೂರ್ಸಲ!"
ತಮ್ಮ ಸಚ್ಚಾರಿತ್ರ್ಯ ಮತ್ತು ಪತ್ರಿಕೋದ್ಯಮದ ಪಾವನತೆಯನ್ನು ಕಾಪಾಡುವುದಕ್ಕೆ ತಾವು ತಾಳುವ ಶ್ರದ್ಧೆ ಮತ್ತು ಪಡುವ ಶ್ರಮದ ಬಗೆಗೆ ರಂಗ, ದೀರ್ಘವಾಗಿ ಮಾತನಾಡಿದರು. ಹೆಚ್ಚು ಕೊರೆದು ನಿಮ್ಮ ಸಮಯ ಹಾಳುಮಾಡುವುದಿಲ್ಲ. ಊರು ಹರಟೆಯಿಂದ ಹೆಕ್ಕಿದ ಮೂರ್ನಾಲ್ಕು ಪಾಯಿಂಟುಗಳನ್ನು ಬರೆದಿದ್ದೇನೆ.
1) ಕನ್ನಡಪ್ರಭದಲ್ಲಿ ಇದ್ದ ಆರೂ ವರ್ಷಗಳ ಕಾಲ ಸ್ವಯಂಪ್ರೇರಣೆಯಿಂದ ಆಸ್ತಿ ಘೋಷಣೆ ಮಾಡಿಕೊಂಡ ಮೊದಲ ಪತ್ರಕರ್ತ ನಾನು. ಈ ಚಾಳಿಯನ್ನು ಸುವರ್ಣ ಚಾನಲ್ಲಿನಲ್ಲೂ ಮುಂದುವರೆಸಿ ಅಲ್ಲಿ ಎರಡು ವರ್ಷ ಆಸ್ತಿ ಘೋಷಣೆ ಮಾಡಿದ್ದೇನೆ. ನನ್ನಂತೆ ಆಸ್ತಿ ಘೋಷಣೆ ಮಾಡಿದ ಪತ್ರಕರ್ತರು ಇಲ್ಲಿ ಯಾರಿದ್ದಾರೆ?
2) ಆಸ್ತಿ ಘೋಷಣಾ ಪತ್ರದಲ್ಲಿ ನನ್ನ ಹೆಂಡತಿಯ ಕೊರಳ ತಾಳಿಯಲ್ಲಿರುವ ಬಂಗಾರದ ಗ್ರಾಂ ಲೆಕ್ಕವನ್ನು ನಮೂದಿಸಿದ್ದೇನೆ. ಆಸಕ್ತಿ ಇದ್ದವರು ದಾಖಲೆಗಳನ್ನು ಕೆದಕಿ ನೋಡಬಹುದು.
3) ಇವತ್ತಿನ ಪತ್ರಿಕೋದ್ಯಮ ನಡೆಯುತ್ತಿರುವ ರೀತಿ ತುಂಬಾ disgusting ಆಗಿದೆ. ಈ ಸಮಯದಲ್ಲಿ ಪತ್ರಿಕೋದ್ಯಮವನ್ನು ಆಳುತ್ತಿರುವವರು ಪತ್ರಕರ್ತರಲ್ಲ, ಅವರನ್ನು ಕೆಲಸಕ್ಕೆ ನೇಮಿಸಿಕೊಂಡ ಉದ್ಯೋಗಪತಿಗಳೂ ಅಲ್ಲ. ಹಾಗಾದರೆ ಇನ್ಯಾರು"
4) ಮ್ಯಾನೇಜ್ ಮೆಂಟ್ ನೇಮಿಸಿಕೊಂಡಿರುವ ಜ್ಯೋತಿಷಿಗಳು.
ರಂಗ ಅವರ ಮುಂದಿನ ನಡೆ ನುಡಿಗಳೇನು? ಒಂದು ಚಿಕ್ಕ ಬ್ರೇಕ್ ನಂತರ...